‘ನಾನು ಸಿಎಂ ಆದ್ರೆ ತಪ್ಪಾ, ಸಿದ್ದು ಕಾಂಗ್ರೆಸ್ ಬಿಡ್ತಾರೆ: ಬಿಜೆಪಿ ನಾಯಕ ಸ್ಫೋಟಕ ಸ್ಟೇಟ್ ಮೆಂಟ್
ನಾನು ಸಿಎಂ ಹುದ್ದೆಯ ಆಕಾಂಕ್ಷಿ/ ಸಿದ್ದರಾಮಯ್ಯ ಕಾಂಗ್ರೆಸ್ ತೊರೆಯುತ್ತಾರೆ/ ಬಾಗ;ಕೋಟೆಯಲ್ಲಿ ಮುರುಗೇಶ್ ನಿರಾಣಿ ಹೇಳಿಕೆ/ ಏನೂ ಇಲ್ಲದವರು ಡಿಸಿಎಂ ಆಗಿದ್ದಾರೆ
ಬಾಗಲಕೋಟೆ[ನ. 01] ಬಾಗಲಕೋಟೆ ಜಿಲ್ಲೆ ಕುಳಗೇರಿಯಲ್ಲಿ ಮಾಜಿ ಸಚಿವ ಮುರುಗೇಶ್ ನಿರಾಣಿ ಹೇಳಿಕೆ ಮಾತನಾಡಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸಿಎಂ ಆಗುವ ಅವಕಾಶ ನನಗೂ ಬಂದ್ರೆ ನಿಶ್ಚಿತವಾಗಿ ಪ್ರೂವ್ ಮಾಡಿ ತೋರಿಸುತ್ತೆನೆ. ಸಿಎಂ, ಡಿಸಿಎಂ ಹುದ್ದೆಗೆ ಬೆನ್ನು ಬೀಳುವ ಜಾಯಮಾನ ನನ್ನದಲ್ಲ. ಸಿಎಂ ಆಗುವ ಅವಕಾಶ ಸಿಕ್ರೆ ಯಾರು ಬೇಡ ಅಂತಾರೆ. ಸಿಎಂ ಸ್ಥಾನವಷ್ಟೇ ಅಲ್ಲ ಅದಕ್ಕಿಂತಲೂ ಹೆಚ್ಚಿನ ಸ್ಥಾನ ಕೊಟ್ಟರೂ ಮಾಡುವ ಶಕ್ತಿ ನನ್ನಲ್ಲಿದೆ ಎಂದು ಹೇಳಿದ್ದಾರೆ.
ನಾನೊಬ್ಬ ಹಿರಿಯನಿದ್ದೇನೆ. ಟಿಕೆಟ್ ಕೊಡದಿದ್ರೂ ನಾನು ಬಿಜೆಪಿ ಕಾರ್ಯಕರ್ತ. ರೈತ ಕುಟುಂಬದಿಂದ ಬಂದು ಸಕ್ಕರೆ, ಸಿಮೆಂಟ್ , ಬ್ಯಾಂಕ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕೆಲಸ ಮಾಡಿದ್ದೇನೆ. ಇಷ್ಟೆಲ್ಲಾ ಅನುಭವವಿದ್ರೂ ಹೆಚ್ಚಿನ ಜವಾಬ್ದಾರಿ ಸಿಕ್ಕಿಲ್ಲ. ಏನು ಇಲ್ದೆಯಿರೋರು ಏನೇನೋ ಆಗಿದ್ದಾರೆ. ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ನಿಭಾಯಿಸುವೆ. ಕೊಡದಿದ್ದರೂ ಸುಮ್ಮನಿರುತ್ತೇನೆ..
ನಾವ್ ಬರೋದಿಲ್ಲ.. HDK ಮಾಸ್ಟರ್ ಪ್ಲಾನ್ ಠುಸ್
ಸರ್ಕಾರ ಸತ್ತು ಹೋಗಿದೆ, ಬೈ ಎಲೆಕ್ಷನ್ ಬಳಿಕ ಸರ್ಕಾರ ಪತನ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡುತ್ತಾರೆ. ಸಿದ್ದರಾಮಯ್ಯನವ್ರೇ ಕಾಂಗ್ರೆಸ್ ಬಿಟ್ಟು ಹೊರಬಂದ್ರೂ ಅಚ್ಚರಿಯಿಲ್ಲ. ಕಾದುನೋಡಿ ಸಿದ್ದರಾಮಯ್ಯ ಕಾಂಗ್ರೆಸ್ ಬಿಡ್ತಾರೆ ಎಂದು ನಿರಾಣಿ ಭವಿಷ್ಯ ಹೇಳಿದರು.
ಸಿದ್ದರಾಮಯ್ಯ ಹಿರಿಯರು ಅವರ ಬಗ್ಗೆ ಕಾಮೆಂಟ್ ಮಾಡೋವಷ್ಟು ದೊಡ್ಡವನಲ್ಲ. ಅವರು ವಿರೋಧ ಪಕ್ಷದಲ್ಲಿದ್ದಾರೆ ಹಾಗೆ ಹೇಳಲೇಬೇಕು. ಕಾಂಗ್ರೆಸ್ ನಲ್ಲಿ ಅಲ್ಲೊಬ್ಬರು,ಇಲ್ಲೊಬ್ಬರು ಇರೋರು ಪಕ್ಷ ಬಿಡ್ತಾರೆ. 15 ಕ್ಷೇತ್ರಗಳಲ್ಲಿ ಬಿಜೆಪಿ 12 ಸ್ಥಾನ ಗೆಲ್ಲಲಿದೆ ಎಂದರು.
ನನಗೆ ಯಾವುದೇ ಅಸಮಾಧಾನ ಇಲ್ಲ. ಮೊದಲ ಬಾರಿಗೆ ಆಯ್ಕೆಯಾದಾಗ ನನಗೆ ಸಚಿವನಾಗಿ ಪಕ್ಷ ಅವಕಾಶ ಕೊಟ್ಟಿದೆ. ಹೀಗಾಗಿ ಪಕ್ಷ ಏನೇ ನಿರ್ಧಾರ ಕೈಗೊಂಡರೂ ಅದಕ್ಕೆ ನಾನು ಬದ್ಧ ಎಂದು ನಿರಾಣಿ ಸ್ಪಷ್ಟಪಡಿಸಿದರು.