ಬೆಳಗಾವಿ, (ಮಾ.05): ರಾಜ್ಯ ರಾಜಕಾರಣದಲ್ಲಿ ಸಿ.ಡಿ. ಸದ್ದು ಜೋರಾಗಿದ್ದು, ನೈತಿಕ ಹೊಣೆ ಹೊತ್ತು ರಮೇಶ್ ಜಾರಕಿಹೊಳಿ ಅವರು ರಾಜೀನಾಮೆ ನೀಡಿದ್ದಾರೆ. 

"

ಯುವತಿಗೆ ಸರ್ಕಾರಿ ಕೆಲಸ ಆಮಿಷ ತೋರಿಸಿ ಲೈಂಗಿಕವಾಗಿ ಬಳಸಿಕೊಂಡಿದ್ದಾರೆ ಎನ್ನಲಾಗಿದೆ. ಆದ್ರೆ, ಈ ಬಗ್ಗೆ ಸಂತ್ರಸ್ತೆ ಹಾಗೂ ಅವರ ಕುಟುಂಬದ ಸದಸ್ಯರು ಈ ಬಗ್ಗೆ ಒಂದೇ ಒಂದು ಹೇಳಿಕೆ ಕೊಟ್ಟಿಲ್ಲ. ದೂರು ನೀಡಿಲ್ಲ. ಬದಲಾಗಿ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಅವರು ಕಬ್ಬನ್ ಪೊಲಿಸ್ ಠಾಣೆ ದೂರು ನೀಡಿದ್ದು, ವಿಡಿಯೋ ಅಪ್ಲೋಡ್ ಆಗಿರುವ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.

'ಜಾರಕಿಹೊಳಿ ರಾಸಲೀಲೆಯಲ್ಲಿ ದೊಡ್ಡ ದೊಡ್ಡವರ ಕೈವಾಡ, 5 ಕೋಟಿ ಡೀಲ್ '

ಇದರ ಮಧ್ಯೆ ಇತ್ತ ಅವರ ಆಪ್ತ ಶಾಸಕರೊಬ್ಬರು, ರಮೇಶ್ ರಾಸಲೀಲೆ ವೀಡಿಯೋದಲ್ಲಿ ಮಚ್ಚೆ ಹುಡುಕಿದ್ದಾರೆ. ಈ ಮೂಲಕ ಸೆಕ್ಸ್ ಸಿಡಿಯಲ್ಲಿ ತನ್ನ ಆಪ್ತ ರಮೇಶ್ ಜಾರಕಿಹೊಳಿಯ ಮುಖದಲ್ಲಿದ್ದಂತ ಮಚ್ಚೆಯೇ ಇಲ್ಲ ಎಂದು ಶಾಸಕ ಮಹೇಶ್ ಕುಮಟವಳ್ಳಿ ಹೊಸ ಬಾಂಬ್ ಸಿಡಿಸಿದ್ದಾರೆ.

ತಮ್ಮ ಆಪ್ತರಾದ ರಮೇಶ್ ಜಾರಕಿಹೊಳಿಯವರ ಮನೆಗೆ ಮಹೇಶ್ ಕುಮಟಳ್ಳಿ ಭೇಟಿ ನೀಡಿ ಘಟನೆ ಬಗ್ಗೆ ಮಾತುಕತೆ ನಡೆಸಿದರು. 

ಈ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿಯ ಬಗ್ಗೆ ಬಿಡುಗಡೆ ಮಾಡಿದ ರಾಸಲೀಲೆ ವೀಡಿಯೇದಲ್ಲಿ, ರಮೇಶ್ ಜಾರಕಿಹೊಳಿ ಮುಖದಲ್ಲಿ ಇರುವ ಮಚ್ಚೆ ಇಲ್ಲ. ಈ ವೀಡಿಯೋ ಎಡಿಟ್ ಆಗಿರಬಹುದು ಎಂದು ಅನುಮಾನ ವ್ಯಕ್ತಪಡಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ಒಂದೊಂದು ಸಾಕ್ಷ್ಯಾಧಾರಗಳು ಬಹಳ ಮುಖ್ಯವಾಗಿದ್ದು, ಈ ಮಚ್ಚೆ ವಿಚಾರದ ಬಗ್ಗೆ  ಸಹ ತನಿಖೆಯಲ್ಲಿ ಪ್ರಮುಖ ಅಂಶವಾಗಬಹುದು.

ಇನ್ನು ವೈಷಮ್ಯದಿಂದ ರಮೇಶ್ ಜಾರಕಿಹೊಳಿ ಮೇಲೆ ಈ ರೀತಿ ಸೇಡು ತೀರಿಸಿಡ್ರಾ? ಹಾಗಿದ್ದರೆ ಇದರ ಹಿಂದೆ ಯಾರ ಷಡ್ಯಂತ್ರ ಇದೆ? ಇದು ಪಕ್ಕಾ ಪ್ಲಾನ್ ಮಾಡಿ ಮಾಡಿರುವುದಾ ಎನ್ನುವ ಹಲವು ಪ್ರಶ್ನೆಗಳು ಉದ್ಭವಿಸಿದ್ದು, ತನಿಖೆ ಬಳಿಕೆ ಸತ್ಯಾಸತ್ಯತೆ ಹೊರಬರಬೇಕಿದೆ.