Min read

ಲೋಕಸಭಾ ಚುನಾವಣೆ ಚುನಾವಣೆ 2024: ಇಂದು ಬಿಜೆಪಿ 13 ಲೋಕಸಭೆ ಕ್ಷೇತ್ರಗಳ ಮುಖಂಡರ ಸಭೆ

BJP  Leaders Meeting of 13 Lok Sabha Constituencies on Jan 10th grg

Synopsis

ಒಟ್ಟು 13 ಲೋಕಸಭಾ ಕ್ಷೇತ್ರ ಗಳನ್ನು ಒಳಗೊಂಡ ಮೂರು ಕ್ಲಸ್ಟರ್‌ಗಳ ಸಭೆ ನಿಗದಿಯಾಗಿದೆ. ಬೆಳಗ್ಗೆ ಮೊದಲಿಗೆ ಬೀದ‌ರ್, ಕಲಬುರ್ಗಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಕ್ಷೇತ್ರಗಳನ್ನು ಒಳಗೊಂಡ ಕಲ್ಯಾಣ ಕರ್ನಾಟಕ ಕ್ಲಸರ್‌ಸಭೆ ನಡೆಯಲಿದೆ. ನಂತರ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಕ್ಷೇತ್ರಗಳನ್ನು ಒಳಗೊಂಡ ಮೈಸೂರು ಕ್ಲಸ್ಟರ್ ಸಭೆ ಜರುಗಲಿದೆ. ಬಳಿಕ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಗಳನ್ನು ಒಳಗೊಂಡ ತುಮಕೂರು ಕ್ಲಸ್ಟರ್ ಸಭೆ ನಡೆಯಲಿದೆ.

ಬೆಂಗಳೂರು(ಜ.10):  ಮುಂಬರುವ ಲೋಕಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಬಿಜೆಪಿಯು ಬುಧ ವಾರ ಪಕ್ಷದ ಹಿರಿಯ ನಾಯಕರ ನೇತೃತ್ವದಲ್ಲಿ 13 ಕ್ಷೇತ್ರಗಳ ಮುಖಂಡರ ಸಭೆ ನಡೆಸಲಿದೆ. ಸೋಮವಾರ ನಡೆದ ಪಕ್ಷದ ಪ್ರಮುಖರ ಲೋಕಸಭಾ ಚುನಾವಣಾ ಯೋಜನಾ ಸಭೆಯಲ್ಲಿ ವಿವಿಧ ಲೋಕಸಭಾ ಕ್ಷೇತ್ರಗಳನ್ನು ಒಳಗೊಂಡ ಕ್ಲಸ್ಟರ್‌ಗಳನ್ನು ರಚಿಸಲಾಗಿತ್ತು. ಜತೆಗೆ ಬುಧವಾರ ಮತ್ತು ಶನಿವಾರ ಎರಡು ದಿನಗಳ ಕಾಲ ಎಲ್ಲ ಕ್ಲಸ್ಟರ್‌ಗಳ ಸಭೆ ನಡೆಸುವ ನಿರ್ಧಾರವನ್ನೂ ಕೈಗೊಳ್ಳಲಾಗಿತ್ತು.

ಆ ಪ್ರಕಾರ ಬುಧವಾರ ಬೆಳಗ್ಗೆಯಿಂದ ಸಂಜೆವರೆಗೆ ಒಟ್ಟು 13 ಲೋಕಸಭಾ ಕ್ಷೇತ್ರ ಗಳನ್ನು ಒಳಗೊಂಡ ಮೂರು ಕ್ಲಸ್ಟರ್‌ಗಳ ಸಭೆ ನಿಗದಿಯಾಗಿದೆ. ಬೆಳಗ್ಗೆ ಮೊದಲಿಗೆ ಬೀದ‌ರ್, ಕಲಬುರ್ಗಿ, ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಕ್ಷೇತ್ರಗಳನ್ನು ಒಳಗೊಂಡ ಕಲ್ಯಾಣ ಕರ್ನಾಟಕ ಕ್ಲಸರ್‌ಸಭೆ ನಡೆಯಲಿದೆ. ನಂತರ ಮೈಸೂರು, ಚಾಮರಾಜನಗರ, ಮಂಡ್ಯ ಹಾಗೂ ಹಾಸನ ಕ್ಷೇತ್ರಗಳನ್ನು ಒಳಗೊಂಡ ಮೈಸೂರು ಕ್ಲಸ್ಟರ್ ಸಭೆ ಜರುಗಲಿದೆ. ಬಳಿಕ ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರ ಗಳನ್ನು ಒಳಗೊಂಡ ತುಮಕೂರು ಕ್ಲಸ್ಟರ್ ಸಭೆ ನಡೆಯಲಿದೆ.

ವಿಜಯಪುರ ಮೇಯರ್‌ ಹುದ್ದೆ ಕಾಂಗ್ರೆಸ್‌ ಪಾಲು: ಯತ್ನಾಳ್‌ಗೆ ಮುಖಭಂಗ

ಈ ಸಭೆಯಲ್ಲಿ ಆಯಾ ಕ್ಷೇತ್ರದ ಜನಪ್ರತಿ ನಿಧಿಗಳು, ಹಾಲಿ ಪದಾಧಿಕಾರಿಗಳು ಹಾಗೂ ಮುಖಂಡರು ಪಾಲ್ಗೊಂಡು ಪಕ್ಷ ಸಂಘಟನೆ ಕುರಿತಂತೆ ತಮ್ಮ ಅಭಿಪ್ರಾಯ ಹಾಗೂ ಅಹ ವಾಲುಗಳನ್ನು ಪ್ರಸ್ತಾಪಿಸಲಿದ್ದಾರೆ. ಜತೆಗೆ ಯಾರು ಅಭ್ಯರ್ಥಿಗಳಾದರೆ ಅನುಕೂಲವಾಗ ಬಹುದು ಎಂಬ ವಿಷಯವೂ ಪ್ರಸ್ತಾಪ ವಾಗುವ ಸಾಧ್ಯತೆಯಿದೆ.

Latest Videos