ಪೇಮೆಂಟ್ ಬರಲಿಲ್ಲ, ದಿಂಗಾಲೇಶ್ವರ ಶ್ರೀ ನಾಮಪತ್ರ ವಾಪಸ್: ಶಾಸಕ ಯತ್ನಾಳ

ಶ್ರೀಗಳು ಹಣ ಪಡೆದಿಲ್ಲ ಎನ್ನುವುದಕ್ಕೆ ಅವರೇ ಸಾಕ್ಷಿ ಹೇಳಬೇಕು. ಅವರು ಹಣ ಪಡೆಯದೇ ಹೋಗಿದ್ದರೆ ನಾಮಪತ್ರ ಏಕೆ ವಾಪಸ್ ಪಡೆಯಬೇಕಿತ್ತು ಎಂದು ಪ್ರಶ್ನಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ 

BJP MLA Basanagouda Patil Yatnal React to Dingaleshwar Shri Withdraw His Nomination grg

ಹುಬ್ಬಳ್ಳಿ(ಏ.27):  ಫಕೀರ ದಿಂಗಾಲೇಶ್ವರ ಶ್ರೀಗಳಿಗೆ ಪೇಮೆಂಟ್ ಬಂದಿಲ್ಲ, ಹೀಗಾಗಿ ನಾಮ ಪತ್ರವನ್ನು ವಾಪಾಸ್ ಪಡೆದು ಕೊಂಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದರು.

ಶುಕ್ರವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀಗಳು ಹಣ ಪಡೆದಿಲ್ಲ ಎನ್ನುವುದಕ್ಕೆ ಅವರೇ ಸಾಕ್ಷಿ ಹೇಳಬೇಕು. ಅವರು ಹಣ ಪಡೆಯದೇ ಹೋಗಿದ್ದರೆ ನಾಮಪತ್ರ ಏಕೆ ವಾಪಸ್ ಪಡೆಯಬೇಕಿತ್ತು ಎಂದು ಪ್ರಶ್ನಿಸಿದರು.

ಹಿರಿಯ ಶ್ರೀಗಳ ಆದೇಶದಂತೆ ಲೋಕಸಭಾ ಚುನಾ‍ವಣಾ ಕಣದಿಂದ ಹಿಂದೆ ಸರಿದ ದಿಂಗಾಲೇಶ್ವರ ಸ್ವಾಮೀಜಿ

ತಪ್ಪು ಗ್ರಹಿಕೆಯಾಗಿದೆ: 

ಇದೇ ವೇಳೆ ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಪರವಾಗಿ ಮಾತನಾಡಿದ ಯತ್ನಾಳ, ಈ ಹಿಂದೆ ಅವರು ಹೈಕಮಾಂಡ್ ನಿರ್ದೇಶನದ ಮೇರೆಗೆ ಒಂದೇ ಮಾತಿಗೆ ವಿಧಾನಸಭಾ ಚುನಾವಣೆಯಿಂದ ಹಿಂದೆ ಸರಿದಿದ್ದರು. ಈ ಲೋಕಸಭಾ ಚುನಾವಣೆಯಲ್ಲಿ ಅವರನ್ನು ಪಕ್ಷವು ಪರಿಗಣಿಸಬೇಕಿತ್ತು. ಆದರೆ, ಹಾಗಾ ಗಲಿಲ್ಲ. ಏನೋ ತಪ್ಪು ಗ್ರಹಿಕೆಯಾಗಿದೆ. ಈ ಚುನಾವಣೆ ಮುಗಿದ ಬಳಿಕ ಎಲ್ಲವೂ ಸರಿಯಾಗಲಿದೆ ಎಂದರು. 

Latest Videos
Follow Us:
Download App:
  • android
  • ios