ಖಾತೆ ಕ್ಯಾತೆ: ಸಚಿವರಿಗೆ ದಿಲ್ಲಿಯಿಂದಲೇ ಒಂದು ಮನವಿ ಮಾಡಿದ ಬಿಜೆಪಿ ನಾಯಕ
* ಸಚಿವ ಆನಂದ್ ಸಿಂಗ್ ಖಾತೆ ಕ್ಯಾತೆ ವಿಚಾರ
* ಮಂತ್ರಿಗಳಾಗಿರುವವರಿಗೆ ಒಂದು ಮನವಿ ಮಾಡಿದ ಬಿಜೆಪಿ ನಾಯಕ
* ನವದೆಹಲಿಯಿಂದ ನೂತನ ಸಚಿವರಿಗೆ ಹಿರಿಯ ನಾಯಕ ಕಿವಿಮಾತು
ನವದೆಹಲಿ, (ಆ.11): ದೊಡ್ಡ ಖಾತೆ ಮೇಲೆ ಕಣ್ಣಿಟ್ಟಿದ್ದ ಸಚಿವ ಆನಂದ್ ಸಿಂಗ್ಗೆ ಪ್ರವಾಸೋದ್ಯಮ ಖಾತೆ ನೀಡಿರೋದು ಅವರ ಅಸಮಾದಾನಕ್ಕೆ ಕಾರಣವಾಗಿದೆ. ಈ ಖಾತೆಯನ್ನು ಒಪ್ಪಿಕೊಳ್ಳಲು ಸುತಾರಾಂ ಒಪ್ಪದ ಆನಂದ್ ಸಿಂಗ್ ರಾಜೀನಾಮೆ ನೀಡಲು ಚಿಂತೆನ ನಡೆಸಿದ್ದಾರೆ ಎಂಬ ವಿಚಾರ ರಾಜ್ಯ ರಾಜಕೀಯದಲ್ಲಿ ಸಂಚನಲ ಮೂಡಿಸಿದೆ.
ಇನ್ನು ಈ ಬಗ್ಗೆ ದೆಹಲಿಯಲ್ಲಿ ಇಂದು (ಆ.11) ಬಿಜೆಪಿ ವಿಧಾನಪರಿಷತ್ ಸದಸ್ಯ ಎಚ್ ವಿಶ್ವನಾಥ್ ಪ್ರತಿಕ್ರಿಯಿಸಿ, ಮಂತ್ರಿಗಳಾಗಿರುವವರಿಗೆ ಒಂದು ವಿನಂತಿ. ಎಲ್ಲಾ ಖಾತೆಗಳು ಒಳ್ಳೆಯ ಖಾತೆಗಳು. ಕೊಟ್ಟ ಖಾತೆ ಎಷ್ಟು ಚನ್ನಾಗಿ ನಿಭಾಯಿಸಬಹುದು ಎನ್ನುವ ಕಡೆ ನೋಡಿ ಎಂದು ಕಿವಿ ಮಾತು ಹೇಳಿದರು.
ಸಚಿವ ಆನಂದ್ ಸಿಂಗ್ ರಾಜೀನಾಮೆ? ರಾಜ್ಯ ರಾಜಕಾರಣದಲ್ಲಿ ಮತ್ತೆ ಸಂಚಲನ
ಎಲ್ಲಾ ಖಾತೆಗಳು ಒಳ್ಳೆಯ ಖಾತೆಗಳು. ಕೊಟ್ಟ ಖಾತೆ ಎಷ್ಟು ಚನ್ನಾಗಿ ನಿಭಾಯಿಸಬಹುದು ಎನ್ನುವ ಕಡೆ ನೋಡಿ. ಸಮಯ ತುಂಬಾ ಕಡಿಮೆ ಇದೆ. ಸರ್ಕಾರದ ಯೋಜನೆಗಳು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ಸಚಿವರು ಇಲಾಖೆಯ ಭಾಗ ಅಲ್ಲ ಬದಲಿಗೆ ಸರ್ಕಾರದ ಭಾಗ. ಕೊಟ್ಟ ಜವಾಬ್ದಾರಿಯನ್ನು ಅರಿತು ಕೆಲಸ ಮಾಡಬೇಕು. ಸಿಎಂ ಬೊಮ್ಮಾಯಿ ಎಲ್ಲರಿಗೂ ಗೌರವ ಕೊಡ್ತಾರೆ ಎಂದು ಸಲಹೆ ನೀಡಿದರು.
ಇನ್ನು ಈ ಹಿಂದಿನ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ವಿಶ್ವನಾಥ್ ಇದೀಗ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಪರವಾಗಿ ಬ್ಯಾಟಿಂಗ್ ಮಾಡಿದ್ದಾರೆ.
ಸಿಎಂ ಬಸವರಾಜ್ ಬೊಮ್ಮಾಯಿ ಒಳ್ಳೆ ಸರ್ಕಾರ ನೀಡಲಿ. 20 ತಿಂಗಳು ಉತ್ತಮ ಆಡಳಿತ ನೀಡುವ ನಿರೀಕ್ಷೆ ಇದೆ. ನಾನು ಬಂಡಾಯಗಾರಾದ ರಮೇಶ್ ಜಾರಕಿಹೋಳಿ, ಸಿ.ಪಿ ಯೋಗೇಶ್ವರ್ ಜೊತೆಗಿಲ್ಲ. ಬೊಮ್ಮಾಯಿ ಗೆ ನನ್ನ ಬೆಂಬಲ ಇದೆ ಎಂದು ಸ್ಪಷ್ಟಪಡಿಸಿದರು.