Asianet Suvarna News Asianet Suvarna News

ಮತ್ತೆ ಮುಂಬೈ ಅಡ್ಡಕ್ಕೆ ಜಾರಕಿಹೊಳಿ, ರಾಜ್ಯ ರಾಜಕಾರಣದಲ್ಲಿ ಹಲ್ ಚಲ್ ಎಬ್ಬಿಸಿದ ಸಾಹುಕಾರ

* ರಾಜ್ಯ ರಾಜಕಾರಣದಲ್ಲಿ ಸಂಚನ ಮೂಡಿಸುತ್ತಿರುವ ಜಾರಕಿಹೊಳಿ
* ಮತ್ತೆ ಮುಂಬೈ ಅಡ್ಡಕ್ಕೆ ತೆರಳಿದ ರಮೇಶ್ ಜಾರಕಿಹೊಳಿ
* ಮುಂಬೈಯಿಂದಲೇ ಶುರುವಾಗುತ್ತಾ ಸಾಹುಕಾರನ ಆಟ

BJP MLA Ramesh jarkihoLi Meets devendra fadnavis at Mumbai rbj
Author
Bengaluru, First Published Jun 21, 2021, 3:25 PM IST

ಬೆಂಗಳೂರು/ಮುಂಬೈ, (ಜೂನ್.21): ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಯ ಪ್ರಹಸನಗಳು ನಡೆಯುತ್ತಿವೆ. ಇದರ ಮಧ್ಯೆ  ಶಾಸಕ ರಮೇಶ್ ಜಾರಕಿಹೊಳಿ ಸದ್ಯ ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.

ರಾಸಲೀಲೆ ಸಿ.ಡಿ. ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಮರೆಯಾಗಿದ್ದ ರಮೇಶ್ ಜಾರಕಿಹೊಳಿ ಮುಂಬೈನಲ್ಲಿ ಪ್ರತ್ಯಕ್ಷರಾಗಿದ್ದಾರೆ.

ಹೌದು...ಈ ಹಿಂದೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಉರುಳಿಸಲು ರಮೇಶ್ ಜಾರಕಿಹೊಳಿ ಇದೇ ಮುಂಬೈ ಅನ್ನು ಅಡ್ಡವಾಗಿಸಿಕೊಂಡಿದ್ದರು. ಇದೀಗ ಮತ್ತೆ ಅದೇ ಅಡ್ಡದಲ್ಲಿ ಕುಳಿತ ಚದುರಂಗದಾಟ ಆಡಲು ಮುಂದಾಗಿದ್ದು, ರಾಜ್ಯ ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಬಿಜೆಪಿಯಲ್ಲಿ ಮತ್ತೊಂದು ಅನಿರೀಕ್ಷಿತ ಬೆಳವಣಿಗೆ, ರಾಜ್ಯ ರಾಜಕಾರಣದಲ್ಲಿ ಸಂಚಲನ

 ಸದ್ಯ ಮುಂಬೈನಲ್ಲಿ ವಾಸ್ತವ್ಯ ಹೂಡಿರುವ ಸಾಹುಕಾರ ಸಚಿವ, ಸ್ಥಾನ ಪಡೆಯಲು ಲಾಬಿ ಆರಂಭಿಸಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದಕ್ಕೆ ಪೂರಕವೆಂಬಂತೆ ಮಹಾರಾಷ್ಟ್ರದ ಮಾಜಿ ಸಿಎಂ ದೇವೇಂದ್ರ ಫಡ್ನಾವಿಸ್ ಮುಖಾಂತರ ಹೈಕಾಂಡ್‌ ಮೇಲೆ ಒತ್ತಡ ಹೇರಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. 

ಫಡ್ನವಿಸ್ ಜೊತೆ 1 ಗಂಟೆ ಚರ್ಚೆ
BJP MLA Ramesh jarkihoLi Meets devendra fadnavis at Mumbai rbj

ಮುಂಬೈನಲ್ಲಿ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಅವರನ್ನ ಇಂದು (ಸೋಮವಾರ) ಭೇಟಿ ಮಾಡಿದ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಸುಮಾರ್ 1 ಗಂಟೆ ಸುದೀರ್ಘ ಚರ್ಚೆ ನಡೆಸಿದ್ದಾರೆ.  ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುತ್ತಿಲ್ಲ ಎಂಬುದು ಸದ್ಯದ ಅಸಮಾಧಾನ. ಹೀಗಾಗಿಯೇ ರಮೇರ್ ಜಾರಕಿಹೊಳಿ ತೆರೆಮರೆಯಲ್ಲಿ ಸಂಪುಟಕ್ಕೆ ಸೇರಲು ಫಡ್ನವಿಸ್ ಮೂಲಕ ಕಸರತ್ತು ನಡೆಸುತ್ತಿದ್ದಾರೆ.

ರಮೇಶ್ ಜಾರಕಿಹೊಳಿ ಸಿಡಿ ಕೇಸ್‌ನಲ್ಲಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಎಂಟ್ರಿ!

ಸಿಎಂ ಮೇಲೆ ಒತ್ತಡ ಹೇರುವ ತಂತ್ರ
BJP MLA Ramesh jarkihoLi Meets devendra fadnavis at Mumbai rbj

ಸಿ.ಡಿ. ಪ್ರಕರಣವನ್ನು ಬಿ ರಿಪೋರ್ಟ್ ಹಾಕಿದ್ರೆ ಮಿನಿಸ್ಟರ್ ಆಗಬಹುದು ಅನ್ನೋ ಲೆಕ್ಕಾಚಾರ ಹಾಕ್ತಿರುವ ರಮೇಶ್ ಜಾರಕಿಹೊಳಿ ಅವರದ್ದಾಗಿದೆ. ಈ ಹಿನ್ನೆಲೆಯಲ್ಲಿ ಬಿ ರಿಪೋರ್ಟ್ ಹಾಕುವಂತೆ ಸಿಎಂ ಬಿಎಸ್‌ ಯಡಿಯೂರಪ್ಪನವರ ಮೇಲೆ ಒತ್ತಡ ಹೇರಲು ಫಡ್ನವಿಸ್ ಮೊರೆ ಹೋಗಿದ್ದಾರೆ ಎನ್ನಲಾಗಿದೆ.

 ಸಿಡಿ ಪ್ರಕರಣವನ್ನು ಇತ್ಯರ್ಥಗೊಳಿಸಿ ಮತ್ತೊಮ್ಮೆ ಸಿಎಂ ಯಡಿಯೂರಪ್ಪರ ಕ್ಯಾಬಿನೆಟ್​ಗೆ ಮತ್ತೆ ಜಿಗಿಯುವ ಯತ್ನ ಅವರದು. ಜತೆಗೆ ಸಚಿವ ಸ್ಥಾನ ಪಡೆಯಲು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುವ ಪ್ರಬಲ ಅಸ್ತ್ರ ಪ್ರಯೋಗಕ್ಕೂ ರಮೇಶ್ ಜಾರಕಿಹೊಳಿ ಮುಂದಾಗಿದ್ದಾರೆ ಎನ್ನುವ ಮಾಹಿತಿ ಇದೆ.

ಜಾರಕಿಹೊಳಿಗೆ ಅಡ್ಡಗಾಲು ಆಗ್ತಾರಾ ಇಂದಿರಾ ಜೈಸಿಂಗ್?
BJP MLA Ramesh jarkihoLi Meets devendra fadnavis at Mumbai rbj

ಯೆಸ್...ಇತ್ತ ಸಿಡಿ ಪ್ರಕರಣದಲ್ಲಿ ಬಿಪೋರ್ಟ್‌ ಮೂಲಕ ಮತ್ತೆ ಸಚಿವ ಸ್ಥಾನ ಅಲಂಕರಿಸಬೇಕೆನ್ನುವ ಕಸರತ್ತು ನಡೆಸಿದ್ರೆ, ಇತ್ತ ಸಿ.ಡಿ. ಲೇಡಿ ಪರ ಪದ್ಮಶ್ರೀ ಪುರಸ್ಕೃತ ವಕೀಲೆ ಇಂದಿರಾ ಜೈಸಿಂಗ್ ಎಂಟ್ರಿ ಕೊಟ್ಟಿದ್ದಾರೆ. ಸಿ.ಡಿ. ಲೇಡಿ ಪರ ಇಂದಿರಾ ಜೈಸಿಂಗ್ ವಕಾಲತ್ತು ವಹಿಸಿರುವುದು ರೇಶ್ ಜಾರಕಿಹೊಳಿಗೆ ನಡುಕ ಹುಟ್ಟಿಸಿದೆ. ಅಲ್ಲದೇ ಸಚಿವ ಸ್ಥಾನಕ್ಕೂ ಅಡ್ಡಗಾಲು ಆಗುತ್ತಾ ಎನ್ನುವುದನ್ನು ಕಾದುನೋಡಬೇಕಿದೆ.

ಒಟ್ಟಿನಲ್ಲಿ ಸಾಹುಕಾರ ಕ್ಯಾಬಿನೆಟ್‌ಗೆ ಸೇರಲು ಹಾತೊರೆಯುತ್ತಿದ್ರೆ, ಇತ್ತ  ಇಂದಿರಾ ಜೈಸಿಂಗ್ ಎಂಟ್ರಿ ಕೊಟ್ಟಿದ್ದು, ಮುಂದೆ ಏನಾಗಲಿದೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.

"

Follow Us:
Download App:
  • android
  • ios