ಸೈಲೆಂಟ್ ಆಗಿದ್ದ ಯತ್ನಾಳ್ ಮತ್ತೆ ವೈಲೆಂಟ್: ಸಿಎಂ ವಿರುದ್ಧ ಗಂಭೀರ ಆರೋಪ

* ಸೈಲೆಂಟ್ ಆಗಿದ್ದ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ವೈಲೆಂಟ್ 
* ಮತ್ತೆ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ಯತ್ನಾಳ್ ವಾಗ್ದಾಳಿ
*ಸಿಎಂ ಕಾರ್ಯಕ್ಕೆ ಬಸನಗೌಡ ಪಾಟೀಲ್ ಯತ್ನಾಳ್  ಅಸಮಾಧಾನ
 

BJP MLA Basangouda patil Yatnal Hits out at CM BSY about Corona Work rbj

ವಿಜಯಪುರ, (ಮೇ.17): ಕೊರೋನಾ ಮಧ್ಯೆ ಸೈಲೆಂಟ್ ಆಗಿದ್ದ ವಿಜಯಪುರದ ಬಿಜೆಪಿ ರೆಬೆಲ್ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ವೈಲೆಂಟ್ ಆಗಿದ್ದ, ಎಂದಿನಂತೆ ಮತ್ತೆ ಸಿಎಂ ಬಿಎಸ್‌ವೈ ವಿರುದ್ಧ ಕಿಡಿಕಾರಿದ್ದಾರೆ.

ಇಂದು (ಸೋಮವಾರ) ಆರೋಗ್ಯ ಸಚಿವರ ಭೇಟಿ ಬಳಿಕ ಮಾತನಾಡಿದ ಅವರು,  ಕೊರೋನಾ ನಿಯಂತ್ರಣ ವಿಚಾರದಲ್ಲಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರ ಕಾರ್ಯ ನಮಗೆ ತೃಪ್ತಿ ತಂದಿಲ್ಲ ಎಂದು ನೇರವಾಗಿ ಆರೋಪಿಸಿದರು. 

ಸಿಎಂ ಬದಲಾವಣೆ ಕಾದು ನೋಡೋಣ: ಬಸನಗೌಡ ಪಾಟೀಲ ಯತ್ನಾಳ್‌

ಮುಖ್ಯಮಂತ್ರಿಗಳು ಕೇವಲ ಕಾವೇರಿಯಲ್ಲಿ ನಾಲ್ಕು ಚೇರ್ ಹಾಕಿ ಸಭೆ ಮಾಡುತ್ತಾರೆ. ಕೆಲ ಮಾಧ್ಯಮಗಳು ದೊಡ್ಡ ಸಭೆ ಅಂತ ಸುದ್ದಿ ಮಾಡುತ್ತಾರೆ. ಕೊರೋನಾ ನಿಯಂತ್ರಣದಲ್ಲಿ ಮುಖ್ಯ ಮಂತ್ರಿಗಳ ಕೆಲಸ ತೃಪ್ತಿ ತಂದಿಲ್ಲ ಎಂದು ಸಿಎಂ ಕಾರ್ಯವೈಖರಿ ಬಗ್ಗೆ ಬಹಿರಂಗವಾಗಿ ಅಸಮಾಧಾನ ಹೊರಹಾಕಿದರು.

 ರಾಜ್ಯದಲ್ಲಿ ಆಕ್ಸಿಜನ್​, ಲಸಿಕೆ ಸಮಸ್ಯೆ ಕುರಿತು ರಾಜ್ಯದ ಪರ ಸಂಸದರು ಧ್ವನಿ ಎತ್ತದ ವಿಚಾರ ‌ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿಗಳು ಎಲ್ಲರನ್ನು ಕರೆದುಕೊಂಡು ಹೋಗಿ ಪ್ರಧಾನಿಗಳನ್ನು ಭೇಟಿ ಮಾಡಬೇಕಿತ್ತು. ನಮ್ಮ ಸಿಎಂ ಪಿಎಂರನ್ನ ಭೇಟಿನೇ‌ ಮಾಡಿಲ್ಲ.ರಾಜ್ಯ ಸರ್ಕಾರ ಜವಾಬ್ದಾರಿಯಿಂದ ನುಣಿಚಿಕೊಂಡಿದೆ. ಪ್ರಧಾನಿಗಳ ನಿರ್ದೇಶನದಂತೆ ಇಲ್ಲಿ ಕೆಲಸ ಆಗುತ್ತಿಲ್ಲ. ಎಷ್ಟು ಬಾರಿ ಯಡಿಯೂರಪ್ಪ ಪ್ರಧಾನಿ ಭೇಟಿ ಆಗಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.

ರಾಜ್ಯದಲ್ಲಿ ಲಸಿಕೆ ಅಭಿಯಾನ ವಿಫಲವಾಗಿದ್ದಕ್ಕೆ ಬುದ್ದಿ ಜೀವಿಗಳು, ವಿಪಕ್ಷಗಳೇ ಕಾರಣ.ಅವರು ಇಲ್ಲ ಸಲ್ಲದ ಅಪ ಪ್ರಚಾರ ಮಾಡಿದರು. ಈ ಬಗ್ಗೆ ಮುಖ್ಯಮಂತ್ರಿಗಳು ಜನರಿಗೆ ಅರಿವು ಮೂಡಿಸಬೇಕಿತ್ತು. ಆದರೆ, ಅದನ್ನು ಅವರು ಮಾಡಲಿಲ್ಲ. ಕೇವಲ ಪ್ರಚಾರಕ್ಕೆ ಸಿಎಂ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಿದರು. ಆದರೆ, ಅದನ್ನ ಸರಿಯಾಗಿ ವಿತರಣೆ ಮಾಡೋ ಕೆಲಸ ಮಾಡಿಲ್ಲ. ಸಿಎಂ ಪ್ರಚಾರಕ್ಕೆ ಮಾತ್ರ ಲಸಿಕೆ ಅಭಿಯಾನ ಉದ್ಘಾಟನೆ ಮಾಡಿದರು ಎಂದು ಟಾಂಗ್ ಕೊಟ್ಟರು.

ವಿಜಯಪುರ ಜಿಲ್ಲೆಗೆ ಮೂಲಭೂತ ಸೌಕರ್ಯಗಳನ್ನು ಪೂರೈಸಬೇಕಿದೆ. ಇನ್ನು ಬೆಡ್‌ಗಳು ಬೇಕಿದೆ. ವ್ಯಾಕ್ಸಿನೇಷನ್‌ ಬಗ್ಗೆ ಹೆಚ್ಚು ಒತ್ತುಕೊಟ್ಟಿದ್ದೇವೆ. ವಿಜಯಪುರದಲ್ಲಿ ಮನೆ ಮನೆಗೆ ಲಸಿಕೆ ಹಾಕುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಆಶಾ ಕಾರ್ಯಕರ್ತೆಯರಿಗೆ 5 ಸಾವಿರ ರೂ ಬಹುಮಾನ ರೂಪದಲ್ಲಿ ಕೊಟ್ಟಿದ್ದೇವೆ. ಇಡೀ ಜಿಲ್ಲೆಗೆ ವ್ಯಾಕ್ಸಿನೇಷನ್‌ ಆಗಬೇಕು ಎಂದಿದ್ದೇವೆ ಎಂದರು.

Latest Videos
Follow Us:
Download App:
  • android
  • ios