Kolara: ಉಸ್ತುವಾರಿ ಸಚಿವ ಮುನಿಸ್ವಾಮಿ ನಡೆಗೆ ಮೂಲ ಬಿಜೆಪಿಗರೂ ಕೆಂಡಾಮಂಡಲ

ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಕಾದಾಟ ಜೋರಾಗಿದೆ.  ಈ ನಡುವೆ ಉಸ್ತುವಾರಿ ಸಚಿವ ಮುನಿಸ್ವಾಮಿ ನಡೆಗೆ ಮೂಲ ಬಿಜೆಪಿಗರೂ ಕೆಂಡಾಮಂಡಲವಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಘೋಷಣೆ ಮಾಡೋದಕ್ಕೆ ನೀವೇನು ಹೈಕಮಾಂಡಾ ? ಎಂದು ಸಿಡಿಮಿಡಿಗೊಂಡಿದ್ದಾರೆ.

BJP Leaders angry against Kolara In-charge Minister Muniswamy gow

ವರದಿ : ದೀಪಕ್, ಏಷಿಯಾನೆಟ್ ಸುವರ್ಣ ನ್ಯೂಸ್

ಕೋಲಾರ (ಡಿ.29): ರಾಜ್ಯ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದಂತೆ ಟಿಕೆಟ್ ಆಕಾಂಕ್ಷಿಗಳು ಲಾಭಿ ಮಾಡೋದಕ್ಕೆ ಶುರು ಮಾಡಿದ್ಧಾರೆ. ಇದರ ನಡುವೆ ಬಣ ರಾಜಕೀಯ ಜೋರಾಗಿ ಸಾಗ್ತಿದ್ದು,ಕೋಲಾರ ಜಿಲ್ಲೆಯ ಮಾಲೂರು ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳ ಕಾದಾಟ ಜೋರಾಗಿದೆ. ಮಾಜಿ ಸಚಿವ ಕೃಷ್ಣಯ್ಯ ಶೆಟ್ಟಿ 2018 ರ ಚುನಾವಣೆಯಲ್ಲಿ ಸೋತ ಬಳಿಕ ಕ್ಷೇತ್ರವನ್ನು ಹೂಡಿ ವಿಜಯ್ಕುಮಾರ್ ಅವರಿಗೆ ಬಿಟ್ಟುಕೊಟ್ಟು ಹೋಗಿದ್ದಾರೆ,ಈಗಾಗಿ ಕಳೆದ ನಾಲ್ಕು ವರ್ಷಗಳಿಂದ ಕೋವಿಡ್ ನ ತುರ್ತು ಸಂದರ್ಭದಲ್ಲೂ ಹೂಡಿ ವಿಜಯ್ ಕುಮಾರ್ ಪಕ್ಷ ಸಂಘಟನೆ ಮಾಡಿಕೊಂಡು ಬರುತ್ತಿದ್ದಾರೆ. ಇನ್ನು ಹಾಲಿ ಸಂಸದ ಮುನಿಸ್ವಾಮಿ ಪರವಾಗಿ ಲೋಕಸಭಾ ಚುವನಾವಣೆ ಸಂದರ್ಭದಲ್ಲಿ ಕೆಲಸ ಮಾಡಿದ್ದ ಜೆಡಿಎಸ್ ಪಕ್ಷದ ಮಾಜಿ ಶಾಸಕ ಮಂಜುನಾಥ್ ಗೌಡ ಅವರು ಇದೀಗ ಬಿಜೆಪಿ ಪಕ್ಷಕ್ಕೆ ಸೇರ್ಪಡೆ ಆಗಿದ್ದು ಟಿಕೆಟ್ ಗಾಗಿ ಲಾಬಿ ಶುರು ಮಾಡಿದ್ದಾರೆ, ಇದರ ನಡುವೆ ಮಾಲೂರು ಬಿಜೆಪಿ ಯ ತಾಲೂಕು ಅಧ್ಯಕ್ಷ ಪುರ ನಾರಾಯಣಸ್ವಾಮಿ ಸಹ ಟಿಕೆಟ್ ಗಾಗಿ ಲಾಭಿ ಮಾಡ್ತಿದ್ದು ಕ್ಷೇತ್ರ ಇದೀಗ ಗೊಂದಲದ ಗೂಡಾಗಿದೆ.

ಸಚಿವ ಮುನಿರತ್ನ ಹಾಗೂ ಸಂಸದ ಮುನಿಸ್ವಾಮಿ ವಿರುದ್ಧ ಸಭೆ
ಇನ್ನು ಒಂದೂ ಕಡೆ ಮೂರು ಜನ ಆಕಾಂಕ್ಷಿಗಳು ತಮ್ಮ ತಮ್ಮ ಸಾಮರ್ಥ್ಯದಲ್ಲಿ ಕೆಲಸ ಮಾಡಿಕೊಂಡು ಬರ್ತಿದ್ರು ಸಹ ಎಲ್ಲೂ ಹೈಕಮಾಂಡ್ ನಿಂದ ಇಂತಹವರಿಗೇ ಟಿಕೆಟ್ ಎಂದು ಸೂಚನೆ ಮಾಡಿಲ್ಲ. ಹೀಗಿದ್ರೂ ಸಹ ಉಸ್ತುವಾರಿ ಸಚಿವ ಮುನಿರತ್ನ ಹಾಗು ಕೋಲಾರ ಲೋಕಸಭಾ ಸದಸ್ಯರಾದ ಮುನಿಸ್ವಾಮಿ ಅವರು ಕಾರ್ಯಕರ್ತರು ಕಿತ್ತಾಡಿಕೊಳ್ಳುವಂತೆ ಮಾಡುವ ಮೂಲಕ ಉಳಿದ ಪಕ್ಷಗಳಿಗೆ ಪುಕ್ಕಟೆ ಮನರಂಜನೆ ನೀಡಿದ್ದಾರೆ.

ವಾಜಪೇಯಿ ಜನ್ಮ ದಿನದಂದೂ ಮಾಜಿ ಶಾಸಕ ಮಂಜುನಾಥ್ ಗೌಡ ಅವರು ಬಿಜೆಪಿ ಪಕ್ಷಕ್ಕೆ ವಲಸೆ ಬಂದಿರುವ ತಮ್ಮ ಸಾವಿರಾರು ಬೆಂಬಲಿಗರಿಗೆ ಬಾಡೂಟವನ್ನು ಆಯೋಜನೆ ಮಾಡಿದ್ರು,ಈ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಮುನಿರತ್ನ ಹಾಗೂ ಸಂಸದ ಮುನಿಸ್ವಾಮಿ ಆಗಮಿಸಿ ಭಾಷಣ ಮಾಡುವ ವೇಳೆ ಸೂರ್ಯ ಚಂದ್ರ ಇರೋದು ಎಷ್ಟೂ ಸತ್ಯನೋ ಈ ಬಾರಿ ಮಂಜುನಾಥ್ ಗೌಡ ಅವರು ಶಾಸಕರಾಗೋದು ಅಷ್ಟೇ ಸತ್ಯ ಅಂತ ಹೇಳುವುದರ ಜೊತೆಗೆ ಬಿಜೆಪಿ ಪಕ್ಷದವರೆಲ್ಲಾ ಒಂದಾಗಿ ಮಂಜುನಾಥ್ ಗೌಡ ಅವರನ್ನು ಶಾಸಕರನ್ನಾಗಿ ಮಾಡಬೇಕು ಎಂದು ಹೇಳುವ ಮೂಲಕ ಇದೀಗ ಮಾಲೂರಿನ ಮೂಲ ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಟಿಕೆಟ್ ಘೋಷಣೆ ಮಾಡೋದಕ್ಕೆ ನೀವೇನು ಹೈಕಮಾಂಡಾ ? ನೀವೆಲ್ಲಾ ಬಿಜೆಪಿಗೆ ವಲಸೆ ಬಂದಿರುವವರು, ಸಾಮಾನ್ಯ ಕಾರ್ಯಕರ್ತರ ಕಷ್ಟ ಸುಖಕ್ಕೆ ಆಗದೇ ಇರೋರು ನೀವು,ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡ್ತಿದೀರ ? ಎಂದು ಇದೀಗ ಹೂಡಿ ವಿಜಯ್ ಕುಮಾರ್ ಬಣದವರು ಹಾಗೂ ಕೆಲ ಮೂಲ ಬಿಜೆಪಿಗರು  ಸಂಸದ ಮುನಿಸ್ವಾಮಿ ಹಾಗೂ ಸಚಿವ ಮುನಿರತ್ನ ಅವರ ವಿರುದ್ದ 500 ಕ್ಕೂ ಹೆಚ್ಚು ಜನರು ಸಭೆ ಸೇರುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿ ಜಿಲ್ಲಾಧ್ಯಕ್ಷನಿಗೆ ಪಕ್ಷ ಸಂಘಟನೆ ಮಾಡುವ ಯೋಗ್ಯತೆ ಇಲ್ಲ ಎಂದು ಕಿಡಿ
ಇನ್ನು ಸಭೆಯಲ್ಲಿ ಕಳೆದ ಮೂವತ್ತು ನಲವತ್ತು ವರ್ಷದಿಂದ ಬಿಜೆಪಿಯಲ್ಲಿರುವ ಹಿರಿಯರು ಸೇರಿದ್ರು. ಈ ವೇಳೆ ಕೆಲವರು ಜಿಲ್ಲಾಧ್ಯಕ್ಷ ವೇಣುಗೋಪಾಲ್ ವಿರುದ್ದ ಏಕವಚನದಲ್ಲಿ ಕಿಡಿಕಾರಿದ್ರು. ಸಂಸದ ಮುನಿಸ್ವಾಮಿ ಅವರು ಮಾಲೂರು,ಕೋಲಾರ ಹಾಗೂ ಕೆಜಿಎಫ್ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನ ಘೋಷಣೆ ಮಾಡಿ ಕಿತಾಪತಿ ಮಾಡ್ತಿದ್ರು ಸಹ ಜಿಲ್ಲಾಧ್ಯಕ್ಷ ಮಾತ್ರ ಮೌನಕ್ಕೆ ಜಾರಿದ್ದಾರೆ. ಅಭ್ಯರ್ಥಿಗಳನ್ನು ಘೋಷಣೆ ಮಾಡೋದಕ್ಕೆ ಹೈಕಮಾಂಡ್‌ಗೆ ಮಾತ್ರ ಅಧಿಕಾರವಿದ್ರು ಸಹ ಕೇವಲ ಮೋದಿ ಅಲೆಯಲ್ಲಿ ಗೆದ್ದು ಬಂದಿರುವ ಸಂಸದ ಮುನಿಸ್ವಾಮಿ ಹಾಗೂ ಉಸ್ತುವಾರಿ ಸಚಿವರು ತಮ್ಮ ಮುಂದೆಯೇ ಅಭ್ಯರ್ಥಿಗಳ ಘೋಷಣೆ ಮಾಡ್ತಿದ್ರು ಸಹ ನನಗೂ ಇದಕ್ಕೂ ಸಂಬಂಧವಿಲ್ಲ ಎಂದು ಮೌನಕ್ಕೆ ಜಾರಿದ್ದಾರೆ. ಒಬ್ಬ ಗ್ರಾಮ ಪಂಚಾಯಿತಿ ಸದಸ್ಯನನ್ನು ಗೆಲ್ಲಿಸಲು ಆಗದೇ ಇರುವ ಇಂತಹ ಬಿಜೆಪಿ ಜಿಲ್ಲಾಧ್ಯಕ್ಷನನ್ನು ನಾವೂ ಅನಿವಾರ್ಯವಾಗಿ ಒಪ್ಪಿಕೊಂಡಿದ್ದೇವೆ ಎಂದು ಕಿಡಿಕಾರಿದ್ರು.

ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಂಸದರು ಟಿಕೆಟ್ ಘೋಷಣೆ ಮಾಡೋದಕ್ಕೆ ಅವರೇನು ಹೈಕಮಾಂಡಾ ?
ಇನ್ನು ಬಿಜೆಪಿ ಪಕ್ಷಕ್ಕೆ ಹೊಸದಾಗಿ ಸೇರ್ಪಡೆ ಆಗಿರುವ ಮಾಜಿ ಶಾಸಕರಾದ ಮಂಜುನಾಥ್ ಗೌಡ ಅವರಿಗೆ ಬಿಜೆಪಿ ಪಕ್ಷದಿಂದ ಟಿಕೆಟ್ ಎಂದು ಭಾಷಣದಲ್ಲಿ ಘೋಷಣೆ ಮಾಡಿದಕ್ಕೆ ನೀವಿಬ್ಬರೇನು ಹೈಕಮಾಂಡಾ ಎಂದು ಸಚಿವ ಮುನಿರತ್ನ ಹಾಗೂ ಸಂಸದ ಮುನಿಸ್ವಾಮಿ ವಿರುದ್ದ ಬಿಜೆಪಿ ಟಿಕೆಟ್ ಆಕಾಂಕ್ಷಿ ಹೂಡಿ ವಿಜಯ್ಕುಮಾರ್ ಬಣದವರು ಕಿಡಿಕಾರುತ್ತಿದ್ದಾರೆ.

ಬೆಂಗಳೂರು-ಚೆನ್ನೈ ಎಕ್ಸಪ್ರೆಸ್‌ ಕಾರಿಡಾರ್‌: ರೈತರಿಗೆ ಪರಿಹಾರ ಎಂದು?

ಒಂದೇ ಒಂದು ದಿನವೂ ಬಿಜೆಪಿ ಕಾರ್ಯಕರ್ತರ ಕಷ್ಟ ಸುಖ ಏನೂ ಅಂತ ಇದುವರೆಗೂ ನೀವ್ಯಾರು ಕೇಳಿಲ್ಲ,ಈಗೇ ಏಕಾಏಕಿ ಟಿಕೆಟ್ ಘೋಷಣೆ ಮಾಡುವ ಅಧಿಕಾರ ನಿಮಗ್ಯಾರು ನೀಡಿದ್ದು,ಲಕ್ಕೂರು ಗ್ರಾಮ ಪಂಚಾಯ್ತಿಯಲ್ಲಿ ಅಧಿಕಾರಿಯನ್ನು ವಗಾ೯ವಣೆ ಮಾಡಿಸಿಕೊಂಡು ಬಂದಿದಕ್ಕೆ ಸಚಿವ ಮುನಿರತ್ನ ಅವರು ಅಧ್ಯಕ್ಷರಿಗೆ ಧಮ್ಕಿ ಹಾಕಿದ್ದಾರೆ,ಯಾರು ಇಲ್ಲದಾಗ ಕೆಲವವರು ಪಕ್ಷ ಸಂಘಟಿಸಿದ್ದಾರೆ, ಪುರಸಭೆ, ಗ್ರಾಮ ಪಂಚಾಯ್ತಿ, ಪಿಎಲ್ಡಿ ಬ್ಯಾಂಕ್ ಚುನಾವಣೆಯಲ್ಲಿ ನೀವುಗಳು ಕಾರ್ಯಕರ್ತರಿಗೆ ಸ್ಪಂಧಿಸಲಿಲ್ಲ. ನಾವುಗಳು ನಮ್ಮ ಪಕ್ಷದಿಂದ ಆಯ್ಕೆ ಆಗಿರುವ ಸಂಸದರು ಹಾಗೂ ಸಚಿವರು ಎಂದು ಗೌರವ ಕೊಡುತ್ತೇವೆ, ಪಕ್ಷದ ಮೂಲ ಕಾರ್ಯಕರ್ತರ ಕೆಲಸಗಳಿಗೆ ಅನ್ಯಾಯವಾಗಿ ನೀವೆನಾದ್ರು ದಕ್ಕೆ ಉಂಟಾಗುವ ಕೆಲಸ ಮಾಡಿದ್ರೆ ನಿಮ್ಮಂತ ವಲಸೆ ಬಂದಿರುವವರ ವಿರುದ್ಧ ಸುಮ್ಮನೆ ಕೂರುವುದಿಲ್ಲ ಎಂದು ಎಚ್ಚರಿಕೆ ನೀಡಿದ್ರು.

Big 3: ಮಾಲೂರು ತಾಲ್ಲೂಕಿನಲ್ಲಿ ಧೂಳುಮಯ ರಸ್ತೆಗಳು: ಕೇಳೋರಿಲ್ಲ ಜನರ ಗೋಳು

ಚೆನ್ನಾಗಿರುವ ಬಿಜೆಪಿಯನ್ನು ಹಾಳು ಮಾಡಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗಲು  ಮುನಿರತ್ನ ಪ್ಲಾನ್: ಉಸ್ತುವಾರಿ ಸಚಿವ ಮುನಿರತ್ನ ಅವರು ಕಾರ್ಯಕರ್ತರು ಸಮಸ್ಯೆಯನ್ನು ಆಲಿಸೋದು ಬಿಟ್ಟು ಕೋಲಾರ ಜಿಲ್ಲೆಯಲ್ಲಿ ಚೆನ್ನಾಗಿರುವ ಬಿಜೆಪಿಯನ್ನು ಹಾಳು ಮಾಡಿ ಮತ್ತೆ ಕಾಂಗ್ರೆಸ್ ಪಕ್ಷಕ್ಕೆ ಹೋಗಲು ಯೋಚನೆ ಮಾಡ್ತಿದ್ದಾರೆ. ಆದ್ರೇ ಅವರ ಆಸೆ ಈಡೇರಲು ನಮ್ಮಂತ ಮೂಲ ಬಿಜೆಪಿಗರು ಬಿಡುವುದಿಲ್ಲ ಇದೇ ಜಿಲ್ಲೆಯ ಬಂಗಾರಪೇಟೆ, ಮುಳಬಾಗಿಲು ಹಾಗೂ ಶ್ರೀನಿವಾಸಪುರ ಅಭ್ಯರ್ಥಿಗಳನ್ನು ಏಕೆ ಇವರು ಘೋಷಣೆ ಮಾಡಿಲ್ಲ, ಕೇವಲ ಮಾಲೂರು, ಕೋಲಾರ ಹಾಗೂ ಕೆಜಿಎಫ್ ನಲ್ಲಿ ಮಾತ್ರ ಸಂಸದರಿಗೆ ಹಾಗು ಮಂತ್ರಿಗಳಿಗೆ ಘೋಷಣೆ ಮಾಡೋದಕ್ಕೆ ಯಾರು ಅಧಿಕಾರ ಕೊಟ್ಟಿದ್ದಾರೆ ಎಂದು ಪ್ರಶ್ನೆ ಮಾಡಿದ್ರು. ಇದೇ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ದೇವರಾಜ್ ರೆಡ್ಡಿ, ಹನುಮಪ್ಪ, ಆರ್.ಪ್ರಭಾಕರ್, ಹರೀಶ್ ಗೌಡ ಸೇರಿದಂತೆ ನೂರಾರು ಕಾರ್ಯಕರ್ತರು ಭಾಗಿಯಾಗಿದ್ದರು.

Latest Videos
Follow Us:
Download App:
  • android
  • ios