Asianet Suvarna News Asianet Suvarna News

ಕೋಮುವಾದದ ಓಲೈಕೆಗೆ ಒಂದು ಮಿತಿ ಇರಬೇಕು: ಸಿದ್ದು ವಿರುದ್ಧ ಹರಿಹಾಯ್ದ ಸಿ.ಟಿ.ರವಿ

ಸಿದ್ದರಾಮಯ್ಯ ಅವರು ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರಕ್ಕೆ ಹಿಜಾಬ್ ಜೋಡಿಸುತ್ತಾರೋ ಅಥವಾ ಸಮವಸ್ತ್ರ ಕಡ್ಡಾಯ ಎನ್ನುವುದನ್ನು ತೆಗೆಯುತ್ತಾರೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ ಸಿ.ಟಿ.ರವಿ 

BJP MLA CT Ravi Slams CM Siddaramaiah grg
Author
First Published Dec 23, 2023, 9:46 PM IST

ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು 

ಚಿಕ್ಕಮಗಳೂರು(ಡಿ.23):  ಕೋಮುವಾದದ ಓಲೈಕೆಗೆ ಒಂದು ಮಿತಿ ಇರಬೇಕು. ಅದು ಮತವನ್ನು ಮೀರಿ ಶಾಲೆಗಳಿಗೂ ಪ್ರವೇಶಿಸಿದರೆ ಅದರ ಪರಿಸ್ಥಿತಿ ಏನು ಎನ್ನುವುದರ ಅರಿವಿಟ್ಟುಕೊಂಟು ನಿರ್ಣಯ ತೆಗೆದುಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಜಿ ಶಾಸಕ ಸಿ.ಟಿ.ರವಿ ಆಗ್ರಹಿಸಿದರು.

ಇಂದು(ಶನಿವಾರ) ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾಡಿದ ಸಿ.ಟಿ.ರವಿ ಅವರು, ಶಾಲೆಗಳಿಗೆ ಹಿಜಾಬ್ ಧರಿಸಿ ಬರಬಹುದು ಎಂದು ಸೂಚಿಸಿದ್ದೇನೆ ಎನ್ನುವ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ಸಿದ್ದರಾಮಯ್ಯ ಅವರು ಶಾಲೆ-ಕಾಲೇಜುಗಳಲ್ಲಿ ಸಮವಸ್ತ್ರಕ್ಕೆ ಹಿಜಾಬ್ ಜೋಡಿಸುತ್ತಾರೋ ಅಥವಾ ಸಮವಸ್ತ್ರ ಕಡ್ಡಾಯ ಎನ್ನುವುದನ್ನು ತೆಗೆಯುತ್ತಾರೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಚಿಕ್ಕಮಗಳೂರಲ್ಲಿ ದತ್ತ ಜಯಂತಿ: ನೂರಾರು ಮಾಲಾಧಾರಿಗಳಿಂದ ಬೈಕ್ ಜಾಥಾ

ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ನಿಷೇಧ ಆಗಿರಲಿಲ್ಲ : 

ಹಿಂದೆಯೂ ಸಾರ್ವಜನಿಕ ಸ್ಥಳಗಳಲ್ಲಿ ಹಿಜಾಬ್ ನಿಷೇಧ ಆಗಿರಲಿಲ್ಲ. ಕೇವಲ ಶಾಲೆ-ಕಾಲೇಜುಗಳಲ್ಲಿ , ಶಿಕ್ಷಣ ಕಾಯ್ದೆ ಪ್ರಕಾರ ಸಮವಸ್ತ್ರ ಹೊರತುಪಡಿಸಿ ಇನ್ನಾವುದೇ ರೀತಿಯ ವಸ್ತ್ರ ಸಂಹಿತೆ ಇರುವುದಿಲ್ಲ. ಸಮವಸ್ತ್ರ ಸಂಹಿತೆಯನ್ನು ಪಾಲಿಸಬೇಕು ಎನ್ನುವ ನಿಯಮ ಇತ್ತು ಎಂದರು.ಆದರೆ ಈಗ ಸಿದ್ದರಾಮಯ್ಯ ಎಲ್ಲಾ ಸಮವಸ್ತ್ರಕ್ಕೂ ಹಿಜಾಬ್ ಕಡ್ಡಾಯಗೊಳಿಸಲು ಹೊರಟಿದ್ದಾರೋ? ಅಥವಾ ಸಮವಸ್ತ್ರವೇ ಬೇಡ ಅವರಿಷ್ಟ ಬಂದಂತೆ ಎಂದು ಮಾಡಲು ಹೊರಟಿದ್ದೀರೋ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.ಹಿಂದೆ ಸಮವಸ್ತ್ರ ವಿರುದ್ಧ ಇದ್ದವರದ್ದು ಗಲಾಟೆ ಇದ್ದದ್ದು, ಮಕ್ಕಳಲ್ಲಿ ಬಡವ ಬಲ್ಲಿದ ಎನ್ನುವ ಬೇಧ ಇರಬಾರದು. ಜಾತಿ ಬೇಧ ಇರಬಾರದು ನಾವೆಲ್ಲರೂ ಸಮಾನರು ಎನ್ನುವ ಮಾನಸಿಕತೆಯಲ್ಲಿ ಶಾಲೆ-ಕಾಲೇಜಿಗೆ ಬಂದು ಕಲಿಯಬೇಕು ಎನ್ನುವ ಉದ್ದೇಶದಿಂದ 1964 ರ ಶಿಕ್ಷಣ ಕಾಯ್ದೆ ಅನ್ವಯ ನಿಯಮವನ್ನು ನಾವು ತಂದಿದ್ದೆವು ಎಂದರು.

ವಿದ್ಯಾರ್ಥಿಗಳ ನಡುವೆ ಸಮಾನತೆ ಎಲ್ಲಿ ಬರುತ್ತೆ : 

ಈಗ ಸಿಎಂ ಸಿದ್ದರಾಮಯ್ಯ ಅವರ ಮನಸಿಗೆ ಬಡವ ಬಲ್ಲಿದ ಎನ್ನುವುದು ಇರಬೇಕು. ಜಾತಿ ಎನ್ನುವುದು ಇರಬೇಕು. ಶಾಲೆಗಳಲ್ಲೂ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎನ್ನುವ ಗುರುತು ಇರಬೇಕು. ಅದಿದ್ದರೆ ಒಡೆದಾಳುವ ರಾಜಕಾರಣ ಮಾಡಲು ಸುಲಭ ಎನ್ನಿಸಿರುವ ಕಾರಣಕ್ಕೆ ಹಿಜಾಬ್ ನಿಷೇಧ ಎನ್ನುತ್ತಿದ್ದಾರೆ ಎನ್ನಿಸುತ್ತದೆ ಎಂದರು.ಹಾಗೇನಾದರೂ ಪ್ರತ್ಯೇಕ ಗುರುತು ಎನ್ನುವ ಮನೋಭಾವ ಬಂದರೆ ಬೇರೆ ಬೇರೆ ಬಣ್ಣಗಳು ನಮ್ಮ ಗುರುತು ಎಂದು ತೋರಿಸಲು ಹೋದರೆ ವಿದ್ಯಾರ್ಥಿಗಳ ನಡುವೆ ಸಮಾನತೆ ಎಲ್ಲಿ ಬರತ್ತದೆ ಎಂದು ಪ್ರಶ್ನಿಸಿದರು. ಶಿಕ್ಷಣ ಸಂಹಿತೆ ಪ್ರಕಾರವೇ ವಸ್ತ್ರ ಸಂಹಿತೆ ಇರಬೇಕು ಎಂದು ನಾವು ಬಯಸುತ್ತೇವೆ. ಮುಖ್ಯಮಂತ್ರಿಗಳು ಅವರಿಷ್ಟ ಬಂದಂತೆ ಜಾತಿಗೊಂದು ಗುರುತು ಹಾಕಿಕೊಂಡು ಬಂದರೆ ಸಮಾಜದ ಮೇಲೆ ಏನು ಪರಿಣಾಮ ಆಗುತ್ತದೆ ಎನ್ನುವ ಆಲೋಚನೆಯನ್ನು ಅವರು ಮಾಡಲಿ ಎಂದರು.

Follow Us:
Download App:
  • android
  • ios