ಹುಚ್ಚಾ ಅಯೋಗ್ಯ ಸಿದ್ದರಾಮಯ್ಯನಿಗೆ ಮರ್ಯಾದೆ ಕೊಡಲ್ಲ, ಏಕವಚನದಲ್ಲಿ ಈಶ್ವರಪ್ಪ ವಾಗ್ದಾಳಿ

* ದ್ದರಾಮಯ್ಯನಿಗೆ ಮರ್ಯಾದೆ ಕೊಡಲ್ಲ
* ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ಏಕವಚನದಲ್ಲಿ ವಾಗ್ದಾಳಿ
* ಆರ್‌ಎಸ್‌ಎಸ್‌ ಬಗ್ಗೆ ಮಾತನಾಡಿದ್ದಕ್ಕೆ ಈಶ್ವರಪ್ಪ ಕೆಂಡಾಮಂಡಲ

BJP Leader KS Eshwarappa Hits out at Siddaramaiah rbj

ಶಿವಮೊಗ್ಗ, (ಜೂನ್.04) : ಹುಚ್ಚಾ, ಅಯೋಗ್ಯ, ನಿಮ್ಹಾನ್ಸ್​ ರೋಡ್​ನಲ್ಲಿ ಹೋಗುವ ನಾಯಿಯು ಮಾಜಿ ಸಿಎಂ ಸಿದ್ದರಾಮಯ್ಯನಿಗೆ ಮರ್ಯಾದೆ ಕೊಡಲ್ಲ ಎಂದು ಏಕವಚನದ ವಾಗ್ದಾಳಿ ನಡೆಸಿದ ಮಾಜಿ‌ ಸಚಿವ ಕೆ.ಎಸ್. ಈಶ್ವರಪ್ಪ, ಆರೆಎಸ್‌ಸ್ ವಿಚಾರಕ್ಕೆ ಬಂದರೆ ಹುಷಾರ್ ಎಂದು ಎಚ್ಚರಿಕೆ ನೀಡಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರ ಚಡ್ಡಿ ಅಭಿಯಾನ ಹೇಳಿಕೆಗೆ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಈಶ್ವರಪ್ಪ, ಆರ್.ಎಸ್.ಎಸ್. ಚಡ್ಡಿ ಹಾಕಿಕೊಂಡು ಸಂಸ್ಕಾರ ಕಲಿತ ನರೇಂದ್ರ ಮೋದಿ ದೇಶ ಆಳುತ್ತಿದ್ದಾರೆ. ರಾಷ್ಟ್ರಪತಿ ಮತ್ತು ಉಪ ರಾಷ್ಟ್ರಪತಿಗಳು ಕೂಡ ಚಡ್ಡಿ ಹಾಕಿಕೊಂಡವರ. ಚಡ್ಡಿ ಹಾಕಿಕೊಂಡು ಸಂಸ್ಕಾರ ಕಲಿತವರೇ ದೇಶ ನಡೆಸಿ, ಇಡೀ ಜಗತ್ತಿನಲ್ಲೇ ಹೆಸರು ಮಾಡುತ್ತಿದ್ದಾರೆ ಸಿದ್ದರಾಮಯ್ಯಗೆ ತಿರುಗೇಟು ನೀಡಿದರು.

ಈ ಹುಚ್ಚ ಸಿದ್ಧರಾಮಯ್ಯನಿಗೆ ಹುಚ್ಚು ಬಿಡಿಸುವ ಔಷಧಿ ಇಲ್ಲ. ಹುಚ್ಚ ಸಿದ್ಧರಾಮಯ್ಯನಿಗೆ ಏನು ಹೇಳಬೇಕು ಗೊತ್ತಿಲ್ಲ. ಹುಚ್ಚ ಸಿದ್ಧರಾಮಯ್ಯನಿಗೆ ನಿಮಾನ್ಸ್ ಗೆ ಸೇರಿಸಬೇಕಿದೆ. ಅಲ್ಲಿಯೂ ಈ ಹುಚ್ಚನಿಗೆ ಔಷಧಿ ಸಿಗಲ್ಲ. ಕಾಂಗ್ರೆಸ್ ನಲ್ಲಿಯೇ ಈ ಹುಚ್ಚನ ಮಾತಿಗೆ ಬೆಲೆ ಇಲ್ಲ, ಹುಚ್ಚ ಸಿದ್ದರಾಮಯ್ಯನಿಗೆ ಹುಚ್ಚುಚ್ಚು ಹೇಳಿಕೆಗಳಿಂದ ಹುಚ್ಚು ಪ್ರಚಾರ ಪಡೆಯುವ ಹುಚ್ಚ ಆಗಿದ್ದಾನೆ ಎಂದು ವ್ಯಂಗ್ಯವಾಡಿದರು

Karnataka Politics: ಆರೆಸ್ಸೆಸ್‌ನಲ್ಲಿ ಒಂದೇ ಜಾತಿಯವರೇಕೆ: ಸಿದ್ದರಾಮಯ್ಯ.

ಈ ಹುಚ್ಚ ಸಿದ್ಧರಾಮಯ್ಯ ನಾನು ಮುಖ್ಯಮಂತ್ರಿ ಆಗಲ್ಲ ಅಂತಾನೆ. ತಮ್ಮ ಕಾರ್ಯಕರ ಮೂಲಕ ಈ ಹುಚ್ಚ ಸಿದ್ಧರಾಮಯ್ಯನೇ ಮುಖ್ಯಮಂತ್ರಿ ಎಂದು ಹೇಳಿಸುತ್ತಾನೆ. ಈ ಹುಚ್ಚ ಸಿದ್ಧರಾಮಯ್ಯನಿಗೆ ಸೋನಿಯಾ ಗಾಂಧಿ ಹೇಳಿದರೂ ಅರ್ಥವಾಗಲ್ಲ. ನಾವು ಹೇಳಿದರೂ ಆಗಲ್ಲ. ಈ ಚಡ್ಡಿ ವಿಚಾರದಲ್ಲಿ ಕೀಳು ಮಟ್ಟದಲ್ಲಿ ಮಾತನಾಡಿದ್ದಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಳೆದ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿಯಲ್ಲಿ ಸಿದ್ಧರಾಮಯ್ಯ ಏಕೆ ಸೋತ? ನೂರು ಕಡೆ ನಿಂತರೂ ಕೂಡ ಸಿದ್ಧರಾಮಯ್ಯ ಸೋಲುವುದು ನಿಶ್ಚಿತ. ಸಿದ್ಧರಾಮಯ್ಯನಿಗೆ ಆರ್.ಎಸ್.ಎಸ್. ಬಗ್ಗೆ ಗೌರವ ಕೊಡಬೇಕು ಅನಿಸುತ್ತಲೇ ಇಲ್ಲ. ಆರ್.ಎಸ್.ಎಸ್. ಚಡ್ಡಿ ವಿಚಾರಕ್ಕೆ ಬಂದರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು.

ನಿಮ್ಮ ಯುವಕರನ್ನ ಕಂಟ್ರೋಲ್ ಮಾಡಿಕೊಳ್ಳುವ ಶಕ್ತಿ ನಿನಗೆ ಇಲ್ಲ. ಕಾಂಗ್ರೆಸ್ ಪಕ್ಷ ಸ್ವಾತಂತ್ರ್ಯ ಕ್ಕಾಗಿ ಹೋರಾಡಿದ್ದ ಪಕ್ಷ. ಆದರೆ ಇವತ್ತು ಗೂಂಡಾಗಳ ಕೈಯಲ್ಲಿ ಪಕ್ಷ ಇದೆಯಲ್ಲಾ ಎಂಬ ನೋವು ಆ ಪಕ್ಷದ ಹಿರಿಯ ನಾಯಕರಿಗು ಇದೆ. ಆರ್ ಎಸ್ ಎಸ್ ಶಕ್ತಿಶಾಲಿಯಾಗಿ ಬೆಳೆದಿದೆ. ಇದನ್ನು ಇವತ್ತು ಸೋಲಿಸಲು ಆಗಲ್ಲ, ಆಗಾಗಿಯೇ ಆರ್ ಎಸ್ ಎಸ್ ಟಾರ್ಗೆಟ್ ಮಾಡ್ತಿದ್ದಾರೆ. ಆ ಪಕ್ಷದವರಿಗೆ ಸಾಕಾಗಿ ಹೋಗಿದೆ ಈ ಹುಚ್ಚನನ್ನು ಕಟ್ಟಿಕೊಂಡು ಹೇಗೆ ಪಕ್ಷ ಕಟ್ಟೋದು ಅಂತಾ. ಈ ಹುಚ್ಚ ಹಿಂದಿನಿಂದ ನನ್ನನ್ನೇ ಮುಖ್ಯಮಂತ್ರಿ ಮಾಡಿ ಅಂತಾ ಹಿಂಬಾಲಕರಿಗೆ ಹೇಳಿಕೊಡ್ತಾನೆ ಎಂದು ವ್ಯಂಗ್ಯವಾಡಿದರು.

ಆರ್ ಎಸ್ ಎಸ್ ಚೆಡ್ಡಿ ಸುಡುವ ಕೆಲಸಕ್ಕೆ ಬಂದರೆ ಹುಷಾರ್ ಎಂದ ಮಾಜಿ ಸಚಿವ ಕೆ.ಎಸ್​.ಈಶ್ವರಪ್ಪ , ನಿಮ್ಮ ಕಾಂಗ್ರೆಸ್ ಮೂಲಗುಂಪು ಮಾಡಿರೋದು ಈ ಚೆಡ್ಡಿಯೇ, ನಿನಗೆ ಸೋನಿಯಾಗಾಂಧಿ ಹೇಳಿದರೆ ಕೇಳೋಲ್ಲ. ರಾಹುಲ್ ಗಾಂಧಿಗೆ ಹೇಳುವಂತಹ ಬುದ್ದಿ ಇಲ್ಲ. ಡಿಕೆಶಿಗೆ ನಿನಗೆ ಹೇಗೆ ಹೇಳಬೇಕು ಅಂತಾ ಗೊತ್ತಾಗ್ತಿಲ್ಲ. ನೀವು ಚುನಾವಣೆಗೆ ಎಲ್ಲಿ ನಿಲ್ಲಬೇಕು ಅಂತಾ ಗೊತ್ತಾಗ್ತಿಲ್ಲ. 20 ಕಡೆ ಕರೆಯುತ್ತಿದ್ದಾರೆ ಅಂತಾ ಹೇಳ್ತೀರಾ, 20 ಕಡೆ ನಿಂತುಕೊಳ್ಳಿ ಎಲ್ಲಾ ಕಡೆ ನಿಮ್ಮನ್ನು ಚೆಡ್ಡಿಯೇ ಸೋಲಿಸುತ್ತದೆ. ರಸ್ತೆಯಲ್ಲಿ ಹೋಗುವ ನಾಯಿ ಸಹ ನಿನಗೆ ಗೌರವ ಕೊಡಲು ಇಷ್ಟಪಡಲ್ಲ ಎಂದು ಕಠಿಣ ಪದಪ್ರಯೋಗ ಮಾಡಿದರು.

ವಿಪಕ್ಷ ನಾಯಕ ಸ್ಥಾನ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲದಿರುವ ಮನುಷ್ಯ , ಅವನೊಬ್ಬ ಅಯೋಗ್ಯ ಎಂದು ಆಕ್ರೋಶಹೊರಹಾಕಿದ ಈಶ್ವರಪ್ಪನವರು ಆರ್ ಎಸ್ ಎಸ್ ಸುದ್ದಿಗೆ ಬಂದರೆ ಕಾಂಗ್ರೆಸ್ ಸುಟ್ಟು ಹೋಗುತ್ತದೆ. ಈ ರೀತಿ ಮಾತನಾಡುತ್ತಿರುವುದರಿಂದಲೇ ಕಾಂಗ್ರೆಸ್ ನ ಹಲವು ನಾಯಕರು ಪಕ್ಷ ಬಿಟ್ಟು ಹೋಗ್ತಿದ್ದಾರೆ. ಕೇಂದ್ರ ಹಾಗು ರಾಜ್ಯದಲ್ಲಿ ಬಿಜೆಪಿ ಸರಕಾರ ಇರೋದು, ನಿಮ್ಮ ಗೂಂಡಾಗಿರಿ ನಡೆಯಲ್ಲ , ಸದ್ಯಕ್ಕೆ ವಿರೋಧ ಪಕ್ಷದಲ್ಲಿ ಇದ್ದೀರಾ, ಮುಂದೆ ಅಧಿಕೃತ ವಿಪಕ್ಷದಲ್ಲು ಇರಲ್ಲ, ಇದಕ್ಕೆ ಸಿದ್ದರಾಮಯ್ಯ ಅವಕಾಶ ಕೊಡಲ್ಲ ಎಂದು ವ್ಯಂಗ್ಯವಾಡಿದರು.

ಆರ್ ಎಸ್ ಎಸ್ ಸುಮ್ಮನಿದೆ ಬಿಜೆಪಿಗೇಕೆ ಕಷ್ಟ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಈಶ್ವರಪ್ಪ, ಆರ್‌ಎಸ್‌ಎಸ್‌ ನಮಗೆ ಸಂಸ್ಕಾರ ಕೊಟ್ಟಿದೆ. ನಾವು ಆರ್ ಎಸ್ ಎಸ್ ಸ್ವಯಂಸೇವಕರು. ಇಂತಹ ಹೇಳಿಕೆಯಿಂದ ನಮಗೆ ನೋವಾಗುವುದು ಸಹಜ ಎಂದರು.

ನೀಡುವ ಒಂದು ಹೇಳಿಕೆಯಿಂದ ಕೋಟಿ ಜನರ ಮನಸ್ಸಿಗೆ ನೋವು ಮಾಡಬೇಡಬೇಡಿ. ನಿಮ್ಮನ್ನು ಎಲ್ಲ ಕಡೆ ಸೋಲಿಸಿಯಾಗಿದೆ. ಗೆಲ್ಲಲು ನಿಮಗೆ ಜಾಗವಿಲ್ಲವಾಗಿದೆ. ಸಿದ್ದರಾಮಯ್ಯ ಎಲ್ಲಿ ನಿಂತರೂ ಸೋಲಿಸುವುದು ಈ ಚಡ್ಡಿನೇ. ಸಿದ್ದರಾಮಯ್ಯ ಅವರಿಗೆ ಬಹುವಚನ ನೀಡಲು ಮನಸ್ಸೇ ಬರುತ್ತಿಲ್ಲ. ರಸ್ತೆ ಮೇಲೆ ಹೋಗುವ ನಾಯಿಗೆ ಕೂಡ ಗೌರವ ಕೊಡಲು ಮನಸ್ಸು ಬಾರದು. ವಿಪಕ್ಷ ಸ್ಥಾನಕ್ಕೇ ಅಗೌರವ ತೋರುತ್ತಿದ್ದಾರೆ ಎಂದು ಕಿಡಿಕಾರಿದರು.

ಶಿಕ್ಷಣ ಸಚಿವರ ಮನೆಗೆ ಬೆಂಕಿ ಹಾಕಲು ಹೋದವರಿಗೆ ಬುದ್ದಿವಾದ ಹೇಳಿದ್ದರೆ ದೊಡ್ಡವರಾಗುತ್ತಿದ್ದರು. ಹರ್ಷ ಕೊಲೆ ನಂತರ ಉದ್ರಿಕ್ತರನ್ನು ಸಮಾಧಾನಪಡಿಸಿ ಶಾಂತಿ ತರಲು ಪ್ರಯತ್ನಿಸಿದ್ದೆ. ಆದರೆ ಸಿದ್ದರಾಮಯ್ಯ ಕೀಳು ಮಟ್ಟದ ರಾಜಕೀಯ ಮಾಡುತ್ತಿದ್ದಾರೆ. ಇಂತಹ ಹುಚ್ಚುತನದಿಂದ ಸಿದ್ದರಾಮಯ್ಯ, ಆ ಪಕ್ಷ ಅಧಿಕಾರ ಕಳೆದುಕೊಂಡಿದ್ದು ಎಂದು ಲೇವಡಿ ಮಾಡಿದರು.

ಅಂಬೇಡ್ಕರ್ ಬಿಟ್ಟರೆ ತಾನೇ ಕಾನೂನು ತಜ್ಞ ಅಂತ ಹೇಳುವ ಸಿದ್ದರಾಮಯ್ಯ, ಕಾನೂನು ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಕಾನೂನು ವಿರುದ್ಧ ಹಿಜಾಬ್ ಪರ ಪ್ರತಿಭಟನೆ ಮಾಡುವವರನ್ನು ಬೆಂಬಲಿಸುತ್ತಿದ್ದಾರೆ ಎಂದು ದೂರಿದರು.

ಆರ್ ಎಸ್ ಎಸ್ ಪದಾಧಿಕಾರಿಗಳು ಇರುವುದು ಮೇಲ್ವರ್ಗದವರಲ್ಲ, ಹಿಂದುಳಿದವರಲ್ಲ, ಎಲ್ಲರೂ ಹಿಂದುಗಳು. ಆರ್ ಎಸ್ ಎಸ್ ಮುಖ್ಯಸ್ಥರು ಬ್ರಾಹ್ಮಣರು ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ಈ ಹುಚ್ಚುತನ ಬಿಡಬೇಕು.ಈ ಹುಚ್ಚುತನದಿಂದಲೇ ಚಾಮುಂಡೇಶ್ವರಿಯಲ್ಲಿ ಸ್ಥಾನ ಸಿದ್ದರಾಮಯ್ಯ ಕಳೆದುಕೊಂಡಿದ್ದು. ಈ ಹುಚ್ಚುತನದಿಂದಲೇ ರಾಜ್ಯದಲ್ಲಿ ಅಧಿಕಾರ ಕಳೆದುಕೊಂಡಿದ್ದು. ಇಂತಹ ಗೂಂಡಾಗಳ ಕೈಯಲ್ಲಿ ಸರ್ಕಾರ ಇರಬಾರದು ಎಂದು ಇವರನ್ನು ಜನರು ದೂರ ತಳ್ಳಿದ್ದಾರೆ ಎಂದು ವ್ಯಂಗ್ಯವಾಡಿದರು.

ನಾವು ಆರ್.ಎಸ್.ಎಸ್.ನವರೇ ಆಗಿದ್ದೇವೆ. ನಾವು ಬಿಜೆಪಿ ಕಟ್ಟಿ ಬೆಳೆಸಿದ್ದೇವೆ. ನಾವು ಆರ್.ಎಸ್.ಎಸ್. ನಿಂದಲೇ ಸಂಸ್ಕಾರ ಕಲಿತು ಬಿಜೆಪಿ ನಡೆಸುತ್ತಿದ್ದೇವೆ. ನಮ್ಮ ಹಿರಿಯರು ಆರ್.ಎಸ್.ಎಸ್. ನಲ್ಲಿ ಇರಬೇಕು ಇಲ್ಲವಾದರೇ, ಜನಸಂಘದಲ್ಲಿ ಇರಬೇಕು ಎಂದು ಆದೇಶ ಮಾಡಿದ್ದರು. ನಾವು ಕೂಡ ಆರ್.ಎಸ್.ಎಸ್. ನವರಾದ್ದರಿಂದಲೇ ಈ ಬಗ್ಗೆ ಉತ್ತರ ನೀಡುತ್ತಿದ್ದೇವೆ ಎಂದರು.

ರಾವಣ ಹನುಮಂತನ ಬಾಲಕ್ಕೆ ಬೆಂಕಿ ಹಚ್ಚಿದ. ಇಡೀ ಲಂಕೆಯೇ ಸುಟ್ಟು ಹೋಯಿತು ಎಂದು ಸಿದ್ಧರಾಮಯ್ಯೆನದನು ರಾವಣನಿಗೆ ಹೋಲಿಸಿದ ಈಶ್ವರಪ್ಪ, ಕಾಂಗ್ರೆಸ್ ಪಕ್ಷವನ್ನು ಚಟ್ಟದಲ್ಲಿಟ್ಟಾಗಿದೆ. ಇನ್ನು ಬೆಂಕಿ ಹಚ್ಚುವುದೊಂದೇ ಬಾಕಿ ಇರುವ  ಕೆಲಸ. ಆ ಕೆಲಸ ನಿಮಗಿಂತ ಚೆನ್ನಾಗಿ ಇನ್ಯಾರು ಮಾಡಲು ಸಾಧ್ಯ? ಚಡ್ಜಿಗೆ ನೀವು ಬೆಂಕಿ ಹಚ್ಜಿ ನೋಡಿ. ನಿಮ್ಮ ಬುಡವೇ ಬೆಂದು ಬೂದಿಯಾಗುತ್ತದೆ. ಯಾವುದೇ ಕಾರಣಕ್ಕೂ ಆರ್‌ಎಸ್‌ಎಸ್‌ ತಂಟೆಗೆ ಬರಬೇಡಿ ಹುಷಾರ್ ಎಂದು ಎಚ್ಚರಿಕೆ ನೀಡಿದರು.

ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ಓವೈಸಿ ಹೇಳಿಕೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ರಾಷ್ಟ್ರಭಕ್ತಿ ಕುತ್ತಿಗೆ ಮೇಲೆ ಇಡುವುದಲ್ಲ. ಹೃದಯದಲ್ಲಿ ದೇಶಭಕ್ತಿ ಇರಬೇಕು. ಪಾಕಿಸ್ತಾನಕ್ಕೆ ಇಡೀ ಜಗತ್ತೇ ಭಾರತದ ಜತೆ ಮೂಲೆಗುಂಪು ಮಾಡಿದೆ. ಕಾಶ್ಮೀರದ ಗಡಿ ಭಾಗದಲ್ಲಿ ರಕ್ಷಣೆಗೆ ಕೇಂದ್ರ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ.ನಮ್ಮ ತಾಕತ್ತನ್ನು ಸರ್ಜಿಕಲ್ ಸ್ಟ್ರೈಕ್ ಮೂಲಕ ತೋರಿಸಿಕೊಟ್ಟಿದೆ.‌ಉಗ್ರರು ಮಾಡುತ್ತಿರುವ ಆಟಾಟೋಪಕ್ಕೆ ನಮ್ಮ ರಕ್ಷಣಾ ಮಂತ್ರಿ, ಪ್ರಧಸೂಕ್ತ ಉತ್ತರ ಕೊಡುತ್ತಾರೆ. ಇದರ ದುರ್ಲಾಭ ಪಡೆಯಲು ಓವೈಸಿಯಂತಹವರು ಪ್ರಯತ್ನಿಸುವುದು ಬೇಡ ಎಂದರು.

ರಾಜ್ಯಸಭೆ ಚುನಾವಣೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಸೋತು ಸೋತು ಸುಣ್ಣವಾಗಿರುವ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಅವರಿಗೆ ಟೀಕೆ ಮಾಡುವುದೆ ಕೆಲಸವಾಗಿದೆ. ಕುಮಾಸ್ವಾಮಿ ಅವರಿಗೂ ಅದೇ ಹೇಳ್ತೇನೆ. ನಮಗೆ ಗೆಲುವೊಂದೇ ಗುರಿ. ರಾಜ್ಯಸಭೆಯಲ್ಲಿ ಮೂರೂ ಸೀಟ್ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Latest Videos
Follow Us:
Download App:
  • android
  • ios