Asianet Suvarna News Asianet Suvarna News

ಮಾಸ್ಕ್ ಹಾಕಿಲ್ಲವೆಂದು ದಂಡ: ಪೊಲೀಸರ ವಿರುದ್ಧ ಕ್ರಮಕ್ಕೆ ಗೃಹ ಸಚಿವರಿಗೆ ಬಿಜೆಪಿ ಶಾಸಕ ಪತ್ರ

ಮಾಸ್ಕ್‌ ಹೆಸರಿನಲ್ಲಿ ಪೊಲೀಸರ ಕಿರಿಕಿರಿ ಜಾಸ್ತಿಯಾಗಿದೆ ಎಂದು ಆರೋಪಗಳು ಕೇಳಿಬರುತ್ತಿವೆ. ಇದೀಗ ಸ್ವತಃ ಬಿಜೆಪಿ ಶಾಸಕರೇ ಪೊಲೀಸ್‌ ವಿರುದ್ಧ ಕ್ರಮಕ್ಕ ಗೃಹ ಸಚಿವರಿಗೆ ಪತ್ರ ಬರೆದಿದ್ದಾರೆ.

BJP MLA MP Kumaraswamy Writes To Home Minister For Action against Police over mask Fined rbj
Author
Bengaluru, First Published Dec 24, 2020, 5:22 PM IST

ಬೆಂಗಳೂರು, (ಡಿ.24): ಕಾರಿನೊಳಗೆ ಮಾಸ್ಕ್ ಹಾಕಿದ್ರೂ ಹಾಕಿಲ್ಲವೆಂದು ಪೊಲೀಸರು ದಂಡ ಹಾಕಿದ್ದಾರೆ ಎಂದು ಸ್ವತಃ ಬಿಜೆಪಿ ಶಾಸಕ  ಎಂ.ಪಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.

"

ಹೌದು.. ಮೂಡಿಗೆರೆ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ. ಕುಮಾರಸ್ವಾಮಿಗೆ ಇಂದು (ಗುರುವಾರ) ಮಧ್ಯಾಹ್ನ(12.30) ಬೆಂಗಳೂರಿನ ಶೇಷಾದ್ರಿಪುರಂನಲ್ಲಿ 250 ರೂ. ದಂಡ ವಿಧಿಸಲಾಗಿದೆ. ಮಾಸ್ಕ್​ ಧರಿಸದ ಹಿನ್ನೆಲೆಯಲ್ಲಿ ಪೊಲೀಸರು ದಂಡ ವಿಧಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾಸ್ಕ್ ಹಾಕಿದ್ರೂ ಹಾಕಿಲ್ಲವೆಂದು ಪೊಲಿಸರು ದಂಢ ವಿಧಿಸಿದ್ದಾರೆ  ಎಂ.ಪಿ. ಕುಮಾರಸ್ವಾಮಿ ಆಕ್ರೋಶಗೊಂಡಿದ್ದು, ಈ ಬಗ್ಗೆ ಪೊಲೀಸರ ವಿರುದ್ಧ ಕ್ರಮಕೈಗೊಳ್ಳುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಮುಂದುವರಿದ ಸುಧಾರ್ ಆಪರೇಷನ್ ಕಮಲ: ಮತ್ತೋರ್ವ ಪ್ರಭಾವಿ ಕೈ ನಾಯಕ ಬಿಜೆಪಿಗೆ

ಬಾಡಿಗೆ ಕಾರೊಂದರಲ್ಲಿ ಎಂ.ಪಿ ಕುಮಾರಸ್ವಾಮಿ ಶೇಷಾದ್ರಿಪುರಂನಿಂದ ಶಾಸಕ ಭವನಕ್ಕೆ ತೆರಳುತ್ತಿದ್ದರು. ಟ್ರಾಫಿಕ್​ನಲ್ಲಿ ಕಾರು ನಿಂತಿತ್ತು. ಈ ವೆಳೆಯಲ್ಲಿ ಕಾರಿನ ಗ್ಲಾಸ್ ಇಳಿಸುವಂತೆ ಪೊಲೀಸರು ಹೇಳಿದ್ದಾರೆ.

ಮಾಸ್ಕ್ ಧರಿಸದ ಹಿನ್ನೆಲೆಯಲ್ಲಿ ದಂಡ ಹಾಕಿದ್ದಾರೆ. ಮಾಸ್ಕ್​ ಧರಿಸಿದ್ದರೂ ದಂಡ ಪಾವತಿಸಲು ತಾಕೀತು ಮಾಡಿದ್ದಾರೆ ಎಂದು ಪೊಲೀಸರ ವಿರುದ್ಧ  ಪತ್ರದಲ್ಲಿ ತಿಳಿಸಿದ್ದಾರೆ. 

Follow Us:
Download App:
  • android
  • ios