ಹಲವಾರು ಮಹಾನುಭಾವರು ಕರ್ನಾಟಕ ರಾಜ್ಯ ಕಟ್ಟಿದ್ದಾರೆ. ಸಿ.ಡಿ. ಶಿವುನಂತಹವರು ಸಿಎಂ ಆದರೆ, ರಾಜ್ಯದ ಮುಂದಿನ ಹಂತದ ಬಗ್ಗೆ ಪ್ರಮುಖ ರಾಜ ಕೀಯ ಪಕ್ಷಗಳು ವಿಚಾರ ಮಾಡುವ ಸನ್ನಿವೇಶವಿದೆ. ರಾಜ್ಯ ಉಳಿಸಬೇಕಿದೆ. ಸಿ.ಡಿ. ಶಿವು ಭ್ರಷ್ಟಾಚಾರ ದಲ್ಲಿ ತೊಡಗಿದ್ದು, ಅವರು ಸಿಎಂ ರೇಸ್‌ನಲ್ಲಿದ್ದರೆ ರಾಜ್ಯ ಅಧೋಗತಿಗೆ ಹೋಗುತ್ತದೆ ಎಂದು ಭವಿಷ್ಯ ನುಡಿದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ 

ಬೆಳಗಾವಿ(ಆ.18): ಸಿ.ಡಿ. ಶಿವುನಂತವರು ಮುಖ್ಯಮಂತಿಯಾದರೆ ರಾಜ್ಯ ಅಧೋಗತಿಗೆ ಹೋಗುತ್ತದೆ. ಕಾಂಗ್ರೆಸ್ ಸರ್ಕಾರ ಎರಡೇ ದಿನದಲ್ಲಿ ಪತನವಾಗುತ್ತದೆ ಎಂದು ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಹೇಳಿದರು. 

ಬೆಳಗಾವಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, 'ಹಲವಾರು ಮಹಾನುಭಾವರು ಕರ್ನಾಟಕ ರಾಜ್ಯ ಕಟ್ಟಿದ್ದಾರೆ. ಸಿ.ಡಿ. ಶಿವುನಂತಹವರು ಸಿಎಂ ಆದರೆ, ರಾಜ್ಯದ ಮುಂದಿನ ಹಂತದ ಬಗ್ಗೆ ಪ್ರಮುಖ ರಾಜ ಕೀಯ ಪಕ್ಷಗಳು ವಿಚಾರ ಮಾಡುವ ಸನ್ನಿವೇಶವಿದೆ. ರಾಜ್ಯ ಉಳಿಸಬೇಕಿದೆ. ಸಿ.ಡಿ. ಶಿವು ಭ್ರಷ್ಟಾಚಾರ ದಲ್ಲಿ ತೊಡಗಿದ್ದು, ಅವರು ಸಿಎಂ ರೇಸ್‌ನಲ್ಲಿದ್ದರೆ ರಾಜ್ಯ ಅಧೋಗತಿಗೆ ಹೋಗುತ್ತದೆ ಎಂದು ಭವಿಷ್ಯ ನುಡಿದರು. 

ನಮ್ಮೊಳಗೆ ಭಿನ್ನಭಿಪ್ರಾಯ ಬೇಡ: ಯತ್ನಾಳ್‌, ರಮೇಶ್‌ಗೆ ರೇಣುಕಾಚಾರ್ಯ ಮನವಿ

ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯೆ ನೀಡಲ್ಲ ಎಂದರು.