ಖಾನಾಪುರದಲ್ಲಿ ಒಂದಾದ ಕಮಲ ಕಲಿಗಳು: ಕೈ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್‌ಗೆ ಬಿಗ್ ಶಾಕ್!
ಬೆಳಗಾವಿಯ ಖಾನಾಪುರದಲ್ಲಿ ಎಂಇಎಸ್ ಹಾಗೂ ಬಿಜೆಪಿಯನ್ನು ಮಣಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್‌ಗೆ ಠಕ್ಕರ್ ಕೊಡಲು ಬಿಜೆಪಿ ಕಲಿಗಳು ಸಿದ್ಧರಾಗಿದ್ದಾರೆ.
ವರದಿ: ಅನಿಲ್ ಕಾಜಗಾರ, ಏಷ್ಯಾನೆಟ್ ಸುವರ್ಣ ನ್ಯೂಸ್
ಬೆಳಗಾವಿ (ಏ.02): ಒಂದು ಕಾಲದಲ್ಲಿ ಎಂಇಎಸ್ ನ ಭದ್ರಕೋಟೆಯಾಗಿದ್ದ ಖಾನಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲ್ಲಿಸಿದ್ದು ಡಾ. ಅಂಜಲಿ ನಿಂಬಾಳ್ಕರ್. ಕಳೆದ ಚುನಾವಣೆಯಲ್ಲಿ ಅಚ್ಛರಿ ರೀತಿಯಲ್ಲಿ ಗೆಲುವು ದಾಖಲಿಸುವ ಮೂಲಕ ಡಾ. ಅಂಜಲಿ ಬಿಜೆಪಿ ಹಾಗೂ ಎಂಇಎಸ್ ಶಾಕ್ ಕೊಟ್ಟಿದ್ದರು. ಆದರೆ ಬರುವ ಚುನಾವಣೆಯಲ್ಲಿ ಡಾ. ಅಂಜಲಿಗೆ ಸೋಲಿನ ರುಚಿ ತೋರಿಸಲು ಭಿನ್ನಮತ ಮರೆತು ಕಮಲ ಕಲಿಗಳು ಒಂದಾಗಿದ್ದಾರೆ. ಬಿಜೆಪಿಯ ಭಿನ್ನಮತದ ಲಾಭ ಪಡೆದು ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿದ್ದ ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ಶಾಕ್ ಗೆ ಒಳಗಾಗಿದ್ದಾರೆ.
ಪಶ್ಚಿಮ ಘಟ್ಟಗಳ ಪ್ರದೇಶದ ಮಡಿಲ್ಲಲ್ಲಿರುವ ಖಾನಾಪುರ ಕ್ಷೇತ್ರ ಅತಿ ಹೆಚ್ಚು ಮರಾಠಿ ಭಾಷಿಕರನ್ನು ಹೊಂದಿದೆ. ಈ ಕಾರಣಕ್ಕೆ ಇಲ್ಲಿ ಮೊದಲಿನಿಂದಲೂ ಎಂಇಎಸ್ ಪ್ರಭಾವ ಹೊಂದಿತ್ತು. ಆದರೀಗ ಜಿಲ್ಲೆಯಲ್ಲಿ ಎಂಇಎಸ್ ಸಂಪೂರ್ಣ ನಿರ್ಣಾಮವಾಗಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ ಮತದಾರರು ನಾಡದ್ರೋಹಿ ಎಂಇಎಸ್ ನ್ನು ಮನೆಗೆ ಕಳಿಸಿದ್ದಾರೆ. ಕಳೆದ ಚುನಾವಣೆಯಲ್ಲಿ ಖಾನಾಪುರ ಹಾಗೂ ಬೆಳಗಾವಿ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ ಸೋತು ಕಂಗಾಲಾಗಿದ್ದ ಎಂಇಎಸ್ ಒಂದೂವರೆ ವರ್ಷಗಳ ಹಿಂದೆ ನಡೆದ ಮಹಾನಗರ ಪಾಲಿಕೆ ಚುನಾವಣೆಯಲ್ಲೂ ಹೀನಾಯ ಸೋಲು ಅನುಭವಿಸಿ ಜಿಲ್ಲೆಯಲ್ಲೀಗ ತನ್ನ ನೆಲೆ ಕಳೆದುಕೊಂಡಿದೆ.
ಕಾರ್ಮಿಕ ಮಹಿಳೆಯರಿಗೆ ಬಸ್‌ಪಾಸ್ ಕೊಡದೇ ಏಪ್ರಿಲ್ ಫೂಲ್ ಮಾಡಿದ ಸಿಎಂ ಬೊಮ್ಮಾಯಿ : ಡಿಕೆ ಶಿವಕುಮಾರ ಟೀಕೆ
ವೀಕ್ಷಕರ ಎದುರು ಒಗ್ಗಟ್ಟು ಪ್ರದರ್ಶನ: ಖಾನಾಪುರ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ 10ಕ್ಕೂ ಅಧಿಕ ಆಕಾಂಕ್ಷಿಗಳಿದ್ದರು. ಈಗ ನಾಲ್ವರ ಮಧ್ಯೆ ಟಿಕೆಟ್ ಗಾಗಿ ಪೈಪೋಟಿ ತೀವ್ರಗೊಂಡಿದೆ. ಎರಡು ದಿನಗಳ ಹಿಂದೆ ಬೆಳಗಾವಿಯ ಧರ್ಮನಾಥ ಭವನದ ಎದುರು ಒಗ್ಗಟ್ಟು ಪ್ರದರ್ಶಿಸಿದ್ದ ನಾಲ್ವರೂ ಆಕಾಂಕ್ಷಿಗಳು ಭಿನ್ನಮತ ಮರೆತು ಒಂದಾಗಿದ್ದಾರೆ. ಬಿಜೆಪಿ ಹೈಕಮಾಂಡ್ ಯಾರಿಗೆ ಟಿಕೆಟ್ ನೀಡಿದರೂ ಬಿಜೆಪಿ ಬೆಂಬಲಿಸುವುದಾಗಿ ಕಮಲ ಕಲಿಗಳು ಒಕ್ಕೊರಲಿನ ಹೇಳಿಕೆ ನೀಡಿದ್ದಾರೆ. ಎಂಇಎಸ್ ತೊರೆದು ಬಿಜೆಪಿ ಸೇರಿರುವ ಮಾಜಿ ಶಾಸಕ ಅರವಿಂದ ಪಾಟೀಲ, ವಿಠ್ಠಲ ಹಲಗೇಕರ, ಡಾ. ಸೋನಾಲಿ ಸರನೋಬಾತ್, ಪ್ರಮೋದ ಕೊಚೇರಿ ಮಧ್ಯೆ ಪೈಪೋಟಿ ಏರ್ಪಟ್ಟಿದೆ.
ಪ್ರಮಾಣ ಮಾಡಿಸಿದ್ದ ಸಿಎಂ ಬೊಮ್ಮಾಯಿ: ಈ ಹಿಂದೆ ಖಾನಾಪುರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ 10 ಆಕಾಂಕ್ಷಿಗಳನ್ನು ಸಾಲಾಗಿ ನಿಲ್ಲಿಸಿ ಬಿಜೆಪಿ ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಿರುತ್ತೇವೆ. ಟಿಕೆಟ್ ಯಾರಿಗೆ ಸಿಕ್ಕರೂ ಅವರ ಪರ ಕೆಲಸ ಮಾಡುತ್ತೇವೆ ಎಂದು ಪ್ರಮಾಣ ಮಾಡಿಸಿದ್ದರು. ಸಿಎಂ ಹೇಳಿದಂತೆಯೇ ನಡೆದುಕೊಳ್ಳುತ್ತಿರುವ ಆಕಾಂಕ್ಷಿಗಳೂ ನಡೆದುಕೊಳ್ಳುತ್ತಿದ್ದು, ಭಿನ್ನಮತದ ಲಾಭ ಗಿಟ್ಟಿಸಿಕೊಳ್ಳಲು ಉತ್ಸುಕರಾಗಿದ್ದ ಶಾಸಕಿ ಅಂಜಲಿ ನಿಂಬಾಳ್ಕರ್ ಇದೀಗ ಶಾಕ್ ಗೆ ಒಳಗಾಗಿದ್ದಾರೆ. ಟಿಕೆಟ್ ಹಂಚಿಕೆಯ ನಂತರ ನಾಲ್ವರೂ ಆಕಾಂಕ್ಷಿಗಳು ನುಡಿದಂತೆ ನಡೆದುಕೊಳ್ಳುತ್ತಾರೆಯೇ? ಎಂಬುದೇ ಇದೀಗ ಕುತೂಹಲ. ನುಡಿದಂತೆ ನಡೆದರೆ ಬಿಜೆಪಿಗೆ ವರವಾಗಲಿದ್ದು, ಶಾಸಕಿ ನಿಂಬಾಳ್ಕರ್ ಗೆ ತುಸು ಕಷ್ಟವಾಗಲಿದೆ ಎನ್ನಲಾಗುತ್ತಿದೆ.
ಕೇವಲ 5 ರೂ.ಗೆ ಬಾಲಕನ ಕೊಲೆ ಮಾಡಿದ ಆರೋಪಿ: ತಲೆ ಮೇಲೆ ಕಲ್ಲು ಎತ್ತಿಹಾಕಿ ಭೀಕರ ಹತ್ಯೆ
ಕಾಂಗ್ರೆಸ್ ಧ್ವಜ ಹಾರಿಸಿದ್ದ ಅಂಜಲಿಗೆ ಟಫ್ ಫೈಟ್: 1967 ರಿಂದ 2018ರ ಚುನಾವಣೆವರೆಗೆ ಖಾನಾಪುರ ಕ್ಷೇತ್ರ 12 ವಿಧಾನಸಭೆ ಚುನಾವಣೆಗಳಿಗೆ ಸಾಕ್ಷಿಯಾಗಿದೆ. 12 ವಿಧಾನಸಭೆ ಚುನಾವಣೆಗಳ ಪೈಕಿ 10 ಸಲ ಇಲ್ಲಿ ಎಂಇಎಸ್ ಗೆದ್ದಿದೆ. ಒಮ್ಮೆ ಬಿಜೆಪಿ ಹಾಗೂ ಮತ್ತೊಮ್ಮೆ ಕಾಂಗ್ರೆಸ್ ಇಲ್ಲಿ ಗೆಲುವು ದಾಖಲಿಸಿದೆ. 2008ರಲ್ಲಿ ಬಿಜೆಪಿಯ ಪ್ರಹ್ಲಾದ್ ರೆಮಾನೆ ಹಾಗೂ 2018ರಲ್ಲಿ ಕಾಂಗ್ರೆಸ್ಸಿನ ಡಾ. ಅಂಜಲಿ ನಿಂಬಾಳ್ಕರ್ ಗೆದ್ದಿದ್ದಾರೆ. ಒಂದು ಕಾಲದಲ್ಲಿ ಖಾನಾಪುರದಲ್ಲಿ ಎಂಇಎಸ್ ಪ್ರಭಾವ ಇತ್ತು. 2018ರ ಚುನಾವಣೆಗೂ ಮುನ್ನ ಖಾನಾಪುರದಲ್ಲಿ ಕಾಂಗ್ರೆಸ್ ಒಮ್ಮೆಯೂ ಗೆದ್ದಿರಲ್ಲಿಲ್ಲ. ಖಾನಾಪುರದಲ್ಲಿ ಕಾಂಗ್ರೆಸ್ ಧ್ವಜ ಹಾರಿಸಿದ ಕೀರ್ತಿಗೆ ಡಾ. ಅಂಜಲಿ ನಿಂಬಾಳ್ಕರ್ ಪಾತ್ರರಾಗಿದ್ದಾರೆ.