ಬೆಂಗಳೂರು(ಡಿ. 29)  ಬಿಜೆಪಿ ನಾಯಕಿ ಮಾಳವಿಕಾ ಅವಿನಾಶ್ ಪೋಟೋವೊಂದನ್ನು ಹಂಚಿಕೊಂಡು ಹಳೆಯ ವಿಚಾರಗಳನ್ನು ಮೆಲುಕು ಹಾಕಿದ್ದಾರೆ.  ಏನನ್ನೋ ಹುಡುಕಬೇಕಿದ್ದರೆ ಈ ಪೋಟೋ ಸಿಕ್ಕಿತು ಎಂದು ಬೆಂಗಳೂರು ದಕ್ಷಿಣ ಸಂಸದ, ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಅವರೊಂದಿಗೆ ಇರುವ ಪೋಟೋ ಹಂಚಿಕೊಂಡಿದ್ದಾರೆ.

2017 ರಿಂದ  ತೇಜಸ್ವಿ ಸೂರ್ಯ ಬಹಳ ದೂರ ಸಾಗಿ ಬಂದಿದ್ದಾರೆ. ರಾಜ್ಯ  ಕಾರ್ಯಕಾರಿಣಿ ಸಂದರ್ಭ ತೆಗೆದ ಚಿತ್ರ ಇದು. ಹೆಮ್ಮೆಯಾಗಿ ಗುರುತಿಸಿಕೊಂಡಿರುವ ಯುವನಾಯಕನಿಗೆ ಅಭಿನಂದನೆ ಎಂದು ತಿಳಿಸಿದ್ದಾರೆ.

ಐಐಟಿಯಿಂದ ಹೊಲದವರೆಗೆ.. ಕೃಷಿ ಕಾಯಿದೆ ಲಾಭಗಳನ್ನು ತಿಳಿಸಿಕೊಟ್ಟ ಸೂರ್ಯ

2019  ರ ಲೋಕಸಭಾ ಚುನಾವಣೆಯಲ್ಲಿ ತೇಜಸ್ವಿ ಸೂರ್ಯ  ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು. ಅಲ್ಲಿಂದ ಒಂದೊಂದೆ ಹೆಜ್ಜೆ ಮುಂದೆ ಇಟ್ಟು ಈಗ ರಾಷ್ಟ್ರ ರಾಜಕಾರಣದಲ್ಲಿ ಸಕ್ರಿಯವಾಗಿದ್ದಾರೆ.