ಧಾರವಾಡ[ನ.07]: ಬಿಜೆಪಿಯವರ ಸೋಲಿಗೆ ಅವರು ಹೇಳಿರುವ ಸುಳ್ಳುಗಳೇ ಕಾರಣ. ದೇಶದ ಜನರ ಮತ್ತು ನಮ್ಮ ರೈತರ ಪರಿಸ್ಥಿತಿಯನ್ನು ಬಿಜೆಪಿಯವರು ಅದೋಗತಿಗೆ ತಳ್ಳಿದ್ದಾರೆ ಎಂದು ಮಾಜಿ ಸಚಿವ ವಿನಯ್ ಕುಲಕರ್ಣಿ ಅಭಿಪ್ರಾಯಪಟ್ಟಿದ್ದಾರೆ.

ಬಿಜೆಪಿ ತಾವು ನೀಡಿದ ಒಂದು ಭರವಸೆಯನ್ನೂ ಇದುವರೆಗೂ ಈಡೇರಿಸಿಲ್ಲ. ಬಿಜೆಪಿಯವರ ಮಾತುಗಳನ್ನು ನಂಬಿ ಜನರು ಸಂಪೂರ್ಣ ಸಂಕಷ್ಟಕ್ಕೆ ಸಿಲುಕಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಪೆಟ್ರೋಲ್ ರೇಟ್ ನೂರು ರುಪಾಯಿ ಆದ್ರೂ ಮೋದಿಗೆ ಓಟ್ ಹಾಕ್ತೀವಿ ಅನ್ನೋರು ಅವರ ಹಿಂಬಾಲಕರೇ ಹೊರತು ಸಾಮಾನ್ಯ ಜನಗಳಲ್ಲ. ಬಿಜೆಪಿಯವರ ಸುಳ್ಳಿಗೆ ಕರ್ನಾಟಕ ಇಂದು ನಾಂದಿ ಹಾಡಿದೆ ಎಂದು ಉಪಚುನಾವಣೆ ಫಲಿತಾಂಶವನ್ನು ಮಾಜಿ ಸಚಿವರು ವಿಶ್ಲೇಷಣೆ ಮಾಡಿದ್ದಾರೆ.  

ಮೋದಿಯವರಿಗೂ ಗೊತ್ತಾಗಿದೆ ಜನಾರ್ದನ ರೆಡ್ಡಿಯಂತವರನ್ನು ಇಟ್ಟಕೊಂಡರೆ ಏನು ಆಗತ್ತೆ ಅಂತ. ಹೀಗೆ ಮುಂದುವರೆದರೆ ದೇಶದ ಗತಿ ಏನು ಎಂಬುದನ್ನು ಸಾಮಾನ್ಯ ಜನರು ಅರ್ಥಮಾಡಿಕೊಳ್ಳಬೇಕು. ಉಪಚುನಾವಣೆ ಫಲಿತಾಂಶ ದೇಶದೆಲ್ಲಡೇ 100% ಮುಂದುವರೆಯುತ್ತದೆ. ಮುಂದೆ ದೇಶದಾದ್ಯಂತ ಪುನರಾವರ್ತನೆಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನವೆಂಬರ್ 03ರಂದು ನಡೆದ ಪಂಚಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್-ಜೆಡಿಎಸ್ ಪಕ್ಷಗಳು 4 ಕ್ಷೇತ್ರಗಳಲ್ಲಿ ಜಯದ ನಗೆ ಬೀರಿದರೆ, ಶಿವಮೊಗ್ಗದಲ್ಲಿ ಬಿಜೆಪಿ ಪ್ರಯಾಸದ ಗೆಲುವು ಕಂಡಿದೆ.