ಯಾರ್ಯಾರ ಮನೆ ಕದ ನಾನ್ಯಾಕೆ ತಟ್ಟಲಿ, ಮೋಟಮ್ಮಗೆ ಎಂ.ಪಿ.ಕುಮಾರಸ್ವಾಮಿ ತಿರುಗೇಟು

* ಮೋಟಮ್ಮ ಹೇಳಿಕೆಗೆ ತಿರುಗೇಟು ಕೊಟ್ಟ ಎಂ.ಪಿ. ಕುಮಾರಸ್ವಾಮಿ
*ಮೋಟಮ್ಮಗೆ ಅರಳು ಮರುಳು, ನಾನ್ಯಾಕೆ ಕಾಂಗ್ರೆಸ್ ಗೆ ಹೋಗಲಿ?
*ಮೋಟಮ್ಮಗೆ  ಬೆಂಗಳೂರಿನಲ್ಲಿ ಎಂ.ಪಿ. ಟಾಂಗ್

BJP MLA MP Kumarasway Hits Back at Congress Leader Motamma rbj


ಬೆಂಗಳೂರು, (ಜೂನ್.16): ಕಾಂಗ್ರೆಸ್ ನಾಯಕಿ ಮೋಟಮ್ಮ ಹೇಳಿಕೆಗೆ  ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ (Mudigere BJP MLA MP Kumaraswamy) ತಿರುಗೇಟು ನೀಡಿದ್ದಾರೆ.

ಈ ಸಂಬಂಧ ಇಂದು(ಗುರುವಾರ) ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ ಎಂದು ಹೇಳಿರುವ ಮೋಟಮ್ಮ ಅವರಿಗೆ ಬುದ್ದಿ ಅರಳು ಮರುಳು ಆಗಿದೆ. ನಾನ್ಯಾಕೆ ಕಾಂಗ್ರೆಸ್ ಗೆ ಹೋಗಲಿ? ಕಾಂಗ್ರೆಸ್ ಕೊನೆಯ ದಿನಗಳನ್ನು ಎಣಿಸುತ್ತಾ ಇದೆ. ಬಿಜೆಪಿ ನನಗೆ ಏನು ಕಡಿಮೆ ಮಾಡಿದೆ? ಅವರು ನನ್ನ ಎದುರೆ ಚುನಾವಣೆಯಲ್ಲಿ ಸೋಲೋದು. ಕಾಂಗ್ರೆಸ್ ನಲ್ಲಿ ಅವರಿಗೆ ಈಗ ಏನೂ ಇಲ್ಲವಾಗಿದೆ. ನನಗೆ ಆಗದೇ ಇರುವವರು ಅವರಿಗೆ ಕುಮ್ಮಕ್ಕು ನೀಡಿದ್ದಾರೆ ಎಂದರು.

ಆತ್ಮಕಥೆಯಲ್ಲಿ ಸಿದ್ದರಾಮನವರ ಬಗ್ಗೆ ಬರೆದುಕೊಂಡ ಮೊಟಮ್ಮ, ಮಾಧ್ಯಮಗಳಿಗೆ ಹೇಳಿದ್ದಿಷ್ಟು

ನಮ್ಮ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಇದೆ. ಕ್ಷೇತ್ರದಲ್ಲಿ ನಾನು ಒಳ್ಳೆಯ ಕೆಲಸಗಳನ್ನು ಮಾಡಿದ್ದೇನೆ. ಇದು ಅವರಿಗೆ ಸಹಿಸಲು ಆಗ್ತಾ ಇಲ್ಲ. ಅವರಿಗೆ ಸವಾಲು ಹಾಕುತ್ತೇನೆ. ತಾಕತ್ ಇದ್ರೆ ಗೆದ್ದು ಬರಲಿ. ಅವರ ಪಕ್ಷದಲ್ಲಿ ಅವರನ್ನು ವೀಕ್ ಮಾಡಿಕೊಂಡು ನಮಗ್ಯಾಕೆ ಮಾತಾಡ್ತಾರೆ? ನಾನು ನನ್ನ ಕ್ಷೇತ್ರದಲ್ಲಿ ಇದ್ದರೂ ಅವರ ಬಗ್ಗೆ ನಾನು ಟೀಕೆ ಮಾಡಲ್ಲ. ಅವರು ದೊಡ್ಡವರು ಹೀಗೆ ಮಾತಾಡಬಾರದು ಎಂದು ಟಾಂಗ್ ಕೊಟ್ಟರು.

ಮೋಟಮ್ಮ ಹೇಳಿದ್ದೇನು?
ಮೂಡಿಗೆರೆಯ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿ ಪಕ್ಷಕ್ಕೆ ಬಂದರೆ ಖಂಡಿತವಾಗಿಯೂ ವಿರೋಧಿಸುತ್ತೇನೆ ಎಂದು ಕಾಂಗ್ರೆಸ್ ನಾಯಕಿ, ಮಾಜಿ ಸಚಿವೆ ಮೋಟಮ್ಮ ಹೇಳಿದ್ದರು. ಈ ಬಾರಿ ನನ್ನ ಮಗಳಿಗೆ ಟಿಕೆಟ್ ಕೊಡುವಂತೆ ಪಕ್ಷದ ವರಿಷ್ಠರಲ್ಲಿ ಕೇಳುತ್ತೇನೆ. ಒಂದು ವೇಳೆ ನನ್ನ ಮಗಳಿಗೆ ಟಿಕೆಟ್ ಕೊಡಲ್ಲ ಅಂದ್ರೂ ಪರವಾಗಿಲ್ಲ, ಅವನಿಗೆ(ಕುಮಾರಸ್ವಾಮಿ) ಟಿಕೆಟ್ ಕೊಡುವುದಕ್ಕಿಂತ ಪಕ್ಷದಲ್ಲಿ ದುಡಿಯುತ್ತಿರುವ ಕೂಲಿ ಕಾರ್ಮಿಕನಿಗೆ ಟಿಕೆಟ್ ಕೊಡಲಿ. ಅದನ್ನ ಬಿಟ್ಟು ಒಂದ್ಸರಿ ಕೈ ಸರಿ ಇಲ್ಲ, ಬಾಯಿ ಚೆನ್ನಾಗಿಲ್ಲ ಅಂತಾ ಗೊತ್ತಾಗಿರೋ ವ್ಯಕ್ತಿಗೆ ಕಾಂಗ್ರೆಸ್ನವರು ಹೇಗೆ ಟಿಕೆಟ್ ಕೊಡ್ತಾರೆ ಅಂತಾ ಬಿಜೆಪಿ ಶಾಸಕ ಎಂ.ಪಿ ಕುಮಾರಸ್ವಾಮಿಯವರನ್ನ ಮೋಟಮ್ಮ ಹೇಳಿದ್ದರು.

ಮೂಡಿಗೆರೆ ಶಾಸಕರು ಸಿದ್ದರಾಮಯ್ಯನವರನ್ನ ಭೇಟಿ ಮಾಡಿರಬಹುದು, ಹಾಗಂತ ಸಿದ್ದರಾಮಯ್ಯ ಅದನ್ನ ಒಪ್ಪಿಕೊಳ್ತಾರಾ? 40 ಪರ್ಸೆಂಟ್ ತೆಗೆದುಕೊಳ್ಳುವ ಬಿಜೆಪಿ ಅವರು ಪಕ್ಷಕ್ಕೆ ಬರಲಿ ಅಂತಾ ಸಿದ್ದರಾಮಯ್ಯ ಹೇಳ್ತಾರಾ? ಬಿಜೆಪಿಯಲ್ಲಿ ಮೇವು ಸಿಕ್ತು ಅಂತಾ ನಮ್ಮಲ್ಲಿಂದ 17 ಜನ ಆ ಪಕ್ಷಕ್ಕೆ ಹೋದ್ರು, ಈಗ ಕಾಂಗ್ರೆಸ್ನಲ್ಲಿ ಮೇವು ಸಿಗುತ್ತೆ ಅಂತಾ ಬರೋರಿಗೆ ಅವಕಾಶ ಕೊಡಲು ಹೇಗೆ ಸಾಧ್ಯವಾಗುತ್ತೆ ಅಂತಾ ಮೋಟಮ್ಮ ಪ್ರಶ್ನೆ ಮಾಡಿದ್ದರು.

 ಈ ಮೂಲಕ ಮುಂದಿನ ಬಾರಿ ಕಾಂಗ್ರೆಸ್ ನಿಂದ ಸ್ಪರ್ಧಿಸಲು ವೇದಿಕೆ ಸಿದ್ದಮಾಡಿಕೊಳ್ತಿರೋ ಎಂ.ಪಿ ಕುಮಾರಸ್ವಾಮಿಗೆ ಡೋಂಟ್ ಕಮ್ ಅನ್ನೋ ಖಡಕ್ ಉತ್ತರವನ್ನ ಕಾಂಗ್ರೆಸ್ನ ಹಿರಿಯ ನಾಯಕಿ, ಮಾಜಿ ಸಚಿವೆ ಮೋಟಮ್ಮ ನೀಡಿದ್ದರು.

Latest Videos
Follow Us:
Download App:
  • android
  • ios