ಬೆಂಗಳೂರು-ಚೆನ್ನೈ ಎಕ್ಸಪ್ರೆಸ್‌ ಕಾರಿಡಾರ್‌: ರೈತರಿಗೆ ಪರಿಹಾರ ಎಂದು?

ಭೂಮಿ ಕಳೆದುಕೊಂಡ ಅನ್ನದಾತರಿಗೆ ಮಾತ್ರ ಪರಿಹಾರ ಸಿಗದೆ ಬರೀ ಕಣ್ಣೀರಿನ ಗೋಳು. ಸಮರ್ಪಕ ಪರಿಹಾರ ನೀಡದೆ ಭೂಸ್ವಾಧೀನಕ್ಕೆ ಮುಂದಾದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶದಿಂದ ಕಣ್ಣೀರು ಹಾಕುತ್ತಿರುವ ಘಟನೆ ಮಾಲೂರು ತಾಲೂಕಿನ ಬೆಳ್ಳಾವೆ ಎಡಗಿನಬೆಲೆ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ.

When Farmers Get Compensation of Bengaluru Chennai Express Highway Project grg

ಕೋಲಾರ(ಡಿ.26):  ಬೆಂಗಳೂರು ಚೆನ್ನೈ ಎಕ್ಸಪ್ರೆಸ್‌ ಕಾರಿಡಾರ್‌ ಹೆದ್ದಾರಿ ಕಾಮಗಾರಿ ಭರದಿಂದ ಸಾಗಿದೆ. ಆದರೆ ಭೂಮಿ ಕಳೆದುಕೊಂಡ ಅನ್ನದಾತರಿಗೆ ಮಾತ್ರ ಪರಿಹಾರ ಸಿಗದೆ ಬರೀ ಕಣ್ಣೀರಿನ ಗೋಳು. ಸಮರ್ಪಕ ಪರಿಹಾರ ನೀಡದೆ ಭೂಸ್ವಾಧೀನಕ್ಕೆ ಮುಂದಾದ ಅಧಿಕಾರಿಗಳ ವಿರುದ್ಧ ರೈತರು ಆಕ್ರೋಶದಿಂದ ಕಣ್ಣೀರು ಹಾಕುತ್ತಿರುವ ಘಟನೆ ಮಾಲೂರು ತಾಲೂಕಿನ ಬೆಳ್ಳಾವೆ ಎಡಗಿನಬೆಲೆ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಸಂಚಾರದ ಕಾಲ ಮಿತಿ ಕಡಿತಗೊಳಿಸಿ ವೇಗದ ಮಿತಿ ಹೆಚ್ಚಿಸುವ ಕೇಂದ್ರ-ರಾಜ್ಯ ಸರ್ಕಾರಗಳ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ಇದೆ. ಆದರೆ ಈ ಯೋಜನೆ ಕಾರ್ಯಕ್ಕೆ ಅಡ್ಡಿಯಾಗಿರುವ ರೈತರ ಕೃಷಿ ಭೂಮಿ ಸರ್ಕಾರ ಭೂ ಸ್ವಾಧೀನಕ್ಕೆ ಮುಂದಾಗಿ ಆರೇಳು ವರ್ಷಗಳು ಕಳೆದರು ಇನ್ನೂ ಬಿಡಿಕಾಸು ಸಿಗದೆ, ಸ್ವಾಧೀನದಲ್ಲಿರುವ ಭೂಮಿಯನ್ನೇ ನಂಬಿಕೊಂಡು ಜೀವಿಸುವ ರೈತರ ಭೂಮಿ ಕಳೆದು ಕೊಂಡು ನಯಾಪೈಸೆ ಪಡೆಯದೆ ರೈತರು ರೋದಿಸುತ್ತಿದ್ದಾರೆ.

ಚೆನೈ ಹೆದ್ದಾರಿಗೆ ಆದೆಷ್ಟೋ ರೈತರು ತಮ್ಮ ತಮ್ಮ ಪೂರ್ವಿಕರ ಭೂಮಿ ಕಳೆದುಕೊಂಡು ಕಂಗಾಲಾಗಿದ್ದಾರೆ. ಅದೇ ರೀತಿಯಲ್ಲಿ ಮಾಲೂರು ತಾಲ್ಲೂಕಿನ ಬೆಳ್ಳಾವೆ ಎಡಗಿನಬೆಲೆ, ಲಕ್ಷ್ಮೀಸಾಗರ ಸೇರಿದಂತೆ ಹತ್ತು ಹಲವಾರು ಗ್ರಾಮಗಳ ಜಮೀನುಗಳಿಗೆ ಹೆದ್ದಾರಿ ನುಗ್ಗಿದೆ. ಬೆಳ್ಳಾವೆ ಎಡಗಿನಬೆಲೆ ಸರ್ವೆ ನಂ.44ರಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ.

KOLAR: ಕೂಲಿ ಕಾರ್ಮಿಕರ ಮಕ್ಕಳಿಗೊಂದು ‘ಶಿಶುಪಾಲನ ಕೇಂದ್ರ’

ಲಕ್ಷ್ಮೀ ಸಾಗರದ ರೈತ ಕೃಷ್ಣಮೂರ್ತಿ ಸುದ್ದಿಗಾರರೊಂದಿಗೆ ಮಾತನಾಡಿ, ಅಧಿಕಾರಿಗಳಿಗೆ ಹಿಡಿಶಾಪ ಹಾಕಿದ ರೈತ, ಸಾಲ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬಂದಿದೆ ಎಂದು ತನ್ನ ಗೋಳು ತೋಡಿ ಕೊಂಡರು.
ಎಡಗಿನಬೆಲೆ ಬಳಿ ರೈತರ ಪ್ರತಿಭಟನೆ: ಚೆನೈ-ಬೆಂಗಳೂರು ಎಕ್ಸೆ$್ೊ್ರಸ್‌ ಕಾರಿಡಾರ್‌ ಹೈವೇ ಕಾಮಗಾರಿ, ಭೂಸ್ವಾಧೀನ ಹಣ ನೀಡದೆ ಕಾಮಗಾರಿಗೆ ಮುಂದಾದ ಹಿನ್ನೆಲೆ, ಕಾಮಗಾರಿ ವಿರೋಧಿಸಿ ನೂರಾರು ರೈತರ ಪ್ರತಿಭಟನೆ ನಡೆಸಿದರು. ಭೂಸ್ವಾಧೀನ ಪಡಿಸಿಕೊಂಡ ಭೂಮಿಗೆ ಇನ್ನೂ ಹಣ ನೀಡಿಲ್ಲವೆಂದು ಆರೋಪಿಸಿ, ಭೂಸ್ವಾಧೀನ ಪಡಿಸಿಕೊಂಡ ಭೂಮಿಗಿಂತ ಹೆಚ್ಚಿನ ಭೂಮಿ ವಶಕ್ಕೆ ಪಡೆದುಕೊಂಡ ಹಿನ್ನೆಲೆ ಕಾಮಗಾರಿ ನಡೆಯದಂತೆ ತಡೆಹಿಡಿದು ಪ್ರತಿಭಟನೆ ನಡೆಸಿದರು.

ಸ್ಥಳಕ್ಕೆ ಮಾಲೂರು ಪೊಲೀಸರ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದರು ಘಟನಾ ಸ್ಥಳಕ್ಕೆ ಧಾವಿಸಿದ, ಮಾಲೂರು ತಹಸೀಲ್ದಾರ್‌ ವಿನೋದ್‌ ಪ್ರತಿಭಟನಾ ರೈತರ ಜೊತೆ ಗಂಟೆಗಟ್ಟಲೇ ಸಂಧಾನ ಮಾಡಿದರು. ಆದರೂ ಒಪ್ಪದ ರೈತರು ಪಟ್ಟು ಹಿಡಿದು ಕುಳಿತರು. ಸಂಧಾನ ವಿಫಲವಾಗಿ ವಾರದ ಗಡವು ನೀಡಿದರೂ ಒಪ್ಪದ ರೈತರ ಪಟ್ಟಿಗೆ ತಹಸೀಲ್ದಾರ್‌ ಕಾರು ಹತ್ತಿ ಹೊರಟರು.

Karnataka Politics: ಕೈ ಅಭ್ಯರ್ಥಿಗಳ ಶಿಫಾರಸು ಹೊಣೆ ಉಗ್ರಪ್ಪ ಹೆಗಲಿಗೆ

ರೈತರಿಗೆ ಸಿಗಬೇಕಾದ ಪರಿಹಾರ ಒದಗಿಸದೇ ರೈತರ ಮೇಲೆ ಪೊಲೀಸ್‌ ದರ್ಪ ತೊರಿಸುತ್ತಾರೆ. ಹೆದ್ದಾರಿ ಕಾಮಗಾರಿಗೆ ಅಡ್ಡ ಬಂದ ರೈತರ ಮೇಲೆ ಬೆದರಿಕೆ, ದೌರ್ಜನ್ಯ ಮಾಡುತ್ತಿದ್ದಾರೆ. ರೈತರ ಮೇಲಿನ ದೌರ್ಜನ್ಯಗಳು ಹೀಗೆ ಮುಂದುವರೆದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತ ಮುಖಂಡರು ಎಚ್ಚರಿಕೆ ನೀಡಿದರು.

ಕಳೆದ 2016ರಿಂದ ನಿರಂತರವಾಗಿ ರೈತರ ಜಮೀನುಗಳನ್ನು ಹೈವೇ ಅಧಿಕಾರಿಗಳು ಭೂ ಸ್ವಾಧೀನ ಪ್ರಕ್ರಿಯೆಗೆ ಮುಂದಾಗಿ ರೈತರ ಜಮೀನುಗಳನ್ನು ವಶ ಪಡಿಸಿಕೊಂಡಿದ್ದಾರೆ. ಸುಮಾರು ನೂರಕ್ಕೂ ಹೆಚ್ಚು ಎಕರೆ ಭೂಮಿಗೆ ಇನ್ನೂ ಪರಿಹಾರ ಸಿಗಬೇಕಿದೆ. ಆದರೆ ಈಗ ಮಾತ್ರ ಉಲ್ಟಾಹೊಡೆಯುತ್ತಿದ್ದಾರೆ. ಆದಷ್ಟುಬೇಗ ಪರಿಹಾರ ಕಲ್ಪಿಸಲು ಸರ್ಕಾರಗಳು ಮುಂದಾಗಲಿ ಅಂತ ರೈತ ಮುಖಂಡ ನಾರಾಯಣಗೌಡ ತಿಳಿಸಿದ್ದಾರೆ. 

Latest Videos
Follow Us:
Download App:
  • android
  • ios