ದಾವಣಗೆರೆ, (ಮಾ.06): ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿ.ಡಿ. ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದರ ಮಧ್ಯೆ  ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಮನೆ ಬಿಟ್ಟು ಓಡಿ ಬಂದು ಮದುವೆಯಾದ ಪ್ರೇಮಿಗಳಿಗೆ ಹರಸುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು...ದಾವಣಗೆರೆ ಜಿಲ್ಲೆ ನ್ಯಾಮತಿ ತಾಲೂಕಿನ ಕುಂಕುವ ಗ್ರಾಮದ ಶಿವಕುಮಾರ್, ಭೂಮಿಕಾ ಎನ್ನುವ ಜೋಡಿ ಹೊನ್ನಾಳಿ ತಾಲೂಕಿನ  ಹಿರೇಕಲ್ಮಠದಲ್ಲಿ ಮದುವೆ ಮಾಡಿಕೊಂಡಿದ್ದಾರೆ. ಆದ್ರೆ, ಇಬ್ಬರು ಮನೆಯವರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಜೋಡಿ ರೇಣುಕಾಚಾರ್ಯ ಮೊರೆ ಹೋಗಿದೆ. 

ಬಳಿಕ ಅವರೇ ಇಬ್ಬರ ಮನೆಯವರುಗೂ ಕರೆ ಮಾಡಿ ವಿಷಯ ತಿಳಿಸಿ ಇಬ್ಬರ ಮನೆಯವರನ್ನೂ ಒಪ್ಪಿಸಿದ್ದು,ನಿಮ್ಮ ಅಪ್ಪ ನನ್ನ ಸ್ನೇಹಿತ, ನೀವು ಚೆನ್ನಾಗಿ ನೋಡಿಕೊಳ್ಳಬೇಕು. ನಿಮ್ಮ ತಂದೆ, ತಾಯಿಗಳನ್ನು ನೀವು ಚೆನ್ನಾಗಿ ನೋಡಿಕೊಳ್ಳಬೇಕು. ನೀನು ಹುಡುಗಿಯನ್ನು ಚೆನ್ನಾಗಿ ನೋಡಬೇಕೆಂದು ಬುದ್ಧಿವಾದ ಹೇಳಿ ಶುಭ ಹಾರೈಸಿದರು. 

ಟೆಸ್ಟ್‌ ಫೈನಲ್‌ಗೆ ಕೊಹ್ಲಿ ಬಾಯ್ಸ್, ತೈಲ ಬೆಲೆ ಇಳಿಕೆಗೆ ಸೌದಿ ಟಿಪ್ಸ್; ಮಾ.6ರ ಟಾಪ್ 10 ಸುದ್ದಿ!

ಈ ಬಗ್ಗೆ ಸ್ವತಃ ರೇಣುಕಾಚಾರ್ಯ ಅವರು ಸಾಮಾಜಿಕ ಜಾಲತಾಣಗಳಲ್ಲಿ ಹೇಳಿಕೊಂಡಿದ್ದಾರೆ. ವಿಡಿಯೋ ವೈರಲ್ ಆಗಿದೆ.