Asianet Suvarna News Asianet Suvarna News

ಆ ಪುಣ್ಯಾತ್ಮನ ಹೇಳಿಕೆಗಳಿಂದಲೇ ಬಿಜೆಪಿಗೆ ದೊಡ್ಡ ಡ್ಯಾಮೇಜ್‌: ಯತ್ನಾಳ್‌ ವಿರುದ್ಧ ಮುರುಗೇಶ್‌ ನಿರಾಣಿ ವಾಗ್ದಾಳಿ

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ವಿಜಯಪುರ ನಗರ ಶಾಸಕರೇ ನೇರ ಹೊಣೆ ಎಂದು ಮಾಜಿ ಸಚಿವ ಮುರುಗೇಶ್‌ ನಿರಾಣಿ ಯತ್ನಾಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. 

bjp leader murugesh nirani slams mla basanagouda patil yatnal gvd
Author
First Published Jun 29, 2023, 11:41 PM IST

ವಿಜಯಪುರ (ಜೂ.29): ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಿಲ್ಲೆಯ 8 ಕ್ಷೇತ್ರಗಳ ಪೈಕಿ 7 ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಸೋಲಿಗೆ ವಿಜಯಪುರ ನಗರ ಶಾಸಕರೇ ನೇರ ಹೊಣೆ ಎಂದು ಮಾಜಿ ಸಚಿವ ಮುರುಗೇಶ್‌ ನಿರಾಣಿ ಯತ್ನಾಳ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿಯೇ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಾಗದ ನಿಮಗೆ ಹೆಲಿಕಾಪ್ಟರ್‌ ಕೊಡಿಸಿದ್ದು ಯಾವುದೇ ಪ್ರಯೋಜನಕ್ಕೆ ಬರಲಿಲ್ಲ. ಹಾಗೂ ಆ ಪುಣ್ಯಾತ್ಮನ ಹೇಳಿಕೆಗಳಿಂದಲೇ ಬಿಜೆಪಿಗೆ ದೊಡ್ಡ ಡ್ಯಾಮೇಜ್‌ ಎಂದು ಹರಿಹಾಯ್ದರು. ಮೊನ್ನೆ ಆಯೋಜಿಸಿದ್ದ ಬಿಜೆಪಿ ಸಮಾವೇಶದಲ್ಲಿ ನಡೆದ ಗಲಾಟೆ ವಿಷಯವನ್ನೂ ಪ್ರಸ್ತಾಪಿಸಿದ ನಿರಾಣಿ ಪರೋಕ್ಷವಾಗಿ ಯತ್ನಾಳರನ್ನು ಖಾರವಾಗಿ ತರಾಟೆಗೆ ತೆಗೆದುಕೊಂಡರು.

ಎಲ್ಲ ನಾಯಕರ ಬಗ್ಗೆ ಇಲ್ಲಸಲ್ಲದ ಆರೋಪ ಮಾಡಿ ಟೀಕಿಸುವುದು ಅವರ ಛಾಳಿ. ನಮ್ಮ ಪಕ್ಷದ ಹಿರಿಯರಾದ ಬಿ.ಎಸ್‌.ಯಡಿಯೂರಪ್ಪ, ದಿ.ಅನಂತಕುಮಾರ, ಈಶ್ವರಪ್ಪ ಮೊದಲಾದವರ ಬಗ್ಗೆ ಬಾಯಿಗೆ ಬಂದಂತೆ ಅವರು ಮಾತನಾಡಿದ್ದಾಗಿದೆ. ಇದಲ್ಲದೇ, ಒಂದು ಸಲ ಜಗದೀಶ ಶೆಟ್ಟರ್‌, ಇನ್ನೊಂದು ಸಲ ಪ್ರಹ್ಲಾದ ಜೋಶಿ, ಮತ್ತೊಮ್ಮೆ ವಿ.ಸೋಮಣ್ಣ, ಅಷ್ಟೇ ಅಲ್ಲದೇ ಅನೇಕ ಸಮುದಾಯಗಳ ಬಗ್ಗೆಯೂ ಹಗುರವಾಗಿ ಮಾತನಾಡಿದ ಇತಿಹಾಸ ಅವರಿಗಿದೆ. ಒಂದು ರೀತಿ ನಗರ ಶಾಸಕರಿಗೆ ‘ಮಂದ್ಯಾಗ ಒದೆಯೋದು... ಸಂದ್ಯಾಗ ಕಾಲ ಹಿಡಿದುಕೊಳ್ಳುವುದು’ ಎಂಬ ಉಕ್ತಿ ಸೂಕ್ತವಾಗಿ ಹೋಲಿಕೆಯಾಗುತ್ತದೆ. ಸಂದರ್ಭ ಬಂದಾಗ ಎಲ್ಲವನ್ನೂ ಬಹಿರಂಗಗೊಳಿಸುವೆ ಎಂದು ವಾಗ್ದಾಳಿ ನಡೆಸಿದರು.

Chikkamagaluru: ಕಾಫಿನಾಡು ಮಲೆನಾಡಲ್ಲಿ ಕೈ ಕೊಟ್ಟ ಮಳೆರಾಯ: ಗಡಿ ಮಾರಿಗೆ ವಿಶೇಷ ಪೂಜೆ

ಈ ಪುಣ್ಯಾತ್ಮ ಮುಖ್ಯಮಂತ್ರಿಯಾಗಲು ಸಾವಿರಾರು ಕೋಟಿ, ಮಂತ್ರಿ ಮಾಡಲು 100 ಕೋಟಿ, ನಿಗಮ ಅಧ್ಯಕ್ಷರನ್ನಾಗಿ ಮಾಡಲು ಕೋಟಿ ಕೋಟಿ ಹಣ ಸುರಿಯಬೇಕು ಎಂದು ಹೇಳಿರುವುದು ಬಿಜೆಪಿಗೆ ಚುನಾವಣೆಯಲ್ಲಿ ಬಲು ದೊಡ್ಡ ಹೊಡೆತವಾಯಿತು ಎಂದು ವ್ಯಂಗ್ಯವಾಡಿದರು. ಪರಾಜಿತ ಅಭ್ಯರ್ಥಿಗಳು ವಿಜಯಪುರ ಸಮಾವೇಶದಲ್ಲಿ ಭಾಗವಹಿಸಿದ್ದರು. ವಿಜಯಪುರ ನಗರದ ಬಿಜೆಪಿ ಶಾಸಕ ಮಾಜಿ ಮುಖ್ಯಮಂತ್ರಿಗಳನ್ನು ಸ್ವಾಗತಿಸಬೇಕಿತ್ತು. ಉಳಿದವರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕಿತ್ತು. ಅವರಿಗಾಗಿ ನಾವೆಲ್ಲರೂ ಎರಡು ತಾಸು ಕಾದರೂ ಅವರು ಸಮಾವೇಶಕ್ಕೆ ಬರಲಿಲ್ಲ. 

ಎರಡು ತಾಸು ನಂತರ ಸಭೆ ಆರಂಭಿಸಿದರೂ ಅದಕ್ಕೆ ಅವರ ಬೆಂಬಲಿಗರು ತಗಾದೆ ತೆಗೆದು ಸಮಾವೇಶಕ್ಕೆ ಭಂಗ ತಂದರು. ಇದೇ ಕಾರಣಕ್ಕೆ ನಾವೆಲ್ಲರೂ ಸಭೆಯಿಂದ ಹೊರಬಂದೆವು ಎಂದು ಆಕ್ರೋಶ ವ್ಯಕ್ತಪಡಿಸಿದರು. ಶಾಸಕರು ವಿಜಯಪುರ ಮಹಾನಗರ ಪಾಲಿಕೆಯಲ್ಲಿ ಮೇಯರ್‌-ಉಪಮೇಯರ್‌ ಆಯ್ಕೆಗೆ ಸಹ ಅವಕಾಶ ನೀಡಲಿಲ್ಲ. ಮೇಯರ್‌ ಬಂದರೆ ಅಧಿಕಾರ ವಿಕೇಂದ್ರಿಕರಣವಾಗುತ್ತದೆ. ಅದಾಗಬಾರದು, ಎಲ್ಲ ಅಧಿಕಾರವನ್ನು ತಾವೊಬ್ಬರೇ ಅನುಭವಿಸಬೇಕು ಎಂಬ ದುರುದ್ದೇಶದಿಂದ ನಗರ ಶಾಸಕರು ಚುನಾವಣೆ ಸಹ ನಡೆಯದಂತೆ ನೋಈಡಿಕೊಂಡರು ಎಂದರು.

ನೀಯತ್ತು ಹಾಗೂ ಪ್ರಾಮಾಣಿಕತೆ ಬಗ್ಗೆ ಮಾತನಾಡುವ ನಗರ ಶಾಸಕರು, ಅಧಿಕಾರಿಗಳಿಗೆ ನೇರವಾಗಿ ಗೋಶಾಲೆಗೆ ಹಣ ಕೊಡಿ ಎಂದು ಹೇಳುತ್ತಾರೆ. ಬಬಲೇಶ್ವರ ಬೇಕಂತಲೇ ಚುನಾವಣೆ ಪ್ರಚಾರಕ್ಕೆ ಅವರು ತಡಮಾಡಿ ಹೋದರು. ನಮ್ಮ ಪಕ್ಷದ ಸಾಧನೆಗಳನ್ನು ಹೇಳುವ ಬದಲು ತಮ್ಮ ವೈಯಕ್ತಿಕ ಪ್ರತಿಷ್ಠೆ ಮಾತು ಹೇಳಿ ಎದ್ದು ಬಂದರು. ಇದರಿಂದ ಅವರ ಒಳ ಮನಸ್ಸಿನಲ್ಲಿ ಏನಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದರು. ಪಂಚಮಸಾಲಿ ಮೀಸಲಾತಿಗಾಗಿ ನಾನು, ಸಿ.ಸಿ.ಪಾಟೀಲ, ಶಂಕರ ಪಾಟೀಲ ಮುನೇನಕೊಪ್ಪ ಸೇರಿದಂತೆ ಅನೇಕರು ಪ್ರಯತ್ನ ಮಾಡಿದೆವು. 

ಅಂದು ಅವರು ಆಡಳಿತ ಪಕ್ಷದಲ್ಲಿದ್ದರೂ ಕಾಂಗ್ರೆಸ್‌ ಜೊತೆ ಕೈಜೋಡಿಸಿ ವಿನಾಕಾರಣ ನಮ್ಮನ್ನೇ ಟೀಕಿಸಿದರು. ಬಿಜೆಪಿಯಲ್ಲಿದ್ದರೂ ಬಿಜೆಪಿ ವಿರುದ್ಧ ಹೋರಾಟ ಮಾಡಿದ್ದ ವಿಜಯಪುರ ನಗರ ಶಾಸಕರು ಈಗ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಏಕೆ ಹೋರಾಟ ಸಂಘಟಿಸುತ್ತಿಲ್ಲ ಎಂದು ಕುಟುಕಿದರು. ಸಂಸದ ರಮೇಶ ಜಿಗಜಿಣಗಿ, ಮಾಜಿ ಸಚಿವ ಎಸ್‌.ಕೆ.ಬೆಳ್ಳುಬ್ಬಿ, ಕರ್ನಾಟಕ ರಾಜ್ಯ ಸಾವಯವ ಬೀಜ ಪ್ರಮಾಣ ಸಂಸ್ಥೆಯ ನಿಕಟಪೂರ್ವ ಅಧ್ಯಕ್ಷ ವಿಜುಗೌಡ ಪಾಟೀಲ, ಇಂಡಿ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕಾಸುಗೌಡ ಬಿರಾದಾರ, ನಾಗಠಾಣ ವಿಧಾನಸಭಾ ಕ್ಷೇತ್ರದ ಪರಾಜಿತ ಅಭ್ಯರ್ಥಿ ಸಂಜೀವ ಐಹೊಳ್ಳಿ ಮೊದಲಾದವರು ಉಪಸ್ಥಿತರಿದ್ದರು.

ಕಾಂಗ್ರೆಸ್‌ ಬಾಗಿಲೂ ತಟ್ಟಿದ ಯತ್ನಾಳ: ಉದ್ಯಮಿ ವಿಜಯ ಸಂಕೇಶ್ವರ ಅವರು ಉದ್ಯಮ ರಂಗದ ಕಾರ್ಯ ಬಾಹುಳ್ಯದಿಂದಾಗಿ ಅವರಿಗೆ ಸಚಿವ ಸ್ಥಾನ ನಿಭಾಯಿಸಲಾಗದ ಕಾರಣದಿಂದ ಅಂದು ಅವರು ಕೇಂದ್ರ ಸಚಿವ ಸ್ಥಾನ ತ್ಯಾಗ ಮಾಡಿದ್ದರು. ಸಂಕೇಶ್ವರ ತ್ಯಾಗದಿಂದಾಗಿ ಯತ್ನಾಳ ಅವರಿಗೆ ಕೇಂದ್ರ ಸಚಿವ ಸ್ಥಾನ ದೊರಕಿತ್ತು. ಅದು ಸಹ ಪೂರ್ಣಾವಧಿಗೆ ದೊರಕಿರಲಿಲ್ಲ. ಕೇಂದ್ರದಲ್ಲಿ ನಿಮ್ಮನ್ನು ಏಕೆ ಪೂರ್ಣಾವಧಿ ಸಚಿವರನ್ನಾಗಿ ಮಾಡಲಿಲ್ಲ? ಎಂದು ಪ್ರಶ್ನಿಸಿದರು.

ನಾನು ಗ್ರಾನೈಟ್‌ ವಿದೇಶಕ್ಕೆ ರಫ್ತು ಮಾಡಲಿಲ್ಲ: ಡಿಕೆಶಿ ವಿರುದ್ಧ ಎಚ್‌ಡಿಕೆ ಪರೋಕ್ಷ ವಾಗ್ದಾಳಿ

ಪರಮಾಣು ಒಪ್ಪಂದ ಸಂದರ್ಭದಲ್ಲಿ ಸಂಸದರಾಗಿದ್ದ ಈಗಿನ ವಿಜಯಪುರ ನಗರ ಶಾಸಕರು ಒಂದು ಹಂತಕ್ಕೆ ಕಾಂಗ್ರೆಸ್‌ ಬಾಗಿಲನ್ನು ಬಡೆದಿದ್ದರು. ಕಾಂಗ್ರೆಸ್‌ಗೆ ಸೇರ್ಪಡೆ ಆಗುವವರಿದ್ದರು. ಆದರೆ, ದಿ. ಅನಂತಕುಮಾರ ಅವರು ಮನವೊಲಿಸಿದ ಪರಿಣಾಮ ಬಿಜೆಪಿಯಲ್ಲೇ ಉಳಿದುಕೊಂಡರು. ನಂತರ ಜೆಡಿಎಸ್‌ ಪಕ್ಷಕ್ಕೆ ಸೇರಿ ಬಿಜೆಪಿ ನಾಯಕರನ್ನು ಅಷ್ಟೇ ಅಲ್ಲ, ಯಾರು ಅವರನ್ನು ಕೇಂದ್ರ ಸಚಿವರನ್ನಾಗಿ ಮಾಡಿದ್ದರೋ ಅವರನ್ನೇ ಅಸಂಸದೀಯ ಪದ ಪ್ರಯೋಗಿಸಿ ಟೀಕಿಸಿದ್ದರು.

Follow Us:
Download App:
  • android
  • ios