ಇದೀಗ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟ ಒಟ್ಟಾರೆಯಾಗಿ 366 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 303 ಮತ್ತು ಎನ್‌ಡಿಎ ಮೈತ್ರಿಕೂಟ ಒಟ್ಟಾರೆ 353 ಸ್ಥಾನ ಗೆದ್ದುಕೊಂಡಿತ್ತು. ಇನ್ನು ಎನ್‌ಡಿಎ ಸೋಲಿಸಲು ರೂಪುಗೊಂಡಿದ್ದ ಇಂಡಿಯಾ ಮೈತ್ರಿಕೂಟ 104 ಸ್ಥಾನಕ್ಕೆ, ಇತರರು 74 ಗೆಲ್ಲಲಿದ್ದಾರೆ ಎಂದು ಸಮೀಕ್ಷಾ ವರದಿ ಹೇಳಿದೆ.
ನವದೆಹಲಿ(ಫೆ.08): ಲೋಕಸಭೆಗೆ ಇದೀಗ ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟ 366 ಸ್ಥಾನಗಳನ್ನು ಗೆಲ್ಲುವ ಮೂಲಕ ಹ್ಯಾಟ್ರಿಕ್ ಗೆಲುವು ಸಾಧಿಸಲಿದೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಮೈತ್ರಿಕೂಟ ಯಾವುದೇ ಮ್ಯಾಜಿಕ್ ಮಾಡುವ ಸಾಧ್ಯತೆ ಇಲ್ಲ. ಅದು ಕೇವಲ 104 ಸ್ಥಾನ ಗೆಲ್ಲಬಹುದು. ಇತರರು 74 ಗೆಲ್ಲಬಹುದು ಎಂದು ಸಮೀಕ್ಷಾ ವರದಿಯೊಂದು ಹೇಳಿದೆ. ಮುಂದಿನ ಮೇ ತಿಂಗಳಲ್ಲಿ ನಡೆಯಬೇಕಿರುವ ಲೋಕಸಭಾ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವ ಬೆನ್ನಲ್ಲೇ ಟೈಮ್ಸ್ ನೌ ಮತ್ತು ಮ್ಯಾಟ್ರಿಜ್ ಸಮೀಕ್ಷೆ ನಡೆಸಿ ವರದಿಯೊಂದನ್ನು ಬಿಡುಗಡೆ ಮಾಡಿದೆ.
ಎನ್‌ಡಿಎ ಹ್ಯಾಟ್ರಿಕ್:
ಇದೀಗ ಚುನಾವಣೆ ನಡೆದರೆ ಎನ್‌ಡಿಎ ಮೈತ್ರಿಕೂಟ ಒಟ್ಟಾರೆಯಾಗಿ 366 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ. ಕಳೆದ ಚುನಾವಣೆಯಲ್ಲಿ ಬಿಜೆಪಿ 303 ಮತ್ತು ಎನ್‌ಡಿಎ ಮೈತ್ರಿಕೂಟ ಒಟ್ಟಾರೆ 353 ಸ್ಥಾನ ಗೆದ್ದುಕೊಂಡಿತ್ತು. ಇನ್ನು ಎನ್‌ಡಿಎ ಸೋಲಿಸಲು ರೂಪುಗೊಂಡಿದ್ದ ಇಂಡಿಯಾ ಮೈತ್ರಿಕೂಟ 104 ಸ್ಥಾನಕ್ಕೆ, ಇತರರು 74 ಗೆಲ್ಲಲಿದ್ದಾರೆ ಎಂದು ಸಮೀಕ್ಷಾ ವರದಿ ಹೇಳಿದೆ.
ಮೋದಿ ಮತ್ತೆ ಪ್ರಧಾನಿಯಾಗೋದು ನಿಶ್ಚಿತ: ಮಾಜಿ ಶಾಸಕ ಚರಂತಿಮಠ
ಯಾವ ರಾಜ್ಯಗಳಲ್ಲಿ ಯಾರಿಗೆ ಜಯ?:
ಉಳಿದಂತೆ ಉತ್ತರಪ್ರದೇಶದಲ್ಲಿ ಬಿಜೆಪಿ 77, ಎಸ್‌ಪಿ ಮತ್ತು ಆರ್‌ಎಲ್‌ಡಿ 3, ಮಹಾರಾಷ್ಟ್ರದಲ್ಲಿ ಎನ್‌ಡಿಎ 39, ಮಹಾವಿಕಾಸ ಅಘಾಡಿ 9; ಆಂಧ್ರದಲ್ಲಿ ವೈಎಸ್‌ಆರ್ ಕಾಂಗ್ರೆಸ್ 19, ಟಿಡಿಪಿ-ಜನಸೇನಾ 6; ತೆಲಂಗಾಣದಲ್ಲಿ ಕಾಂಗ್ರೆಸ್ 9, ಬಿಜೆಪಿ 5, ಬಿಆರ್‌ಎಸ್ 2, ಎಐಎಂಐಎಂ 1; ತಮಿಳುನಾಡಲ್ಲಿ ಇಂಡಿಯಾ ಮೈತ್ರಿಕೂಟ 36, ಎಐಎಡಿಎಂಕೆ 2, ಬಿಜೆಪಿ 1, ಪಶ್ಚಿಮ ಬಂಗಾಳದಲ್ಲಿ ಟಿಎಂಸಿ 26, ಬಿಜೆಪಿ 15, ಕಾಂಗ್ರೆಸ್ ಮತ್ತು ಎಡಪಕ್ಷಗಳು 1; ಗುಜರಾತ್‌ನಲ್ಲಿ ಬಿಜೆಪಿ ಎಲ್ಲ 26; ರಾಜಸ್ಥಾನದಲ್ಲಿ ಬಿಜೆಪಿ ಎಲ್ಲ 25; ಛತ್ತೀಸ್‌ಗಢ ಬಿಜೆಪಿ ಎಲ್ಲ 11; ದೆಹಲಿ ಬಿಜೆಪಿ ಎಲ್ಲ 7; ಪಂಜಾಬ್ ಆಪ್ 5, ಬಿಜೆಪಿ ಮತ್ತು ಕಾಂಗ್ರೆಸ್ ತಲಾ 3, ಶಿರೋಮಣಿ ಅಕಾಲಿದಳ 1; ಹರ್ಯಾಣ ಬಿಜೆಪಿ 9, ಕಾಂಗ್ರೆಸ್ 1; ಒಡಿಶಾದಲ್ಲಿ ಬಿಜೆಪಿ 11, ಬಿಜೆಡಿ 9, ಕಾಂಗ್ರೆಸ್ 1; ಬಿಹಾರದಲ್ಲಿ ಎನ್‌ಡಿಎ 35, ಇಂಡಿಯಾ 5; ಜಾರ್ಖಂಡ್‌ನಲ್ಲಿ ಎನ್‌ಡಿಎ 13, ಇಂಡಿಯಾ ಮೈತ್ರಿಕೂಟ 1 ಸ್ಥಾನ ಗೆಲ್ಲಬಹುದು ಎಂದು ಸಮೀಕ್ಷೆ ಹೇಳಿದೆ.
ಕರ್ನಾಟಕದಲ್ಲಿ ಬಿಜೆಪಿ ಭಾರೀ ಜಯ
ನವದೆಹಲಿ: ಸಮೀಕ್ಷೆ ಅನ್ವಯ ಕರ್ನಾಟಕದಲ್ಲಿ ಬಿಜೆಪಿ 21 ಸ್ಥಾನ ಗೆಲ್ಲುವ ಮೂಲಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಇನ್ನು ಆಡಳಿತಾರೂಢ ಕಾಂಗ್ರೆಸ್ 5 ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬಂದರೆ, ಬಿಜೆಪಿ ಜೊತೆ ಮೈತ್ರಿ ಘೋಷಿಸಿರುವ ಜೆಡಿಎಸ್ 2 ಸ್ಥಾನ ಗೆಲ್ಲಲಿದೆ ಎಂದು ಸಮೀಕ್ಷೆ ಹೇಳಿದೆ. 2019ರ ಚುನಾವಣೆಯಲ್ಲಿ ಬಿಜೆಪಿ 25, ಕಾಂಗ್ರೆಸ್, ಜೆಡಿಎಸ್, ಪಕ್ಷೇತರರು ತಲಾ 1 ಸ್ಥಾನ ಗೆದ್ದಿದ್ದರು.
ಪ್ರಧಾನಿ ಅಭ್ಯರ್ಥಿ ಯಾರಾಗಬೇಕು?
ನರೇಂದ್ರ ಮೋದಿ ಶೇ.61.4
ರಾಹುಲ್ ಗಾಂಧಿ ಶೇ.31.8
ಕೇಜ್ರಿವಾಲ್ ಶೇ.3.7
ಇತರರು ಶೇ.3.1
