ಬೆಂಗಳೂರು, (ಜೂನ್.02): ಸಚಿವ ಸ್ಥಾನ ವಂಚಿತ ಮಹೇಶ್​​ ಕುಮಟಳ್ಳಿ ಅವರನ್ನ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಈ ಕುರಿತಂತೆ ವಸತಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಜಿ ಲಕ್ಷ್ಮಣ್ ಇಂದು (ಮಂಗಳವಾರ) ಆದೇಶ ಹೊರಡಿಸಿದ್ದಾರೆ.

ಬಿಜೆಪಿಯಲ್ಲಿ ಅಸಮಾಧಾನ ಸ್ಫೋಟ ಮಧ್ಯೆ ಎರಡು ಹೊಸ ಜಿಲ್ಲಾ ಉಸ್ತುವಾರಿಗಳ ನೇಮಕ

ಕರ್ನಾಟಕ ಕೊಳಚೆ ಪ್ರದೇಶಗಳ (ಅಭಿವೃದ್ಧಿ ಮತ್ತು ನಿರ್ಮೂಲನೆ) ಅಧಿನಿಯಮ 1973ರ ಕಲಂ 34(2)(ಎ) ಅನ್ವಯ ವಿಧಾನ ಸಭಾ ಸದಸ್ಯರಾದ ಮಹೇಶ್ ಈರನಗೌಡ ಕುಮಠಳ್ಳಿ ಇವರನ್ನು ತಕ್ಷಣಿದಿಂದ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧ್ಯಕ್ಷರನ್ನಾಗಿ ನೇಮಿಸಿದೆ ಎಂದು ಆದೇಶಿಸಿದ್ದಾರೆ.

"

ಇನ್ನೊಂದೆಡೆ ಇದೇ ಸಂದರ್ಭದಲ್ಲಿ ದಿಢೀರ್ ಎರಡು ಜಿಲ್ಲೆಗಳಿಗೆ ಉಸ್ತುವಾರಿಗಳನ್ನು ನೇಮಕ ಮಾಡಿರುವುದು ಹಲವು ರಾಜಕೀಯ ಲೆಕ್ಕಾಚಾರಗಳ ಆರಂಭಕ್ಕೆ ಕಾರಣವಾದೆ.

ಈ ಹಿಂದೆ ಮಹೇಶ್ ಕುಮಟಳ್ಳಿ ಸಚಿವ ಸ್ಥಾನ ನೀಡಲೇಬೇಕೆಂದು ಸಿಎಂ ಎದುರು ಪಟ್ಟು ಹಿಡಿದಿದ್ದ ಬಿಜೆಪಿ ಶಾಸಕ ಮಹೇಶ್ ಕುಮಟಳ್ಳಿ ಹೆಸರನ್ನು ಪಟ್ಟಿಯಿಂದ ಕೈಬಿಡಲಾಗಿತ್ತು.ಬಳಿಕ ಅವರನ್ನ ಎಂಎಸ್‍ಐಎಲ್ ಅಧ್ಯಕ್ಷರಾಗಿ ಮಾಡಲಾಗಿತ್ತು.

ಇದರಿಂದ ಬೇಸರಗೊಂಡಿರುವ ಕುಮಟಳ್ಳಿ, ಪಕ್ಷದ ನಿರ್ಧಾರದಿಂದ ಬೇಸರವವಾಗಿದೆ. ಆದರೆ, ಆ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ ಎಂದಿದ್ದರು.