ಚಿಕ್ಕಮಗಳೂರು, (ಡಿ. 26): PFI ಬಾಲ ಬಿಚ್ಚಿದರೆ ಬಾಲಾನೂ ಕಟ್,​ ತಲೆನೂ ಕಟ್ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಖಡಕ್‌ ಎಚ್ಚರಿಕೆ ಕೊಟ್ಟಿದ್ದಾರೆ.

 ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್​ ಕಟೀಲು ಕಚೇರಿಗೆ PFI ಕಾರ್ಯಕರ್ತರ ಮುತ್ತಿಗೆ ಹಾಕಿದ ವಿಚಾರವಾಗಿ ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ತನಿಖೆ ಮಾಡಬಾರದು ಎನ್ನುವುದಕ್ಕೆ ಅವರು ಯಾರು? ಭಾರತ ಇರುವುದು ಭಯೋತ್ಪಾದನೆ ಮಾಡುವುದಕ್ಕೆ ಅಲ್ಲ. ಭಯೋತ್ಪಾದನೆಗೆ ವಿದೇಶದಿಂದ ಬರುವ ಹಣದ ತಡೆಗೆ ತನಿಖೆ ನಡೆಸಬೇಕಿದೆ. ಹಣ ಬರುವುದನ್ನು ತಡೆಯುವುದಕ್ಕೆ ತನಿಖೆ ನಡೆಯಬೇಕಿದೆ ಎಂದು ಹೇಳಿದರು.

PFI ಮುಖಂಡರ ಮೇಲೆ ಇಡಿ ತನಿಖೆ; ನಳೀನ್ ಕುಮಾರ್ ಕಚೇರಿ ಮೇಲೆ ಪ್ರತಿಭಟನೆ

FI ಮುಖಂಡರ ಮೇಲೆ ಇಡಿ ತನಿಖೆ ಮಾಡುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ, ನಳೀನ್ ಕುಮಾರ್ ಕಟೀಲ್ ಕಚೇರಿ ಮೇಲೆ ಮುತ್ತಿಗೆ ಯತ್ನಿಸಿದ್ದಾರೆ. ಕಚೇರಿ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿದೆ.