ಕುಮಾರಣ್ಣನಿಗೆ ಎಷ್ಟು ಮೀಸಲು ಕ್ಷೇತ್ರಗಳಿವೆ ಅನ್ನೋದೇ ಗೊತ್ತಿಲ್ಲ: ರಾಜೂಗೌಡ ತಿರುಗೇಟು

ಕುಮಾರಣ್ಣ ಮತ್ತು ನಾನು 2004ರಲ್ಲಿ ವಿಧಾನಸೌಧಕ್ಕೆ ಬಂದಿದೀವಿ, ಮಾತನಾಡುವ ಸಂದರ್ಭದಲ್ಲಿ ಸ್ವಲ್ಪ ತಿಳಿದುಕೊಂಡು ಮಾತನಾಡಿ ಎಂದ ರಾಜೂಗೌಡ 

BJP MLA Rajugouda React to HD Kumaraswamy Statement grg

ಯಾದಗಿರಿ(ಅ.28):  ಪರಿಶಿಷ್ಟಜಾತಿ ಹಾಗೂ ಪರಿಶಿಷ್ಟಮೀಸಲುಗಳ ಹೆಚ್ಚಳಕ್ಕೆ ದೇವೇಗೌಡರು ಕಾರಣ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಎಚ್‌. ಡಿ. ಕುಮಾರಸ್ವಾಮಿ ಹೇಳಿಕೆಗೆ ತಿರುಗೇಟು ನೀಡಿರುವ ಸುರಪುರ ಶಾಸಕ ಹಾಗೂ ನಗರ ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿಯ ಅಧ್ಯಕ್ಷ ನರಸಿಂಹ ನಾಯಕ್‌ (ರಾಜೂಗೌಡ), ರಾಜ್ಯದಲ್ಲಿ ಮೀಸಲು ಕ್ಷೇತ್ರಗಳು ಎಷ್ಟಿವೆ ಅನ್ನೋದೇ ಕುಮಾರಣ್ಣನಿಗೆ ಗೊತ್ತಿಲ್ಲ ಎಂದು ಟಾಂಗ್‌ ನೀಡಿದ್ದಾರೆ.

ಗುರುವಾರ ಯಾದಗಿರಿಗೆ ಆಗಮಿಸಿದ್ದ ವೇಳೆ ತಮ್ಮನ್ನು ಭೇಟಿಯಾದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಣ್ಣನಿಗೆ ಎಷ್ಟು ಮೀಸಲು ಕ್ಷೇತ್ರಗಳಿವೆ ಎಂಬುದೇ ಗೊತ್ತಿಲ್ಲ. ಅಲ್ಲದೆ, ನಾನು (ರಾಜುಗೌಡ) ಹಾಗೂ ಶ್ರೀರಾಮುಲು ದೇವೇಗೌಡರ ಆಶೀರ್ವಾದದಿಂದ ಗೆದ್ದಿದ್ದಾರೆ ಅಂತ ಹೇಳಿರುವುದು ಅಚ್ಚರಿ ಮೂಡಿಸಿದೆ. ಕುಮಾರಣ್ಣ ಮತ್ತು ನಾನು 2004ರಲ್ಲಿ ವಿಧಾನಸೌಧಕ್ಕೆ ಬಂದಿದೀವಿ, ಮಾತನಾಡುವ ಸಂದರ್ಭದಲ್ಲಿ ಸ್ವಲ್ಪ ತಿಳಿದುಕೊಂಡು ಮಾತನಾಡಿ ಎಂದು ರಾಜೂಗೌಡ ಪ್ರತಿಕ್ರಿಯಿಸಿದರು.

ಕಾಂಗ್ರೆಸ್‌ನಲ್ಲಿ ಸಿಎಂ ಪೈಪೋಟಿ ಕಾಮಿಡಿ ಶೋ: ಶಾಸಕ ರಾಜುಗೌಡ

ಶ್ರೀರಾಮುಲು ಹಾಗೂ ನಾನು ಸಾಮಾನ್ಯ ಕ್ಷೇತ್ರದಲ್ಲಿ ಗೆದ್ದವರು, 2008 ರಲ್ಲಿ ನಮ್ಮ ಕ್ಷೇತ್ರಕ್ಕೆ ಮೀಸಲಾತಿ ಬಂದಿದೆ. 2008 ಕ್ಕೂ ದೇವೆಗೌಡರಿಗೂ ಏನು ಸಂಬಂಧ ಎಂದು ಪ್ರಶ್ನಿಸಿದ ರಾಜೂಗೌಡ, ನಿಮ್ಮ ಸರ್ಕಾರ ಇದ್ದಾಗ ನಮ್ಮ ಸ್ವಾಮೀಜಿ ಧರಣಿ ಕುಳಿತಿದ್ದರೂ ನೀವ್ಯಾಕೆ ಮೀಸಲಾತಿ ಹೆಚ್ಚಳ ಮಾಡಲಿಲ್ಲ, ನಿಮಗೂ ಕಾಲಾವಕಾಶ ಇತ್ತು ಎಂದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಜೋಡು ಗುಂಡಿಗೆಯ ಸಿಎಂ ಎಂದು ಕರೆದ ರಾಜೂಗೌಡ, ಜೋಡು ಗುಂಡಿಗೆ ಸಿಎಂ ಅಂತ ಹತ್ತು ಸಲ ಹೇಳುತ್ತೇವೆ, ಇತಿಹಾಸದಲ್ಲಿಯೇ ಬೊಮ್ಮಾಯಿ ಗಟ್ಟಿನಿರ್ಧಾರ ತೆಗೆದುಕೊಂಡಿದ್ದಾರೆ ಎಂದರು.

ಮಲ್ಲಿಕಾರ್ಜುನ ಖರ್ಗೆಯವರಿಗೆ ಕಾಂಗ್ರೆಸ್‌ ಮೋಸ ಮಾಡಿದೆ:  

ಖರ್ಗೆಯವರನ್ನ ಸಿಎಂ ಮಾಡದ ಕಾಂಗ್ರೆಸ್‌ ರಾಷ್ಟ್ರಾಧ್ಯಕ್ಷರನ್ನಾಗಿ ಮಾಡಿ ಅವರಿಗೆ ಮೋಸ ಮಾಡಿದೆ ಎಂದು ಸುರಪುರ ಶಾಸಕ ನರಸಿಂಹ ನಾಯಕ್‌ (ರಾಜೂಗೌಡ) ಹೇಳಿದ್ದಾರೆ. ಗುರುವಾರ ಯಾದಗಿರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕಾಂಗ್ರೆಸ್‌ ಮೋಸ ಮಾಡಿದೆ. ಖರ್ಗೆ ಅವರನ್ನು ಯಾವತ್ತೋ ಮುಖ್ಯಮಂತ್ರಿ ಮಾಡಬೇಕಿತ್ತು, ಆದರೆ ಮಾಡಲಿಲ್ಲ. ಖರ್ಗೆ ಅವರು ಕಾಂಗ್ರೆಸ್‌ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸ ಮಾಡಿದ್ದಾರೆ. 1972ರಿಂದ ಶಾಸಕರಾಗಿ ಆಯ್ಕೆಯಾಗಿ, ಅಭಿವೃದ್ಧಿ ಕಾರ್ಯ ಮಾಡಿದ್ದಾರೆ. 2013ರಲ್ಲಿ ಹಾಗೂ 2004ರ ಸಮ್ಮಿಶ್ರ ಸರಕಾರದ ಅವ​ಧಿಯಲ್ಲಿ ಖರ್ಗೆ ಅವರನ್ನು ಸಿಎಂ ಮಾಡುವ ಅವಕಾಶವಿತ್ತಾದರೂ ಕಾಂಗ್ರೆಸ್‌ ಅವರನ್ನು ಸಿಎಂ ಮಾಡಲಿಲ್ಲ ಎಂದು ರಾಜೂಗೌಡ ಪ್ರತಿಕ್ರಿಯಿಸಿದರು.

ಖರ್ಗೆ ಅವರಿಗೆ ಪಕ್ಷದ ವತಿಯಿಂದ ಮಾಡುವ ಅಧಿ​ಕಾರ ಮಾತ್ರ ನೀಡಿದ್ದಾರೆ, ರಾಜ್ಯಕ್ಕೆ ಒಳ್ಳೆಯ ಆಡಳಿತ ಮಾಡುವ ಅಧಿ​ಕಾರ ನೀಡಿಲ್ಲ. ಸಿಎಂ ಸ್ಥಾನ ನೀಡಿದರೆ ರಾಜ್ಯಕ್ಕೆ ಒಳ್ಳೆಯದಾಗುತ್ತಿತ್ತು, ಸುಮ್ಮನೆ ರಾಷ್ಟಿ್ರೕಯ ಅಧ್ಯಕ್ಷರನ್ನಾಗಿ ಅ​ಧಿಕಾರ ನೀಡಿದ್ದಾರೆ. ಸಿಎಂ ಆಗುವವರನ್ನು ತಪ್ಪಿಸಿ ಸುಮ್ಮನೆ ಕಾಟಾಚಾರಕ್ಕೆ ಎಐಸಿಸಿ ಅ​ಧಿಕಾರವನ್ನು ಕೊಟ್ಟಿದ್ದಾರೆ ಎಂದು ಶಾಸಕ ರಾಜೂಗೌಡ ಪ್ರತಿಕ್ರಿಯಿಸಿದರು.
 

Latest Videos
Follow Us:
Download App:
  • android
  • ios