ಯೂಟರ್ನ್ ಹೊಡೆದ ಬಿಜೆಪಿ ಶಾಸಕ ಶ್ರೀಮಂತ ಪಾಟೀಲ್

* ಯೂಟರ್ನ್ ಹೊಡೆದ ಬಿಜೆಪಿ ಶಾಸಕ  ಶ್ರೀಮಂತ ಪಾಟೀಲ್
* ಬಿಜೆಪಿಗೆ ಬರುವ ಮೊದಲು ನನಗೆ ಹಣದ ಆಫರ್ ನೀಡಲಾಗಿತ್ತು ಎಂದಿದ್ದ ಶ್ರೀಮಂತ ಪಾಟೀಲ್
* ಇದೀಗ ಶ್ರೀಮಂತ ಪಾಟೀಲ್​ರಿಂದ ಉಲ್ಟಾ ಹೇಳಿಕೆ

BJP MLA shrimant patil u turned for His Operation Kamala Statement rbj

ಬೆಳಗಾವಿ, (ಸೆ.12): ಕಾಂಗ್ರೆಸ್​ನಿಂದ ಬಿಜೆಪಿಗೆ ಬರಲು ಹಣದ ಆಫರ್ ನೀಡಿದ್ದರು ಎಂದಿದ್ದ ಮಾಜಿ ಸಚಿವ ಮತ್ತು ಶಾಸಕ ಶ್ರೀಮಂತ ಪಾಟೀಲ್ ಇದೀಗ ಯೂಟರ್ನ್ ಹೊಡೆದಿದ್ದಾರೆ.

ಬಿಜೆಪಿಗೆ ಬರುವ ಮೊದಲು ನನಗೆ ಹಣದ ಆಫರ್ ನೀಡಲಾಗಿತ್ತು ಶ್ರೀಮಂತ ಪಾಟೀಲ್ ಹೇಳಿದ್ದರು. ಇದು ಪಕ್ಷಕ್ಕೆ ಹಾಗೂ ಬಿಜೆಪಿ ನಾಯಕರಿಗೆ ಮುಜುಗರವಾಗವಂತೆ ಮಾಡಿತ್ತು.  ಅಲ್ಲದೇ ಶ್ರೀಮಂತ ಪಾಟೀಲ್ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಇದರಿಂದ ಎಚ್ಚೆತ್ತ ಶ್ರೀಮಂತ ಪಾಟೀಲ್ ಇದೀಗ ಉಲ್ಟಾ ಹೊಡೆದಿದ್ದಾರೆ.

ಕಾಂಗ್ರೆಸ್‌ ತೊರೆದು ಬಿಜೆಪಿ ಸೇರೋವಾಗ ಹಣದ ಆಫರ್‌: 'ಕಮಲ' ನಾಯಕನ ಸ್ಫೋಟಕ ಹೇಳಿಕೆ

ಇಂದು (ಸೆ.12) ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀಮಂತ ಪಾಟೀಲ್, ಆಪರೇಷನ್ ಕಮಲದ ವೇಳೆ ಯಾರೂ ನನಗೆ ಹಣದ ಆಮಿಷ ನೀಡಿರಲಿಲ್ಲ. ನಾನು ಬಿಜೆಪಿಯ ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದೆ. ಏನು ಅಪೇಕ್ಷೆ ಇಟ್ಟುಕೊಂಡು ಬಿಜೆಪಿಗೆ ಬರುತ್ತೀರಿ ಎಂದು ಕೇಳಿದ್ದರು. ನನ್ನದು ಯಾವುದೇ ಅಪೇಕ್ಷೆ ಇಲ್ಲವೆಂದು ಅವರಿಗೆ ತಿಳಿಸಿದ್ದೆ ಎಂದರು.

 ಒಳ್ಳೆಯ ಸ್ಥಾನಮಾನ ನೀಡುವಂತೆ ಮಾತ್ರ ಕೇಳಿಕೊಂಡಿದ್ದೆ. ಪ್ರಧಾನಿ ಮೋದಿಯವರ ಕೆಲಸ ಮತ್ತು ಬಿಜೆಪಿಯ ವಿಚಾರಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದ್ದೆ ಎಂದು ಹೇಳುವ ಮೂಲಕ ಬಿಜೆಪಿಯ ಹಣದ ಆಫರ್ ಹೇಳಿಕೆ ಬಗ್ಗೆ ಶ್ರೀಮಂತ ಪಾಟೀಲ್ ಯೂಟರ್ನ್ ತೆಗೆದುಕೊಂಡಿದ್ದಾರೆ.

Latest Videos
Follow Us:
Download App:
  • android
  • ios