Asianet Suvarna News Asianet Suvarna News

Koppal Politics: ಮತದಾರರ ದಿಕ್ಕು ತಪ್ಪಿಸುತ್ತಿರುವ ಬಿಜೆಪಿ: ರಾಯರೆಡ್ಡಿ ಆರೋಪ

ಕುಂಕುಮ, ಕೇಸರಿ ಶಾಲು ಹಾಕುವ ಮೂಲಕ ಬಿಜೆಪಿ ವಾಮಮಾರ್ಗದ ರಾಜಕಾರಣ ಮಾಡುತ್ತಿದೆ. ಕುಂಕುಮ, ಕೇಸರಿ ಶಾಲು ಹಾಕುವ ಮೂಲಕ ಮತದಾರರ ದಿಕ್ಕು ತಪ್ಪಿಸುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಆರೋಪಿಸಿದರು.

BJP misleading voters Rai Reddy accused at kanakagiri at koppal rav
Author
First Published Dec 3, 2022, 12:16 PM IST

ಕುಕನೂರು (ಡಿ.3) : ಕುಂಕುಮ, ಕೇಸರಿ ಶಾಲು ಹಾಕುವ ಮೂಲಕ ಬಿಜೆಪಿ ವಾಮಮಾರ್ಗದ ರಾಜಕಾರಣ ಮಾಡುತ್ತಿದೆ. ಕುಂಕುಮ, ಕೇಸರಿ ಶಾಲು ಹಾಕುವ ಮೂಲಕ ಮತದಾರರ ದಿಕ್ಕು ತಪ್ಪಿಸುತ್ತದೆ ಎಂದು ಮಾಜಿ ಸಚಿವ ಬಸವರಾಜ ರಾಯರಡ್ಡಿ ಆರೋಪಿಸಿದರು.

ಗುರುವಾರ ತಾಲೂಕಿನ ಭಾನಾಪುರ ಗ್ರಾಮದಲ್ಲಿ ಕುಕನೂರು- ಯಲಬುರ್ಗಾ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಆಯೋಜಿಸಿದ್ದ ಅಭಿವೃದ್ಧಿಯ ಚಿಂತನ- ಮಂಥನ ಕಾರ್ಯಕ್ರಮದಲ್ಲಿ ಮಾತನಾಡಿ, ಯುವ ಜನತೆಯಲ್ಲಿ ಜಾತಿ, ಧರ್ಮದ ವಿಷಬೀಜ ಹಾಕುವ ಮೂಲಕ ಬಿಜೆಪಿ ರಾಜಕೀಯ ಮಾಡುತ್ತಿದೆ. ದೇಶದಲ್ಲಿ 21 ವರ್ಷಕ್ಕೆ ಮತದಾನದ ಹಕ್ಕು ಇತ್ತು.

ಜಾತಿ ರಾಜಕಾರಣಕ್ಕೆ ಕಡಿವಾಣ ಬೀಳಲಿ: ಮಾಜಿ ಸಚಿವ ಬಸವರಾಜ ರಾಯರೆಡ್ಡಿ

ಅದನ್ನು ಅಂದಿನ ಪ್ರಧಾನಿ ರಾಜೀವ ಗಾಂಧಿಯವರು 18 ವರ್ಷಕ್ಕೆ ಇಳಿಕೆ ಮಾಡಿದರು. ಕಾಂಗ್ರೆಸ್‌ ದೇಶದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿದೆ. ಸದ್ಯ ದೇಶದ ಪರಿಸ್ಥಿತಿ ಸಂಪೂರ್ಣ ಹಾಳಾಗಿದೆ. ಪ್ರಧಾನಿ ಮೋದಿ ಅವರು ಯಾವುದೇ ಹೊಸ ನೀರಾವರಿ ಯೋಜನೆ ಹಾಗೂ ಡ್ಯಾಂ ನಿರ್ಮಾಣ ಮಾಡಿಲ್ಲ. ಈ ಹಿಂದೆ ಆಡಳಿತದ ನಡೆಸಿದ ಕಾಂಗ್ರೆಸ್‌ ಸರ್ಕಾರ ಮಾಡಿದೆ. ಈಗಾಗಲೇ ಮೋದಿ ಅವರು ವಿದ್ಯಾರ್ಥಿಗಳ ಪ್ರೋತ್ಸಾಹಧನ, ರೈತರ ಹಾಗೂ ಬಡವರ ಉಚಿತ ವಿದ್ಯುತ್‌ ಬಂದ್‌ ಮಾಡುವ ಹುನ್ನಾರ ನಡೆಸಿದ್ದಾರೆ ಎಂದರು.

ಇವರು ಬಡವರು, ರೈತರ ಪರವಿಲ್ಲ. ಕೇವಲ ಮಧ್ಯಮ, ಶ್ರೀಮಂತರ ಪರ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ಪೆಟ್ರೋಲ್‌, ಅಡುಗೆ ಎಣ್ಣೆ ಸೇರಿದಂತೆ ಇತರೆ ವಸ್ತುಗಳು ಗಗನಕ್ಕೆ ಏರಿಕೆಯಾಗಿವೆ. ರುಪಾಯಿ ಮೌಲ್ಯ ಕುಸಿಯುತ್ತಿದೆ. ದೇಶದ ಅಭಿವೃದ್ಧಿ ಬಿಜೆಪಿಯಿಂದ ಸಾಧ್ಯವಿಲ್ಲ. ಇದರಿಂದ ಸಿದ್ದರಾಮಯ್ಯ ಅವರನ್ನು ಬೆಂಬಲಿಸಬೇಕು ಎಂದರು.

ಬಿಜೆಪಿ ಕೇವಲ ಕುಟುಂಬ ರಾಜಕಾರಣ ಮಾಡುತ್ತಿದ್ದು, ಅಳಿಯ, ದತ್ತು ಪುತ್ರರು ಆಡಳಿತ ನಡೆಸುತ್ತಿದ್ದಾರೆ. ನಾನು ನಾಲ್ಕೆ ೖದು ದತ್ತು ತೆಗೆದುಕೊಂಡು ರಾಜಕಾರಣ ಮಾಡಬಹುದು. ಆದರೆ, ರಾಜಕೀಯದಲ್ಲಿ ಕುಟುಂಬದ ಹಸ್ತಕ್ಷೇಪವಿರಬಾರದು ಎಂದರು.

ಅಭಿವೃದ್ಧಿ ಮಾಡುವ ಹುಚ್ಚು ನನ್ನನ್ನು ರಾಜಕೀಯಕ್ಕೆ ಕರೆತಂದಿದೆ; ಬಸವರಾಜ ರಾಯರೆಡ್ಡಿ

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಹನುಮಂತಗೌಡ ಚಂಡೂರು, ಜಿಪಂ ಮಾಜಿ ಉಪಾಧ್ಯಕ್ಷ ಯಂಕಣ್ಣ ಯರಾಶಿ, ಪಿಎಲ್‌ಡಿ ಬ್ಯಾಂಕ್‌ ಅಧ್ಯಕ್ಷ ಚಂದ್ರಶೇಖರಯ್ಯ ಹಿರೇಮಠ, ಕುಕನೂರು ಪಪಂ ಸದಸ್ಯ ಗಗನ ನೋಟಗಾರ, ನಗರ ಘಟಕದ ಅಧ್ಯಕ್ಷ ರೆಹಿಮಾನ್‌ಸಾಬ್‌ ಮಕ್ಕಪ್ಪನವರ, ಪಿಎಲ್‌ಡಿ ಬಾಂಕ್‌ ಮಾಜಿ ಅಧ್ಯಕ್ಷ ಯಲ್ಲಪ್ಪ ಮೇಟಿ ಇತರರಿದ್ದರು..

Follow Us:
Download App:
  • android
  • ios