ವಿಜಯಪುರ, (ಡಿ.02): ಮರಾಠ ಪ್ರಾಧಿಕಾರ ರಚನೆಗೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ಇದೇ ಡಿಸೆಂಬರ್ 5ರಂದು ಕರ್ನಾಟಕ ಬಂದ್‌ಗೆ ಕರೆ ಕೊಟ್ಟಿವೆ.

ಇನ್ನು ವಿಜಯಪುರದಲ್ಲಿ ದು ಹೇಗೆ ಬಂದ್ ಮಾಡ್ತರೋ ನಾನು ನೋಡುತ್ತೇನೆ. ತಾಕತ್ ಇದ್ರೆ ವಿಜಯಪುರನವನ್ನ ಬಂದ್ ಮಾಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನೆಗಳಿಗೆ ಬಹಿರಂಗ ಸವಾಲು ಹಾಕಿದ್ದಾರೆ.

ಬಸನಗೌಡ ಪಾಟೀಲ್‌ ಯತ್ನಾಳ್‌ ವಿರುದ್ಧ ತೊಡೆ ತಟ್ಟಿ ನಿಂತ ಮುಖ್ಯಮಂತ್ರಿ ಚಂದ್ರು..!

ಆ ಸವಾಲಿನಂತೆ ಬಂದ್ ವಿಫಲಗೊಳಿಸಲು ಯತ್ನಾಳ್ ಏನೆಲ್ಲಾ ಮಾಡಬೇಕೆಂದು ಇಂದು (ಬುಧವಾರ) ಪೂರ್ವಭಾವಿ ಸಭೆ ನಡೆಸಿದರು. ವಿಜಯಪುರ ನಗರದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಫ. ಗು. ಹಳಕಟ್ಟಿ ಭವನದಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದಲ್ಲಿ ಸಭೆ ನಡೆಯಿತು.

 ಮರಾಠಾ ಸಮುದಾಯ, ಹಿಂದೂ ಸಂಘಟನೆ, ವ್ಯಾಪಾರಸ್ಥರು, ಸಂಘ ಸಂಸ್ಥೆಗಳ ಮುಖಂಡರ ಜೊತೆಗೆ ಯತ್ನಾಳ್ ಸಭೆ ನಡೆಸಿದ್ದು, ಡಿಸೆಂಬರ್ 5ರಂದು ಬಂದ್ ವಿಫಲಗೊಳಿಸುವ ಬಗ್ಗೆ ಚರ್ಚೆ ಮಾಡಿದರು. ಅಲ್ಲದೇ ಬಂದ್ ವಿರೋಧಿ ಏನೆಲ್ಲಾ ಮಾಡಬೇಕೆಂದು ಮಾತುಕತೆ ನಡೆಸಿದರು.

ಮತ್ತೊಂದೆಡೆ ವಾಟಾಳ್ ನಾಗರಾಜ್ ಸೇರಿದಂತೆ ಕನ್ನಡ ಪರ ಸಂಘಟನೆಗಳು ವಿಜಯಪುರದಲ್ಲಿ ಬಂದ್ ಯಶಸ್ವಿಗೊಳಿಸಲು ಪ್ಲಾನ್ ಮಾಡಿವೆ. ಈ ಹಿನ್ನೆಲೆಯಲ್ಲಿ ಡಿ.5ರಂದು ಕರ್ನಾಟಕ ಬಂದ್ ಬದಲಾಗಿ ವಿಜಯಪುರ ಜಿಲ್ಲೆ ಬಂದ್ ಆಗುತ್ತಾ ಇಲ್ಲ ಎನ್ನುವುದು ಕಾದು ನೋಡಬೇಕಿದೆ.