ಬಿಜೆಪಿ ಕಚೇರಿ ಗಾಸಿಪ್ ಕೇಂದ್ರ ಅಲ್ಲ: ರೇಣುಗೆ ಯತ್ನಾಳ್ ತಿರುಗೇಟು
ಬಿಜೆಪಿ ಕಚೇರಿ ಇರುವುದು ಪಕ್ಷದ ಸಂಘಟನೆಗಾಗಿ. ಗಾಸಿಪ್‌ಗಳೆಲ್ಲ ಸೃಷ್ಟಿಯಾಗುವುದು ಮನೆಯಲ್ಲಿ. ಅದಕ್ಕಾಗಿಯೇ ಬೇರೆ ಮನೆಗಳಿವೆ. ಆಯಾ ಮನೆಗಳಲ್ಲಿ ಗಾಸಿಪ್‌ಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದ ಯತ್ನಾಳ್

ಬೆಂಗಳೂರು(ಆ.31): ಬಿಜೆಪಿ ಕಚೇರಿ ಗಾಸಿಪ್ ಕೇಂದ್ರ ಅಲ್ಲ ಎಂದು ಪಕ್ಷದ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರಿಗೆ ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಬಿಜೆಪಿ ಕಚೇರಿ ಇರುವುದು ಪಕ್ಷದ ಸಂಘಟನೆಗಾಗಿ. ಗಾಸಿಪ್‌ಗಳೆಲ್ಲ ಸೃಷ್ಟಿಯಾಗುವುದು ಮನೆಯಲ್ಲಿ. ಅದಕ್ಕಾಗಿಯೇ ಬೇರೆ ಮನೆಗಳಿವೆ. ಆಯಾ ಮನೆಗಳಲ್ಲಿ ಗಾಸಿಪ್‌ಗಳು ಸೃಷ್ಟಿಯಾಗುತ್ತವೆ ಎಂದು ಹೇಳಿದರು.
ಲೋಕಸಭೆ ಚುನಾವಣೆ ವೇಳೆಗೆ ರಾಜಕೀಯದಲ್ಲಿ ಅನಾಹುತ: ಹೊಸ ಬಾಂಬ್ ಸಿಡಿಸಿದ ಯತ್ನಾಳ್
‘ನಾನು ಕಾಂಗ್ರೆಸ್ ಸೇರುವೆ ಎಂದು ಎಲ್ಲೂ ಹೇಳಿಲ್ಲ. ಆದರೂ ನಾನು ಕಾಂಗ್ರೆಸ್ ಸೇರುವೆ ಎಂದು ಬಿಜೆಪಿ ಕಚೇರಿಯಿಂದಲೇ ನನ್ನ ಬಗ್ಗೆ ಅಪ್ರಚಾರ ಮಾಡಲಾಗುತ್ತಿದೆ’ ಎಂದು ರೇಣುಕಾಚಾರ್ಯ ಟೀಕಿಸಿದ್ದರು.