Asianet Suvarna News Asianet Suvarna News

ದಿಢೀರ್ ಯುಟರ್ನ್, ಫೋನ್‌ಗೆ ಬೆದರಿದ್ರಾ ಬಸನಗೌಡ ಪಾಟೀಲ್ ಯತ್ನಾಳ್?

* ದಿಢೀರ್ ಯುಟರ್ನ್ ಹೊಡೆದ ಬಸನಗೌಡ ಪಾಟೀಲ್ ಯತ್ನಾಳ್
* 2500 ಕೋಟಿ ರೂ  ತಮ್ಮ ಹೇಳಿಕೆಯನ್ನು ತಿರುಚಿಕೊಂಡ ಬಿಜೆಪಿ ಶಾಸಕ
 * ಫೋನ್‌ಗೆ ಬೆದರಿದ್ರಾ ಬಸನಗೌಡ ಪಾಟೀಲ್ ಯತ್ನಾಳ್?

BJP MLA Basangouda Patil Yatnal U turns Over His 2500 Crore Statement rbj
Author
Bengaluru, First Published May 7, 2022, 4:46 PM IST

ವಿಜಯಪುರ, (ಮೇ.07): ದೆಹಲಿಯಿಂದ ಬಂದಿದ್ದವರು ನನಗೆ ಸಿಎಂ ಕುರ್ಚಿಗೆ 2,500 ಕೋಟಿ ರೂ. ಕೇಳಿದ್ದರು ಎಂದು ಹೇಳಿಕೆ ನೀಡಿದ್ದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal)   ಇದೀಗ ಯುಟೂರ್ನ್ ಹೊಡೆದಿದ್ದಾರೆ. ಸಿಎಂ ಆಗಲು ಹಣ ನೀಡಬೇಕು, ನನಗೂ ಹಣ ಕೊಟ್ಟರೆ ಸಿಎಂ ಮಾಡ್ತೀನಿ ಅಂದಿದ್ದರು ಎಂಬ ಹೇಳಿಕೆ ನೀಡಿ ಪೇಚಿಗೆ ಸಿಲುಕಿರುವ ಶಾಸಕ ಬಸನಗೌಡ ಪಾಟೀಲ್​​, ಇದೀಗ ಈ ರೀತಿ ಹೇಳಿಕೆಯನ್ನೇ ನೀಡಿಲ್ಲ ಎಂದಿದ್ದಾರೆ.

ಹೌದು..  ವಿಜಯಪುರದಲ್ಲಿ ಮಾತನಾಡಿದ ಅವರು, ಹಣ ಪಡೆದು ಸಿಎಂ ಸ್ಥಾನ ನೀಡುವ ಸಂಸ್ಕೃತಿ ಬಿಜೆಪಿಯಲ್ಲಿ ಇಲ್ಲ. ಹಣ ಪಡೆದು ಸಿಎಂ ಸ್ಥಾನ ನೀಡುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದಲ್ಲಿದೆ. ಬಿಜೆಪಿಯಲ್ಲಿ ಅರ್ಹತೆ ಮೇಲೆಯೇ ಸ್ಥಾನಮಾನಗಳನ್ನು ನೀಡುತ್ತಾರೆ. ಒಂದೆರಡು ಘಟನೆ ಬಿಟ್ಟರೆ ನೂರಕ್ಕೆ ನೂರರಷ್ಟು ಅರ್ಹರಿಗೆ ಸ್ಥಾನ ನೀಡಲಾಗಿದೆ' ಎಂದು ತಮ್ಮ ಹೇಳಿಕೆಗೆ ಮಾತು ಬದಲಿಸಿದರು.

2,500 ಕೋಟಿ ರೂ ಹೇಳಿಕೆ ನೀಡಿದ್ದ ಬಸನಗೌಡ ಪಾಟೀಲ್ ಯತ್ನಾಳ್‌ಗೆ ಬಿಗ್ ಶಾಕ್!

ಸಿಎಂ ಆಗಲು ಹೈಕಮಾಂಡ್ ಹಣ ನೀಡಬೇಕಾಗುತ್ತದೆ ಎಂದು ನಾನು ಹೇಳಿಲ್ಲ. ನಾನು ಹೇಳಿದ ಅರ್ಥ ಬೇರೆ ಇದೆ. ಸಿಎಂ ಮಾಡುತ್ತೇವೆ ಎಂದು ಯಾರೋ ವಾಟ್ಸಪ್ ಕಾಲ್ ಮಾಡುತ್ತಾರೆ. ನಮಗೆ ಮೋದಿ ಗೊತ್ತು, ಸೋನಿಯಾ ಗಾಂಧಿ ಗೊತ್ತು, ದೇವೇಗೌಡ್ರು ಗೊತ್ತು ಎಂದು ಹೇಳುತ್ತಾರೆ. ವ್ಯವಸ್ಥೆ ಹಾಗಿದೆ. ಅವರನ್ನು ನಂಬಬೇಡಿ ಎಂದು ಹೇಳಿದ್ದೇನೆ ಎಂದರು.

ದೆಹಲಿ ಸಾಧು ಒಬ್ಬ, ತಾನು ಕೇದಾರ ಮಹಾರಾಜ ಮಾತಾಡೋದು, ನನಗೆಲ್ಲರೂ ಗೊತ್ತು. ಇಷ್ಟು ಹಣ ತಂದು ಕೊಟ್ಟರೆ ಶಿಫಾರಸ್ಸು ಮಾಡುತ್ತೇನೆ ಎನ್ನುತ್ತಾರೆ. ಇದೆಲ್ಲಾ ರೆಕಾರ್ಡ್ ಇಟ್ಟುಕೊಳ್ಳಲು ಆಗುವುದಿಲ್ಲ. ರೆಕಾರ್ಡ್ ಇಟ್ಟು ರಾಜಕೀಯ ಮಾಡುವುದಕ್ಕೂ ಆಗುವುದಿಲ್ಲ ಎಂದು ತಿಳಿಸಿದರು.

ರಾಮದುರ್ಗದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ಕೆಲ ಟಿಕೆಟ್ ಆಕಾಂಕ್ಷಿಗಳಿದ್ದರು. ಅವರಿಗೆ ಹಿತವಚನ ಹೇಳಲು, ಹೇಗೆಲ್ಲಾ ರಾಜಕಾರಣ ನಡೆಯುತ್ತದೆ ಎಂದು ತಿಳಿಸಲು ನಾನು ಈ ರೀತಿಯಾಗಿ ಮಾತನಾಡಿದ್ದು ಎಂದು ಸ್ಪಷ್ಟಪಡಿಸಿದರು.

ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಡಕ್ ಮಾತು, ಸಂಕಷ್ಟಕ್ಕೆ ಸಿಲುಕಿದ ಯತ್ನಾಳ್

ಡಿಕೆಶಿ ಏನೇ ಮಾಡಿದ್ರು ನಾನು ಅಂಜುವ ಮಗ ಅಲ್ಲ, ನಾನು ಅಂಜಿ ರಾಜಕಾರಣ ಮಾಡಲ್ಲ.ಡಿಕೆಶಿಗೆ ನನ್ನ ಭಯ ಹುಟ್ಟಿದೆ, ಕರ್ನಾಟಕದಲ್ಲಿ ರಾಜಕೀಯ ಭವಿಷ್ಯ ಮುಗಿಯುತ್ತೆ ಎನ್ನುವ ಭಯ ಅವರಿಗೆ ಕಾಡಿದೆ ಎಂದರು.

ಸಿಎಂ ಆಗಲು ಹೈಕಮಾಂಡ್ ಹಣ ನೀಡುವ ಹೇಳಿಕೆ ನೀಡಿದ ವಿಚಾರ.ನಾನು ಹಾಗೇ ಹೇಳಿಲ್ಲ, ಹೇಳಿದ ಅರ್ಥ ಬೇರೆ ಇದೆ.ಸಿಎಂ ಮಾಡ್ತೀವಿ ಎಂದು ಯಾರೋ ವಾಟ್ಸಾಪ್ ಕಾಲ್ ಮಾಡ್ತಾರೆ.ನಮಗೆ ಮೋದಿ ಗೊತ್ತು.. ಸೋನಿಯಾ ಗಾಂಧಿ ಗೊತ್ತು.. ದೇವೆಗೌಡ್ರು ಗೊತ್ತು ಅಂತಾ ಹೇಳ್ತಾರೆ.ಇಷ್ಟು ಹಣ ತಂದು ಕೊಟ್ಟರೆ ಶಿಫಾರಸ್ಸು ಮಾಡ್ತೀನಿ ಅಂತಾರೆ.ಇದೆಲ್ಲ‌ ರೆಕಾರ್ಡ್ ಇಟ್ಟುಕೊಳ್ಳಲು ಅಗಲ್ಲ, ರೆಕಾರ್ಡ್ ಇಟ್ಟು ರಾಜಕೀಯ ಮಾಡೋಕೆ ಆಗಲ್ಲ ಎಂದರು.

ನಮಗೆ ಕಾಲ್ ಮಾಡಿ ಸೋನಿಯಾಗಾಂಧಿ ಭೇಟಿ ಮಾಡಿಸ್ತೀನಿ ಎಂದಿದ್ದಾರೆ. ಇಂತಹ ದಲ್ಲಾಳಿಗಳು ಬೆಂಗಳೂರಲ್ಲೂ ಇದ್ದಾರೆ. ರಾಮದುರ್ಗದಲ್ಲಿ ವೇದಿಕೆ ಮೇಲೆ ಕಾಂಗ್ರೆಸ್, ಬಿಜೆಪಿ, ಜೆಡಿಎಸ್‌ನ ಕೆಲ ಟಿಕೇಟ್ ಆಕಾಂಕ್ಷಿಗಳಿದ್ದರು, ಅವರಿಗೆ ಹಿತವಚನ ಹೇಳಲು ನಾನು ಮಾತನಾಡಿದ್ದು ಎಂದು ತಮ್ಮ ಹೇಳಿಕೆಯನ್ನು ತಿರುಚಿಕೊಂಡರು.

ಅವರು ನಮಗೆ ನಿಮ್ಮ ಸಿಎಂ ಸೀಟ್ ಗಾಗಿ ನಾವು ಟ್ರೈ ಮಾಡ್ತೀವಿ ಅಂತಾರೆ, ಇಷ್ಟು ಸಾವಿರ ಕೋಟಿ ರೆಡಿ ಇಡಿ ಅಂತ ಹೇಳಿದ್ದು, ಅಂತಹವರಿಗೆ ಛೀಮಾರಿ ಹಾಕಿದ್ದೀವಿ ಎಂದು ಹೇಳಿದರು.

ಹೈಕಮಾಂಡ್ ಹಣ ಕೇಳಿದೆ ಅಂತಾ ನಾನು ಹೇಳಿಲ್ಲ, ಪ್ರಧಾನಿ ಮೋದಿ ಅವರ ಕಾಲದಲ್ಲಿ ಇಂತಹದ್ದೆಲ್ಲ ಸಾಧ್ಯವಿಲ್ಲ, ನಾನು ಹೈಕಮಾಂಡ್ ಹಣ ಕೇಳಿದೆ ಅಂತಾ ಹೇಳಿಲ್ಲ.ಏಜೆಂಟರು,ದಲ್ಲಾಳಿಗಳು ಇದ್ದಾರೆ ಎಂದು ಹೇಳಿದ್ದೀನಿ ಹೊರತು ಈ ರೀತಿ ಹೇಳೆ ಇಲ್ಲ ಎಂದರು.

ನಿನ್ನೆಯಷ್ಟೇ ಶಾಸಕ ಯತ್ನಾಳ ರಾಮದುರ್ಗದಲ್ಲಿ ಮಾತನಾಡುವ ವೇಳೆ, ಸಿಎಂ ಕುರ್ಚಿಗಾಗಿ 2,500 ಕೋಟಿ ರೂ. ಕೇಳಿದ್ದಾರೆ ಎಂದು ಹೇಳಿದ್ದರು. ಯತ್ನಾಳ್ ಹೇಳಿಕೆಗೆ ಸ್ವಪಕ್ಷೀಯರು ಸೇರಿದಂತೆ ವಿರೋಧ ಪಕ್ಷಗಳಿಂದ ಭಾರೀ ಟೀಕೆ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಯತ್ನಾಳ್ ಉಲ್ಟಾ ಹೊಡೆದಿದ್ದಾರೆ.

ಶಿಸ್ತುಕ್ರಮಕ್ಕೆ ವರದಿ ಸಲ್ಲಿಕೆ
ಪಿಎಸ್‌ಐ ನೇಮಕಾತಿ ಹಗರಣ, ಕಾಮಗಾರಿಗಳಲ್ಲಿ ಶೇ. 40 ಪರ್ಸೆಂಟ್‌ ಕಮಿಷನ್‌ ದಂಧೆ ಆರೋಪಗಳ ನಡುವೆ 'ಸಿಎಂ ಆಗಲು 2,500 ಕೋಟಿ ರೂ., ಸಚಿವರಾಗಲು 100 ಕೋಟಿ ರೂ. ಸಿದ್ಧವಿಟ್ಟುಕೊಳ್ಳಬೇಕು ಎಂಬುದಾಗಿ ದಿಲ್ಲಿಯಿಂದ ಬಂದಿದ್ದ ಕೆಲವರು ಹೇಳಿದ್ದರು' ಎಂಬ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿಕೆ ಸರಕಾರ ಹಾಗೂ ಬಿಜೆಪಿಗೆ ತೀವ್ರ ಮುಜುಗರಕ್ಕೀಡು ಮಾಡಿದೆ.

ಈ ಹಿನ್ನಲೆಯಲ್ಲಿ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ನೀಡಿದ ಆಕ್ಷೇಪಾರ್ಹ ಹೇಳಿಕೆ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಬಿಜೆಪಿ (BJP) ರಾಜ್ಯ ಸಮಿತಿ ಶಿಫಾರಸು ಮಾಡಿದೆ. ಯತ್ನಾಳ್ ಹೇಳಿಕೆ ಬಗ್ಗೆ ಕೇಂದ್ರ ಶಿಸ್ತು ಸಮಿತಿಗೆ ಮಾಹಿತಿ ರವಾನೆ ಮಾಡಲಾಗಿದೆ. ಹಲವು ಬಾರಿ ಮುಜುಗರದ ಹೇಳಿಕೆ ನೀಡಿರುವ ಬಗ್ಗೆ ವರದಿ ನೀಡಲಾಗಿದೆ. 

 ರಾಜ್ಯ ಸಮಿತಿ, ಯತ್ನಾಳ್ ಅವರನ್ನು ಸಂಪರ್ಕ ಮಾಡಲು ಪ್ರಯತ್ನಿಸಿದೆ. ಆಕ್ಷೇಪಾರ್ಹ ಹೇಳಿಕೆ ಬಗ್ಗೆ ವಿವರಣೆ ಪಡೆಯಲು ಸಮಿತಿ ಯತ್ನಿಸಿದೆ. ಆದರೆ ಶಾಸಕರು ದೂರವಾಣಿ ಕರೆಯನ್ನು ಸ್ವೀಕರಿಸಿಲ್ಲ. ಇಂದು (ಮೇ 7) ಸಂಜೆ ವೇಳೆಗೆ ಕೇಂದ್ರ ಶಿಸ್ತು ಸಮಿತಿ ಕ್ರಮದ ಬಗ್ಗೆ ಮಾಹಿತಿ ನೀಡುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಇದರಿಂದ ಯತ್ನಾಳ್ ದಿಢೀರ್ ಯುಟರ್ನ್ ಹೊಡೆದ್ರಾ ಎನ್ನುವ ಪ್ರಶ್ನೆಗಳು ಉದ್ಭವಿಸಿವೆ.

Follow Us:
Download App:
  • android
  • ios