ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಜನರಿಗೆ ಕಾಂಗ್ರೆಸ್ ಖಾಲಿ ಚೊಂಬು ನೀಡಿದೆ: ಮಾಜಿ ಸಚಿವ ಸುರೇಶ ಕುಮಾರ್ 

ಬಳ್ಳಾರಿ(ಏ.28): ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮತದಾರರು ಕಾಂಗ್ರೆಸ್ಸಿಗೆ ಖಾಲಿ ಚೊಂಬು ನೀಡುವುದು ಖಚಿತ ಎಂದು ಮಾಜಿ ಸಚಿವ ಸುರೇಶ ಕುಮಾರ್ ಭವಿಷ್ಯ ನುಡಿದರು. ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ರಾಜ್ಯದ ಅಭಿವೃದ್ಧಿ ಶೂನ್ಯವಾಗಿದೆ. ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದ ಜನರಿಗೆ ಕಾಂಗ್ರೆಸ್ ಖಾಲಿ ಚೊಂಬು ನೀಡಿದೆ ಎಂದರು.

ಅಭಿವೃದ್ಧಿಗೆ ಎಲ್ಲೂ ಹಣ ನೀಡುತ್ತಿಲ್ಲ. ಕಳೆದ 10 ತಿಂಗಳಿನಿಂದ ನಿರುದ್ಯೋಗ ಭತ್ಯೆ ನೀಡದೇ ವಿದ್ಯಾವಂತ ಯುವಕರಿಗೆ ಕಾಂಗ್ರೆಸ್ ಖಾಲಿ ಚೊಂಬು ನೀಡಿದೆ. ಮಹಿಳೆಯರಿಗೆ ಉಚಿತ ಬಸ್ ಎಂದು ಹೇಳಿದರು. ಆದರೆ, ಬಸ್‌ಗಳನ್ನು ಕಡಿಮೆ ಮಾಡಿದರು. ಜೊತೆಗೆ ಬಸ್ ದರ ಏರಿಕೆ ಮಾಡಿದರು. ವಿದ್ಯುತ್ ಉಚಿತ ಎಂದು ಹೇಳಿ, ಅದಕ್ಕೆ ಹತ್ತಾರು ನಿಯಮ ಹಾಕಿದರು. ವಿದ್ಯುತ್‌ ದರ ಪ್ರತಿ ಯೂನಿಟ್‌ಗೆ ಹೆಚ್ಚಳ ಮಾಡಿ ಜನರಿಗೆ ಖಾಲಿ ಚೊಂಬು ನೀಡಿದರು ಎಂದರು.

ಬಳ್ಳಾರಿಯನ್ನು ಜೀನ್ಸ್‌ ರಾಜಧಾನಿ ಮಾಡುವ ಮಾತಿಗೆ ಬದ್ಧ: ರಾಹುಲ್ ಗಾಂಧಿ

ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಹೋರಾಟ ಫಲಪ್ರದವಾಗಲಿದೆ. ಪ್ರತಿ ಕ್ಷೇತ್ರದಲ್ಲೂ ಬಿಜೆಪಿಗೆ ಮುನ್ನಡೆಯಿದೆ. ಕಾಂಗ್ರೆಸ್‌ನ ಗ್ಯಾರಂಟಿ ಯೋಜನೆಗಳು ಬಿಜೆಪಿ ಗೆಲುವಿನ ಓಟಕ್ಕೆ ತಡೆಯಾಗುವುದಿಲ್ಲ ಎಂದು ತಿಳಿಸಿದರು.