ಕೆಲ ಸಚಿವರ ದುರಹಂಕಾರ ಸಹಿಸಿಕೊಳ್ಳಲು ಆಗ್ತಿಲ್ಲ: ಮತ್ತೆ ಗುಡುಗಿದ ರೇಣುಕಾಚಾರ್ಯ
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಅವರು ಕೆಲ ಸಚಿವರ ನಡೆಗೆ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದಾರೆ.
ದಾವಣಗೆರೆ, (ಫೆ.28): ಮಿನಿಸ್ಟರ್ ಅಂದ್ರೆ ದೇವಕೋಕದಿಂದ ಇಳಿದು ಬಂದವರಾ ಎಂದು ಹೊನ್ನಾಳಿ ಬಿಜೆಪಿ ಶಾಸಕರು ಎಂ.ಪಿ, ರೇಣುಕಾಚಾರ್ಯ ಅವರು ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಬಹಿರಂಗವಾಗಿಯೇ ಕಿಡಿಕಾರಿದ್ದರು.
ಇದೀಗ ಮತ್ತೆ ಕೆಲ ಸಚಿವ ನಡೆಗೆ ರೇಣುಕಾಚಾರ್ಯ ಕೆಂಡಾಮಂಡಲರಾಗಿದ್ದು, ಕೆಲವು ಸಚಿವರ ದುರಹಂಕಾರ ನನಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಶಾಸಕಾಂಗ ಪಕ್ಷದ ಸಭೆಯಲ್ಲಿ ನಾನು ಮಾತನಾಡ್ತೇನೆ ಎಂದು ವಿರುದ್ಧ ಗುಡುಗಿದ್ದಾರೆ.
ಮಿನಿಸ್ಟರ್ ಅಂದ್ರೆ ದೇವಲೋಕದಿಂದ ಇಳಿದು ಬಂದವರಾ?: ಸುಧಾಕರ್ ವಿರುದ್ಧ ಬಿಜೆಪಿ ಶಾಸಕ ವಾಗ್ದಾಳಿ
ನಗರದಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು.. ಬಿಜೆಪಿ ಒಳ್ಳೆಯ ಆಡಳಿತ ನೀಡಲಿ ಅನ್ನೋದು ಜನರ ಬಯಕೆ ಆಗಿದೆ. ರಾಜ್ಯದಲ್ಲಿ ಸಿಎಂ ಯಡಿಯೂರಪ್ಪ ಒಳ್ಳೆಯ ಆಡಳಿತ ನಡೆಸುತ್ತಿದ್ದಾರೆ. ಆದರೆ ಕ್ಯಾಬಿನೆಟ್ ಕೆಲವು ಸರಿಯಿಲ್ಲ ಎಂದು ಆರೋಪಿಸದರು.
ಸಚಿವ ಸಂಪುಟದಲ್ಲಿ ಕೆಲವು ಸಚಿವರ ದುರಹಂಕಾರ, ಅವರ ವರ್ತನೆಗಳು, ಸರ್ವಾಧಿಕಾರ ತೋರುತ್ತಿದ್ದಾರೆ. ಬೇರೇ ಕ್ಷೇತ್ರದ ಅಭಿವೃದ್ಧಿಯ ಬಗ್ಗೆ ಅವರಿಗೆ ಕಳಕಳಿ ಇಲ್ಲ. ಜನರು ಅಧಿಕಾರ ಕೊಟ್ಟಿದ್ದು ಜನರ ಸೇವೆಗೆ, ಲಾಭದಾಯಕ ಹುದ್ದೆ ಪಡೆಯೋದಕಲ್ಲ ಎಂದು ಕಿಡಿಕಾರಿದರು.
ಈ ಸರ್ಕಾರ ಬರೋಕೆ ಒಬ್ಬಿಬ್ಬರ ಪಾತ್ರ ಇಲ್ಲ. ರೇಸಾರ್ಟ್ನಲ್ಲಿ ಈ ಬಗ್ಗೆ ನಾನು ಹಮಾಲಿ ಮಾಡಿದ್ದೇನೆ. ಯಡಿಯೂರಪ್ಪ ವರ್ಚಸ್ಸು, ಮೋದಿ ವರ್ಚಸ್ಸು ಬಿಜೆಪಿ ಕಾರ್ಯಕರ್ತರ ಶ್ರಮದಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದು ಪರೋಕ್ಷವಾಗಿ ವಲಸೆ ನಾಯಕರಿಗೆ ರೇಣುಕಾಚಾರ್ಯ ಟಾಂಗ್ ಕೊಟ್ಟರು.