Yadagiri: ಬಿಜೆಪಿಯ ಅದ್ದೂರಿ ಕಾರ್ಯಕ್ರಮಕ್ಕೆ ಆಕ್ಷೇಪ, ಬಿಜೆಪಿ ತೆರಿಗೆ ಹಣ ಲೂಟಿಗಿಳಿದಿದೆ ಎಂದ ಕಾಂಗ್ರೆಸ್

ಬಿಜೆಪಿ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. 

BJP looted tax money congress allegations gow

ವರದಿ: ಪರಶುರಾಮ ಐಕೂರ್, ಏಷ್ಯಾನೆಟ್ ಸುವರ್ಣ ನ್ಯೂಸ್

ಯಾದಗಿರಿ (ಡಿ.30): ಯಾದಗಿರಿ, ಬೀದರ್, ಕಲಬುರಗಿ, ವಿಜಯಪುರ, ರಾಯಚೂರು ಜಿಲ್ಲೆಗಳಲ್ಲಿನ ಗುರುತಿಸಿರುವ ನಿವಾಸಗಳಿಗೆ ಹಕ್ಕುಪತ್ರ ವಿತರಣೆ ಮಾಡಲು ಸರ್ಕಾರ ಕಾರ್ಯಕ್ರಮ ಆಯೋಜನೆ ಮಾಡಿದೆ. ಈ ಕಾರ್ಯಕ್ರಮಕ್ಕಾಗಿ ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ 2022 ರಂದು ಯಾದಗಿರಿ ಜಿಲ್ಲಾಧಿಕಾರಿಗಳು ಖರ್ಚು ವೆಚ್ಚದ ಪ್ರಸ್ತಾಪವೆಯನ್ನು ಕಳುಸಿದ್ದಾರೆ. ಅದು ಸಚಿವ ಸಂಪುಟದಲ್ಲಿ ಅನುಮೋದನೆಗೊಂಡು 7 ಕೋಟಿ ರೂಪಾಯಿ ವೆಚ್ಚಕ್ಕೆ ಖರ್ಚು ಮಾಡುತ್ತಿರುವುದು ಇದು ಬಿಜೆಪಿ ಸಾರ್ವಜನಿಕರ ತೆರಿಗೆ ಹಣವನ್ನು ಲೂಟಿ ಮಾಡ್ತಿದೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪುರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕರ ತೆರಿಗೆ ಹಣದಿಂದ ಬಿಜೆಪಿ ಪ್ರಚಾರಕ್ಕೆ ಇಳಿದಿದೆ: ಬಸರೆಡ್ಡಿ ಕಿಡಿ
ಯಾದಗಿರಿ ಜಿಲ್ಲೆಯಲ್ಲಿ ತಾಂಡಾಗಳನ್ನು ಕಂದಾಯ ಗ್ರಾಮವಾಗಿ ಸರ್ಕಾರ ಘೋಷಿಸಿ ಅಲ್ಲಿನ ಜ‌ನರಿಗೆ ಹಕ್ಕು ಪತ್ರ ನೀಡುವ ಬೃಹತ್ ಕಾರ್ಯಕ್ರಮಕ್ಕೆ ಮುಂದಾಗಿದೆ. ಚುನಾವಣೆ ಕೆಲವೇ ತಿಂಗಳು ಇರುವುದರಿಂದ ಇದು ವಿಪಕ್ಷ ಕಾಂಗ್ರೆಸ್ ಕಣ್ಣು ಕೆಂಪಾಗಿಸಿದೆ. ಆದ್ರೆ ಇದನ್ನು ಕಾಂಗ್ರೆಸ್ ಪ್ರಬಲ ವಿರೋಧ ಮಾಡುತ್ತಿದ್ದು, ದುಬಾರಿ ವೆಚ್ಚದ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಬಿಜೆಪಿ ಪಕ್ಷ ಸರ್ಕಾರದ ಕಾರ್ಯಕ್ರಮದ ಮೂಲಕ ಬಿಜೆಪಿ ಸರ್ಕಾರ ಚುನಾವಣೆಯ ಪ್ರಚಾರಕ್ಕೆ ಮುಂದಾಗಿದೆ ಎಂದರು. ಇಂದು ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಜಿಲ್ಲಾಧ್ಯಕ್ಷ ಬಸರೆಡ್ಡಿ ಅನಪೂರ ಬಿಜೆಪಿ ಸರ್ಕಾರ ಅದ್ದೂರಿ ವೆಚ್ಚದ ಕಾರ್ಯಕ್ರಮದ ಮೂಲಕ ತನ್ನ ಚುನಾವಣಾ ಪ್ರಚಾರ ನಡೆಸುತ್ತಿದೆ. ಬಿಜೆಪಿ ಸರ್ಕಾರ ಜಿಲ್ಲೆಯಲ್ಲಿ ತಾಂಡಾಗಳನ್ನು ಕಂದಾಯಗಳನ್ನಾಗಿ ಘೋಷಿಸಲು ಮುಂದಾಗಿದ್ದು ಅದ್ದೂರಿ ಕಾರ್ಯಕ್ರಮ ಆಯೋಜಿಸಲು ತಯಾರಿ ನಡೆಸಿದೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕಂದಾಯ ಗ್ರಾಮ ಹಕ್ಕುಪತ್ರ ವಿತರಣೆ ಕಾರ್ಯಕ್ರಮಕ್ಕೆ 7 ಕೋಟಿ ಖರ್ಚು: ಕಾಂಗ್ರೆಸ್
ತಾಂಡಾದಲ್ಲಿ ವಾಸಿಸುವ ಜ‌ನರ ಬಹುದಿನಗಳ ಬೇಡಿಕೆಯಾಗಿದ್ದ ಕಂದಾಯ ಗ್ರಾಮ ಹಾಗೂ ಹಕ್ಕುಪತ್ರ ವಿತರಣೆ ಕಾರ್ಯಕ್ರಮ ಇದು ಬಿಜೆಪಿ ಸರ್ಕಾರ ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿರುವ ಬಂಜಾರ ಸಮಯದಾಯ ಜನರ ಮತವನ್ನು ಭದ್ತಪಡಿಸಿಕೊಳ್ಳುವ ಫ್ಲಾನ್ ಕೂಡ ಇರುವಂತದ್ದು. ಹಾಗಾಗಿ ಕೇಂದ್ರ ಪ್ರಭಾವಿ ನಾಯಕರನ್ನು ಕರೆಸಿ ಅದ್ದೂರಿ ಕಾರ್ಯಕ್ರಮ ಮಾಡಲು ಬಿಜೆಪಿ ಮುಂದಾಗಿದೆ. ಈ ಕಾರ್ಯಕ್ರಮಕ್ಕೆ ಅಂದಾಜು ರೂ 7 ಕೋಟಿ ಅನುದಾನ ಬಿಡುಗಡೆ ಮಾಡಲು ಆರ್ಥಿಕ‌ ಇಲಾಖೆ ನೀಡಿದ ಅನುಮೋದನೆಗೆ ಸಚಿವ ಸಂಪುಟ ಸಭೆ‌ ಕೂಡ ಅನುಮೋದನೆ ನೀಡಿದೆ. ಕಾರ್ಯಕ್ರಮ ಆಯೋಜನೆಗೆ ತಗಲುವ ವೆಚ್ಚದ ಅಂದಾಜು ಮಾಡಿದ ಯಾದಗಿರಿ ಜಿಲ್ಲಾಡಳಿತ ನವೆಂಬರ್ 17, 2022 ರಂದು ರೂ 8.96 ಕೋಟಿ ಪ್ರಸ್ತಾವನೆಯನ್ನು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಕಳಿಸಿತ್ತು. 

ಫಲಾನುಭವಿಗಳಿಗೆ ಹಕ್ಕುಪತ್ರ ವಿತರಣೆಗೆ ಸರ್ಕಾರ ಯೋಚಿಸಿದ್ದು ಯಾದಗಿರಿ, ಕಲಬುರಗಿ, ವಿಜಯಪುರ, ಬೀದರ್ ಹಾಗೂ ರಾಯಚೂರು ಜಿಲ್ಲೆಯ 1.30 ಲಕ್ಷ ಫಲಾನುಭವಿಗಳು ಭಾಗವಹಿಸುತ್ತಿರುವುದರಿಂದ ಕಾರ್ಯಕ್ರಮದ  ವೆಚ್ಚಕ್ಕೆ ರೂ 8.96 ಕೋಟಿ ಖರ್ಚಾಗುತ್ತದೆ ಎಂದು ಜಿಲ್ಲಾಡಳಿತ ಅಂದಾಜಿಸಿ ಅನುಮೋದನೆಗಾಗಿ ಕಳಿಸಿತ್ತು. ಆರ್ಥಿಕ ಇಲಾಖೆ ಸದರಿ ಹಣಕ್ಕೆ ರೂ 7 ಕೋಟಿ ಅನುಮೋದನೆ ನೀಡಿದ್ದನ್ನೆ ಸಚಿವ ಸಂಪುಟ ಅನುಮೋದಿಸಿತ್ತು. ಇದನ್ನೇ ಪ್ರಶ್ನಿಸಿದ ಕಾಂಗ್ರೆಸ್ ಕೇವಲ ಒಂದು‌ ದಿನದ ಕಾರ್ಯಕ್ರಮಕ್ಕೆ ಅದು ಕೇವಲ 300 ಕಿಮಿ ವ್ಯಾಪ್ತಿಯ ಜನರನ್ನು ಕರೆದು ತಂದು ಕಾರ್ಯಕ್ರಮ ನಡೆಸಲು ಇಷ್ಟೊಂದು ಹಣ ವೆಚ್ಚ ಮಾಡುವುದು ಸರಿಯೇ? ಎಂದು ಬಸರೆಡ್ಡಿ ಅನಪೂರ ಪ್ರಶ್ನಿಸಿದ್ದಾರೆ.

ಯಾದಗಿರಿ: ಬಸವಸಾಗರಕ್ಕೆ ದೆಹಲಿ ವಕೀಲರ ತಂಡ ಭೇಟಿ

ಸರ್ಕಾರದ ನಿರ್ಧಾರಕ್ಕೆ ಕಾಂಗ್ರೆಸ್ ವಿರೋಧ
ಸರ್ಕಾರ ತಮ್ಮ ಸಾಧನೆಗಳನ್ನು ಜನರಿಗೆ ತಲುಪಿಸಲು ಹೊರಟಿರುವ ಈ ಕಾರ್ಯಕ್ರಮಕ್ಕೆ ಯಾದಗಿರಿ ಜಿಲ್ಲಾ ಕಾಂಗ್ರೆಸ್ ಇಂತಹ ವೈಭವಪೂರಿತ, ಅದ್ದೂರಿ, ದುಬಾರಿ ಕಾರ್ಯಕ್ರಮ ಇದು ಜನವಿರೋಧಿ. ಜನರ ತೆರಿಗೆ ಹಣವನ್ನು ಬೇಕಾಬಿಟ್ಟಿ ಬಳಸಲು ನಾವು ಬಿಡುವುದಿಲ್ಲ. ಸರ್ಕಾರದ‌ ಈ ನಿರ್ಧಾರವನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತಿದೆ ಎಂದ ಅವರು, ಸರ್ಕಾರದ ಸಾರ್ವಜನಿಕರ ತೆರಿಗೆ ಹಣ ಲೂಟಿ ಮಾಡುತ್ತಿದೆ. ಕಾಂಗ್ರೆಸ್ ಪಕ್ಷ ಬಿಜೆಪಿ ಸರ್ಕಾರದ ಈ ನಡೆಯನ್ನು ವಿರೋಧಿಸುತ್ತಿದೆ ಎಂದರು.

 

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ 300 ಕೋಟಿ ವೆಚ್ಚ

ಬಿಜೆಪಿ ಅಧಿಕಾರದಲ್ಲಿ ಭ್ರಷ್ಟಾಚಾರ ವ್ಯಾಪಿ: ಬಸರೆಡ್ಡಿ
ಯಾದಗಿರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಅನಪುರ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶಗೊಂಡರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ‌ ಬಂದ ಮೇಲೆ ಭ್ರಷ್ಟಾಚಾರ ವ್ಯಾಪಕವಾಗಿದೆ. ಜನ ಜನಸಾಮಾನ್ಯರು ಬದುಕಲು ಆಗುತ್ತಿಲ್ಲ. ಯಾದಗಿರಿ ಜಿಲ್ಲೆ ನೆರೆ ಹಾಗೂ ಬರದಿಂದ ರೈತರ ಬೆಳೆಗಳು ಸಂಪೂರ್ಣ ಹಾನಿಯಾದ್ರು,  ಸರಿಯಾದ ಪರಿಹಾರ ವಿತರಣೆ ಮಾಡಿಲ್ಲ ಎಂದು ಟೀಕಿಸಿದರು.

Latest Videos
Follow Us:
Download App:
  • android
  • ios