ಬೆಂಗಳೂರು, (ಜ.26): ಮಾಜಿ ಸಿಎಂ ಎಚ್‌.ಡಿ ಕುಮಾರಸ್ವಾಮಿಗೆ ಕೊಲೆ ಬೆದರಿಕೆ ವಿಚಾರ ಸುಳ್ಳು ಸುದ್ದಿ ಎಂದು ಸಚಿವ ಆರ್.ಅಶೋಕ್ ಹೇಳಿದ್ದರೆ, ಮತ್ತೊಂದೆಡೆ ಕುಮಾರಸ್ವಾಮಿಗೆ ಝಡ್ ಪ್ಲಸ್ ಸೆಕ್ಯುರಿಟಿಗೆ ಶಿಫಾರಸು ಮಾಡೋಣ ಎಂದು ಚಿಕ್ಕಬಳ್ಳಾಪುರ ಶಾಸಕ ಡಾ.ಕೆ ಸುಧಾಕರ್ ವ್ಯಂಗ್ಯವಾಡಿದ್ದಾರೆ.

ಕುಮಾರಸ್ವಾಮಿ ಅವರು ಬಹಳ ಸರಳವಾಗಿ ಇದ್ದವರು.‌ ಅವರಿಗೆ ಕೊಲೆ ಬೆದರಿಕೆ ಇದೆ ಎಂಬ ವಿಚಾರ ನಿಮ್ಮಿಂದಲೇ(ಮಾಧ್ಯಮ) ನನಗೆ ಗೊತ್ತಾಗಿದೆ. ಯಾರಿಂದ ಬೆದರಿಕೆ ಇದೆ ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದರು.

'ಮಾಜಿ ಸಿಎಂಗೆ ಬೇಕಾದ ಭದ್ರತೆ ಎಚ್‌ಡಿಕೆಗೆ ಇದೆ, ಬೆದರಿಕೆ ಇದ್ರೆ ದೂರು ನೀಡಲಿ'

ನಾನು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುತ್ತೇನೆ. ಝಡ್ ಪ್ಲಸ್ ಸೆಕ್ಯುರಿಟಿ ನೀಡಬೇಕೆಂದು ರಾಜ್ಯ ಸರ್ಕಾರದ ಮೂಲಕ ಶಿಫಾರಸ್ಸು ಮಾಡಲಾಗುವುದು ಎಂದು ವ್ಯಂಗ್ಯ ಮಾಡಿದರು.

ಇನ್ನು ಮತ್ತೊಂದು ಕಡೆ ಕಂದಾಯ ಸಚಿವ ಅಶೋಕ್ ಮಾತನಾಡಿದ್ದು, ಕುಮಾರಸ್ವಾಮಿಯವರು ಊರಿಗೆಲ್ಲಾ ಬೆದರಿಕೆ ಹಾಕಬಹುದು. ಆದರೆ ಯಾರಾದರೂ ಅವರಿಗೆ ಬೆದರಿಕೆ ಹಾಕಲು ಸಾಧ್ಯನಾ. ಅವರಿಗೆ ಬೆದರಿಕೆ ಬಂದರೆ ಕಾನೂನಿದೆ ಪೊಲೀಸರಿದ್ದಾರೆ. ಅವರು ಸಿಎಂ ಆಗಿದ್ದವರು, ಯಾರಿಗೆ ದೂರು ನೀಡಬೇಕು ಎಂಬುವುದು ಅವರಿಗೆ ಗೊತ್ತಿದೆ ಎಂದರು.

ಎಚ್‌ಡಿಕೆ, ನಿಜಗುಣಾನಂದ ಶ್ರೀ ಸೇರಿ 15 ಜನರಿಗೆ ಜೀವಬೆದರಿಕೆ!