ಹುಲಿಯಂತಿದ್ದ ಸಿದ್ದು ಈಗ ಇಲಿ ಆಗಿದ್ದಾರೆ, ಅವರ ಈಗಿನ ಸ್ಥಿತಿ ನೋಡಿದರೆ ಅಯ್ಯೋ ಎನಿಸುತ್ತೆ: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ನಮಗೆ ಗೌರವವಿದೆ. ಆದರೆ ವಿಜಯೇಂದ್ರ ನಾಯಕತ್ವವನ್ನು ನಾವು ಒಪ್ಪಲ್ಲ. ಈ ಕುರಿತು ಪಕ್ಷ ವರಿಷ್ಠರಿಗೂ ಸ್ಪಷ್ಟಪಡಿಸಲಾಗಿದ್ದು, ವಿಜಯೇಂದ್ರ ಇರುವ ಕಡೆ ನಾವು ಹೋಗಲ್ಲ. ಡಿಸೆಂಬರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗುವ ನಿರೀಕ್ಷ ಯನ್ನು ಹೊಂದಿರುವೆ ಎಂದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ
ರಾಯಚೂರು(ನ.12): ಹುಲಿಯಂತಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಕಾಂಗ್ರೆಸ್‌ನಲ್ಲಿ ಇಲಿ ಆಗಿದ್ದಾರೆ. ಎಂದು ಜಾರಕಿ ಅವರ ಪರಿಸ್ಥಿತಿ ಕಂಡರೆ ಅಯ್ಯೋ ಎನಿಸುತ್ತಿದೆ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಲೇವಡಿ ಮಾಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಹಿಂದೆ ಎಲ್ಲ ಸಮುದಾಯಗಳ ಪರ ಕಾಳಜಿ, ಯಾವುದೇ ಜಾತಿ, ಧರ್ಮದ ಪರವಾಗಿ ನಿಲ್ಲದೇ ಸರ್ವ ಜನಾಂಗದ ಅಭಿವೃದ್ದಿಯ ವಿಚಾರ ಹೊಂದಿದವರು ಇಂದು ಒಂದು ಧರ್ಮದವರ ಪರ ನಿಂತಿರುವುದು ವಿಪರ್ಯಾಸ ಎಂದರು.
ಯತ್ನಾಳ್, ಜಾರಕಿಹೊಳಿ ಹೇಳಿಕೆಗೆ ಕಿಮ್ಮತ್ತಿಲ್ಲ, ಅವರ ಆಟ ಜಾಸ್ತಿ ದಿನ ನಡೆಯಲ್ಲ: ವಿಜಯೇಂದ್ರ
ವಿಜಯೇಂದ್ರ ನಾಯಕತ್ವ ಒಪ್ಪಲ್ಲ
ಯಡಿಯೂರಪ್ಪ ಬಗ್ಗೆ ನಮಗೆ ಗೌರವವಿದೆ. ಆದರೆ ವಿಜಯೇಂದ್ರ ನಾಯಕತ್ವವನ್ನು ನಾವು ಒಪ್ಪಲ್ಲ ಜಾರಕಿಹೊಳಿ ತಿಳಿಸಿದರು. ಈ ಕುರಿತು ಪಕ್ಷ ವರಿಷ್ಠರಿಗೂ ಸ್ಪಷ್ಟಪಡಿಸಲಾಗಿದ್ದು, ವಿಜಯೇಂದ್ರ ಇರುವ ಕಡೆ ನಾವು ಹೋಗಲ್ಲ. ಡಿಸೆಂಬರ್‌ನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ಆಗುವ ನಿರೀಕ್ಷ ಯನ್ನು ಹೊಂದಿರುವೆ ಎಂದರು.
ನಮ್ಮ ಹೋರಾಟ ಬಿಜೆಪಿ ವಿರುದ್ಧವಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು 130 ಕಡೆ ಗೆಲ್ಲಿಸುವ ನಿಟ್ಟಿನಲ್ಲಿ ಸಾಮೂಹಿಕ ನಾಯಕತ್ವದ ವಿಶ್ವಾಸವನ್ನಿಟ್ಟುಕೊಂಡು ನಾನು, ಯತ್ನಾಳ, ಪ್ರತಾಪಸಿಂಹ ಒಂದಾಗಿದ್ದೇವೆ ಎಂದರು.