Chikkamagaluru: ನಗರಸಭೆ ಅಧ್ಯಕ್ಷರೇ ನಿಮಗೆ ಮಾನ, ಮರ್ಯಾದೆ ಇದ್ದರೆ ನಿಮ್ಮ ಬೆಂಬಲ ತೋರಿಸಿ!
ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ರಾಜೀನಾಮೆ ಪ್ರಹಸನದಿಂದ ಆಕ್ರೋಶಗೊಂಡಿರುವ ಬಿಜೆಪಿ ನಗರಸಭಾ ಸದಸ್ಯರುಗಳು ಅವಿಶ್ವಾಸ ನಿರ್ಣಯದ ಅಸ್ತ್ರ ಬಳಸಿ ಪದತ್ಯಾಗ ಮಾಡಲು ನಿರ್ಧರಿಸಿದ್ದಾರೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಅ.16): ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ರಾಜೀನಾಮೆ ಪ್ರಹಸನದಿಂದ ಆಕ್ರೋಶಗೊಂಡಿರುವ ಬಿಜೆಪಿ ನಗರಸಭಾ ಸದಸ್ಯರುಗಳು ಅವಿಶ್ವಾಸ ನಿರ್ಣಯದ ಅಸ್ತ್ರ ಬಳಸಿ ಪದತ್ಯಾಗ ಮಾಡಲು ನಿರ್ಧರಿಸಿದ್ದಾರೆ. ಕಳೆದ ಆರು ತಿಂಗಳಿಂದ ನಗರಸಭಾ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ರಾಜೀನಾಮೆ ನೀಡುವ ಮಾತನಾಡುತ್ತ, ಸುಮಾರು ಎರಡು ಬಾರಿ ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿ ವಾಪಸ್ ಪಡೆದು ಪಕ್ಷದ ಒಪ್ಪಂದಕ್ಕೆ ಸೆಡ್ಡು ಹೊಡೆದು ನಿಂತಿದ್ದಾರೆ.
ಬಿಜೆಪಿಯಲ್ಲಿ ಪಕ್ಷದ ಆಂತರಿಕ ಒಪ್ಪಂದದಂತೆ ಸುಮಾರು ಒಂದು ವರ್ಷದ ಹಿಂದೆಯೇ ವೇಣುಗೋಪಾಲ್ ಅವರು ಅಧ್ಯಕ್ಷ ಸ್ಥಾನ ಬಿಟ್ಟು ಕೊಡಬೇಕಾಗಿದ್ದು ಇದೀಗ ಕುಂಟು ನೆಪ ಹೇಳುತ್ತಾ ಅಧಿಕಾರದಲ್ಲೇ ಮುಂದುವರೆದಿದ್ದ ವೇಣುಗೋಪಾಲ್ ಮೂರು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳಿಗೆ ಒಂದೇ ಸಾಲಿನ ರಾಜೀನಾಮೆ ಪತ್ರ ನೀಡಿ ವಾಪಸ್ ಪಡೆದಿದ್ದರು. ಇದಾದ ನಂತರ ಮೊನ್ನೆಯಷ್ಟೇ ಜಿಲ್ಲಾಧಿಕಾರಿಗಳಿಗೆ ರಾಜೀನಾಮೆ ಪತ್ರ ಸಲ್ಲಿಸಿ ಯಾರಿಗೂ ಗೊತ್ತಾಗದಂತೆ ರಾಜೀನಾಮೆಯನ್ನು ವಾಪಸ್ ಪಡೆದುಕೊಂಡು ಮೊಬೈಲ್ ಫೋನ್ ಸ್ವಿಚ್ಆಫ್ ಮಾಡಿಕೊಂಡು ಯಾರ ಕಣ್ಣಿಗೂ ಕಾಣಿಸದಂತೆ ತೆರೆಮರೆಯಲ್ಲಿ ಇದ್ದಾರೆ.
ವಿಜಯಪುರದಲ್ಲಿ ಮಳೆ ಇಲ್ಲದೆ ಬರ ತಾಂಡವ: ಸಭೆಯಲ್ಲೆ ರಾಜೀನಾಮೆ ಕೊಡ್ತೀನಿ ಎಂದ ನಾಗಠಾಣ ಶಾಸಕ
ಬಿಜೆಪಿ ಅಧ್ಯಕ್ಷನಿಗೆ ಬಿಜೆಪಿ ಸದಸ್ಯರೇ ತಾಕೀತು: ನಗರಸಭೆ ಅಧ್ಯಕ್ಷರೇ ನಿಮಗೆ ಮಾನ... ಮರ್ಯಾದೆ ಇದ್ದರೆ ನಿಮ್ಮ ಬೆಂಬಲ ತೋರಿಸಿ, ನಗರಸಭೆ ಕಾರು ಹತ್ತಿ, ನಗರಸಭೆ ಅಧ್ಯಕ್ಷರ ಕೊಠಡಿಗೆ ಬನ್ನಿ ಎಂದು ಚಿಕ್ಕಮಗಳೂರು ನಗರಸಭೆಯ ಬಿಜೆಪಿ ಅಧ್ಯಕ್ಷನಿಗೆ ಬಿಜೆಪಿ ಸದಸ್ಯರೇ ತಾಕೀತು ಮಾಡಿದ್ದಾರೆ. ಪಕ್ಷದ ಮುಖಂಡರ ಎದುರು ಕೊಟ್ಟ ಮಾತನ್ನ ಉಳಿಸಿಕೊಳ್ಳದೆ ರಾಜೀನಾಮೆ ನೀಡೋದು, ವಾಪಸ್ ಪಡೆಯೋದು ಮಾಡುತ್ತಿರುವ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ವಿರುದ್ಧ ಸದಸ್ಯರೇ ರೆಬಲ್ ಆಗಿ ಅಧ್ಯಕ್ಷರ ಛೇಂಬರ್‍ಗೆ ಕಾಲಿಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಒಂದೂವರೆ ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ 35 ವಾರ್ಡ್‍ಗಳಲ್ಲಿ 18 ವಾರ್ಡ್‍ನಲ್ಲಿ ಗೆದ್ದಿದ್ದ ಬಿಜೆಪಿ 18 ಹಾಗೂ 12 ತಿಂಗಳಿಗೆ ಒಬ್ಬೊಬ್ಬರು ಅಧ್ಯಕ್ಷರು ಎಂದು ಮಾತುಕತೆಯಾಗಿ ಮೊದಲ ಅವಧಿಗೆ ವೇಣುಗೋಪಾಲ್ ಅಧ್ಯಕ್ಷರಾಗಿದ್ದರು. 18 ತಿಂಗಳ ಬಳಿಕ ಈಗ ರಾಜೀನಾಮೆ ನೀಡೋದಕ್ಕೆ ಹಿಂದೇಟು ಹಾಕ್ತಿದ್ದು ರಾಜೀನಾಮೆ ನೀಡಿ ವಾಪಸ್ ಪಡೆದು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಟ್ರಿಪ್ ಹೋಗಿದ್ದಾರೆ. ಇದು ಸದಸ್ಯರ ಕಣ್ಣನ್ನ ಕೆಂಪಾಗಿಸಿದ್ದು ಅಧ್ಯಕ್ಷರ ವಿರುದ್ಧ ರೆಬಲ್ ಆಗಿದ್ದು, ಜಿಲ್ಲಾಧಿಕಾರಿಗೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಮುಂದಾಗಿದ್ದಾರೆ.
ಬಿಜೆಪಿಯ 17 ಮಂದಿ ನಗರ ಸಭೆ ಸದಸ್ಯರಿಂದ ಸಭೆ: ಅಧ್ಯಕ್ಷರಿಗೆ ಸಪೋರ್ಟ್ ಮಾಡಲ್ಲ. ಅವರ ಕೆಲಸಗಳಿಗೆ ಸಹಕಾರ ಕೊಡಲ್ಲ. ನಾವು 17 ಜನ ಬಿಟ್ಟ ಮೇಲೆ ಯಾರು ನಿಮಗೆ ಬೆಂಬಲ ಕೊಡುತ್ತಾರೆ. ಅವರ ಬೆಂಬಲದ ಮೆಜಾರಿಟಿ ತೋರಿಸಿಯೇ ನೀವು ನಗರಸಭೆ ಅಧ್ಯಕ್ಷರ ಛೇಂಬರ್‍ಗೆ ಕಾಲಿಡಬೇಕೆಂದು ತಾಕೀತು ಮಾಡಿದ್ದು, ಅಲ್ಲಿವರಗೆ ನಗರಸಭೆ ಸೌಲಭ್ಯ ಪಡೆಯುವಂತಿಲ್ಲ. ಕಾರನ್ನ ಬಳಸುವಂತಿಲ್ಲ ಎಂದು ಆಗ್ರಹಿಸಿದ್ದು, ಅವರು ಅಧಿಕಾರ ನೀಡಿದ ಬಿಜೆಪಿಗೆ ಮಾಡಿದ ದ್ರೋಹಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಬಿಜೆಪಿ ನಗರಸಭಾ ಸದಸ್ಯ ರಾಜೇಶೇಖರ್ ತಿಳಿಸಿದ್ದಾರೆ.
ಜನಸಮಾಧಿ ಮೇಲೆ ಬ್ರ್ಯಾಂಡ್ ಬೆಂಗಳೂರು ಕಟ್ಟಲು ಬಿಡಲ್ಲ: ಎಚ್.ಡಿ.ಕುಮಾರಸ್ವಾಮಿ
ಅಧ್ಯಕ್ಷರ ಈ ನಿರ್ಧಾರದಿಂದ ಆಕ್ರೋಶಗೊಂಡಿರುವ ಬಿಜೆಪಿಯ 17 ಮಂದಿ ನಗರ ಸಭೆ ಸದಸ್ಯರಾದ ಟಿ.ರಾಜಶೇಖರ್, ಮಧುಕುಮಾರ್ ಅರಸ್, ಉಮಾ ಕೃಷ್ಣಪ್ಪ, ಕವಿತಾಶೇಖರ್ ಮುಂತಾದ ಸದಸ್ಯರು ನಗರಸಭೆ ಅಧ್ಯಕ್ಷರ ಕಚೇರಿಯಲ್ಲಿ ಸಭೆ ಸೇರಿ ವೇಣುಗೋಪಾಲ್ ವಿರುದ್ಧ ಅವಿಶ್ವಾಸ ಮಂಡಿಸುವ ತೀರ್ಮಾನ ಕೈಗೊಂಡು ನಾಳೆ (ಮಂಗಳವಾರ) ಜಿಲ್ಲಾಧಿಕಾರಿಗಳಿಗೆ ಅವಿಶ್ವಾಸ ನಿರ್ಣಯ ಮಂಡಿಸುವ ಪತ್ರ ಸಲ್ಲಿಸಲಿದ್ದಾರೆ.ಒಟ್ಟಾರೆ ಚಿಕ್ಕಮಗಳೂರು ನಗರಸಭೆಯ ಅಧ್ಯಕ್ಷಗಾದಿ ಹೈಡ್ರಾಮಾ ಸದ್ಯಕ್ಕೆ ಮುಗಿಯುವ ಲಕ್ಷಣ ಕಾಣ್ಣುತ್ತಿಲ್ಲ, ನಗರಸಭೆಗೆ ಹಾಲಿ ಅಧ್ಯಕ್ಷರಾದ ವರಸಿದ್ದ ವೇಣುಗೋಪಾಲ್ ಆಗಮಿಸಿದಾಗ ಯಾವ ಪರಿಸ್ಥಿತಿ ನಿರ್ಮಾಣವಾಗಲಿದೆ, ಕಾಂಗ್ರೆಸ್ , ಜೆಡಿಎಸ್ ನಿಲುವು ಕೂಡ ಸ್ಪಷ್ಟವಾಗಿ ಹೊರಬರಲಿದೆ.