ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ: ಮಾಜಿ ಸಂಸದರ ವಿರುದ್ಧ ಕಮಲ ನಾಯಕನ ವಾಗ್ದಾಳಿ!
ರಾಜ್ಯಮಟ್ಟದ ನಾಲ್ಕೈದು ಜನರ ಪಿತೂರಿಯಿಂದ ಪಕ್ಷ ಅಧೋಗತಿ ತಲುಪಿ ಸೋತಿದೆ. ವಿಧಾನಸಭೆ, ಲೋಕಸಭಾ ಚುನಾವಣೆನೇ ಬೇರೆ. ಅವರಿಗೆ ನಿಜವಾದ ರಾಜಕೀಯ ಆಸಕ್ತಿ, ಜನ ಸೇವೆ ಮಾಡುವಂತ್ತಿದ್ದಾರೆ. ಪಕ್ಷ ಬಿಟ್ಟು ಸ್ವತಂತ್ರ ಅಭ್ಯರ್ಥಿ ಆಗಿ ನಿಂತು ತಮ್ಮ ಶಕ್ತಿ ತೋರಿಸಲಿ. ಪಕ್ಷ ಬಿಟ್ಟು ಸಿದ್ದೇಶ್ವರ್ ಅಥವಾ ಅವರ ಕುಟುಂಬದವರು ಯಾವುದೇ ಚುನಾವಣೆಯಲ್ಲಿ ನಿಂತು ಅವರ ಸಾರ್ವಜನಿಕ ಬದ್ಧತೆ ತೋರಿಸಲಿ ಎಂದು ಜಿಎಂ ಸಿದ್ದೇಶ್ವರ್‌ಗೆ ಸವಾಲು ಹಾಕಿದ ಮಾಡಾಳ್ ಮಲ್ಲಿಕಾರ್ಜುನ್
ದಾವಣಗೆರೆ(ಅ.16): ಕಾರ್ಯಕರ್ತರು ಯಾರ ಪರ ಅಲ್ಲ ಪಕ್ಷದ ಪರ ಇದ್ದಾರೆ. ಯಾರು ದುರಹಂಕಾರಿಗಳು ಇರುತ್ತಾರೋ ಅವರ ವಿರುದ್ಧ ದಂಗೆ ಏಳುತ್ತಾರೆ. ನಾವು ಯಾವ ಕಾರ್ಯಕರ್ತರ ಮೇಲೆ ದೌರ್ಜನ್ಯ ಮಾಡಲ್ಲ ಎಲ್ಲರೊಟ್ಟಿಗೆ ಬೆರೆಯುತ್ತೇವೆ. ಯಾರ ಕಪಿ ಮುಷ್ಟಿಯಲ್ಲೂ ದಾವಣಗೆರೆ ಬಿಜೆಪಿ ಪಕ್ಷ ಇಲ್ಲ. 20 ವರ್ಷ ಈ ಜಿಲ್ಲೆಯ ಜನ ಅವರನ್ನು ಸಂಸದರನ್ನಾಗಿ ಆಯ್ಕೆ ಮಾಡಿದ್ದಾರೆ. ಚುನಾವಣೆ ಸೋಲಿನ ಬಳಿಕ ಸೋತಂತ ಅಭ್ಯರ್ಥಿ ಪಕ್ಷದ ಮುಖಂಡರ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದಾರೆ ಎಂದು ಮಾಜಿ ಸಂಸದ ಜಿಎಂ ಸಿದ್ದೇಶ್ವರ್ ವಿರುದ್ಧ ಚನ್ನಗಿರಿ ಬಿಜೆಪಿ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ವಾಗ್ದಾಳಿ ನಡೆಸಿದ್ದಾರೆ.
ಇಂದು(ಬುಧವಾರ) ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಡಾಳ್ ಮಲ್ಲಿಕಾರ್ಜುನ್, ರಾಜ್ಯಮಟ್ಟದ ನಾಲ್ಕೈದು ಜನರ ಪಿತೂರಿಯಿಂದ ಪಕ್ಷ ಅಧೋಗತಿ ತಲುಪಿ ಸೋತಿದೆ. ವಿಧಾನಸಭೆ, ಲೋಕಸಭಾ ಚುನಾವಣೆನೇ ಬೇರೆ. ಅವರಿಗೆ ನಿಜವಾದ ರಾಜಕೀಯ ಆಸಕ್ತಿ, ಜನ ಸೇವೆ ಮಾಡುವಂತ್ತಿದ್ದಾರೆ. ಪಕ್ಷ ಬಿಟ್ಟು ಸ್ವತಂತ್ರ ಅಭ್ಯರ್ಥಿ ಆಗಿ ನಿಂತು ತಮ್ಮ ಶಕ್ತಿ ತೋರಿಸಲಿ. ಪಕ್ಷ ಬಿಟ್ಟು ಸಿದ್ದೇಶ್ವರ್ ಅಥವಾ ಅವರ ಕುಟುಂಬದವರು ಯಾವುದೇ ಚುನಾವಣೆಯಲ್ಲಿ ನಿಂತು ಅವರ ಸಾರ್ವಜನಿಕ ಬದ್ಧತೆ ತೋರಿಸಲಿ ಎಂದು ಸವಾಲು ಹಾಕಿದ್ದಾರೆ.
ಸಿದ್ದರಾಮಯ್ಯ ಸಿಎಂ ಕುರ್ಚಿಯಿಂದ ಇಳಿದು ಹೊಸ ಜನಾದೇಶ ಪಡೆಯಲಿ: ಎಂ.ಪಿ.ರೇಣುಕಾಚಾರ್ಯ
ಇನ್ನೊಬ್ಬರ ಮೇಲೆ ಆಪಾದನೆ ದೌರ್ಜನ್ಯ ಮಾಡೋ ಕಾಲ ಹೋಯಿತು. ನಾನು ಹೇಳಿದ್ದೆ ಸರಿ, ನಾನು ನಡೆದದ್ದೇ ದಾರಿ ಎನ್ನುವ ಕಾಲವನ್ನು ಇಂದು ಆಗಲ್ಲ ಮುಂದೆ ಆಗೋಕೆ ಬಿಡಲ್ಲ ಎಂದು ಸಿದ್ದೇಶ್ವರ್ ವಿರುದ್ಧ ಮಾಡಾಳ್ ಮಲ್ಲಿಕಾರ್ಜುನ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.