ಬೆಂಗಳೂರು (ನ.11): ರಾಜ್ಯದಲ್ಲಿ ನಡೆದ ಉಪ ಚುನಾವಣೆಯಲ್ಲಿ ಮತ್ತು ಭೇರೆ ಬೇರೆ ರಾಜ್ಯದಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. 

 ಸೈದ್ಧಾಂತಿಕ ಬದ್ಧತೆ , ಅಭಿವೃದ್ಧಿ ಪರ ಕೆಲಸ ಮಾಡಿದ್ದಕ್ಕೆ ಬಿಹಾರದಲ್ಲಿ ಗೆಲುವು ಸಾಧಿಸಲಾಗಿದೆ.  ಸಿದ್ದರಾಮಯ್ಯ ಎಲ್ರಿ ಇದೆ ಬಿಜೆಪಿ ಎಲ್ರಿ ಇದೆ  ಎಂದು ಕೇಳುತ್ತಿದ್ದರು. ಇನ್ನಾದರೂ ಅವರು ಈ ಬಗ್ಗೆ ತಿಳಿದುಕೊಳ್ಳಬೇಕು. ಸಮೀಕ್ಷೆಯನ್ನು ಸುಳ್ಳು ಮಾಡಿ‌ ನಾಲ್ಕನೆ ಬಾರಿ ನಿತೀಶ್ ಕುಮಾರ್ ನೇತೃತ್ವದಲ್ಲಿ ಗೆದ್ದಿದ್ದೇವೆ ಎಂದು ಸಿ ಟಿ ರವಿ ಹೆಳಿದರು. 

 ನಾಲ್ಕು ಬಾರಿ ಗೆಲ್ಲೋದು ಸುಲಭವಲ್ಲ. ಒಂದು ಗ್ರಾಮ ಪಂಚಾಯತಿ ಒಮ್ಮೆ ಗೊಲ್ಲೋದು ಕಷ್ಟ ಇರುವ ಸಮಯದಲ್ಲಿ ನಾಲ್ಕು ಬಾರಿ ಎನ್ ಡಿ ಗೆದ್ದಿದೆ.  ಉಪಚುನಾವಣೆ ಸೋಲಿನ ನೈತಿಕತೆಯನ್ನು ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಹೊರಬೇಕು ಎಂದು ನಾವು ಹೇಳುವುದಿಲ್ಲ. ಖಾಲಿ ಇಲ್ಲದ ಸಿಎಂ ಖುರ್ಚಿಗೆ ಕಾಂಗ್ರೆಸ್‌ನವರು  ಟವೆಲ್ ಹಾಕಿದ್ರು. ಆದರೆ ಜನರು ಅವರನ್ನು ವಿರೋಧ ಪಕ್ಷದ ಸ್ಥಾನದಲ್ಲಿ ಕೂರಿಸಿದರು. ಡಿ.ಕೆ. ಶಿವಕುಮಾರ್ ಜಾತಿ ರಾಜಕೀಯ ಮಾಡಲು ಹೋಗಿ ಸೋತಿದ್ದಾರೆ ಎಂದು ಸಿ ಟಿ ರವಿ ಹೆಳಿದರು. 

ಸೀಟು ಗಳಿಕೆಯಲ್ಲಿ 3ನೇ ಸ್ಥಾನಕ್ಕೆ ಕುಸಿದ ಜೆಡಿಯು: ನಿತೀಶ್‌ಗೆ ಮಾರಕವಾಗಿದ್ದೇನು ಗೊತ್ತಾ? ..
 
ಇದು ಬಿಜೆಪಿಯ ಗೆಲುವು ಎನ್ನೋದನ್ನು ಕಾಂಗ್ರೆಸ್‌ನವರು ಒಪ್ಪಿಕೊಳ್ಳಬೇಕು. ಇಲ್ಲವಾದರೆ ಅವರು ಪಾಠ ಕಲಿಯೋದಿಲ್ಲ. ಮೊದಲು ಕಾಂಗ್ರೆಸ್ ಗೆ ಅಂಟಿರುವ ಕಾಯಿಲೆ ವಾಸಿ ಮಾಡಿಕೊಳ್ಳಬೇಕು. ಜಾತಿವಾದ, ಕುಟುಂಬ ರಾಜಕೀಯ ಎಲ್ಲವೂ ಕಾಂಗ್ರೆಸ್ ಗೆ ಅಂಟಿರುವ ಕಾಯಿಲೆ. ಅದರಿಂದಾಗಿಯೇ ಕಾಂಗ್ರೆಸ್ ಇಂದು‌ ಈ ಸ್ಥಿತಿಗೆ ಬಂದಿದೆ ಎಂದು ಸಿ ಟಿ ರವಿ ಹೇಳಿದರು. 

ಬಿಹಾರದಲ್ಲಿ ನಡೆದ ಚುನಾವಣೆಯಲ್ಲಿ  ಒಂದು ವೇಳೆ ಎನ್ ಡಿ ಎ ಸೋತಿದ್ದರೆ ಮೋದಿ ರಾಜೀನಾಮೆ ಕೊಡಬೇಕು ಎಂದು‌ ಇವರೆಲ್ಲ ಕೇಳುತ್ತಿದ್ದರು. ಬಿಹಾರದಲ್ಲಿ ಸೋತಿದ್ದರೆ ಮೋದಿ ಅಲೆ ಬಗ್ಗೆಯೂ ಮಾತನಾಡುತ್ತಿದ್ದರು. 

ಎಡಪಕ್ಷಗಳು ಎಡಬಿಡಂಗಿ : ಸಿಪಿಎಂಗೆ ಸಿದ್ಧಾಂತ ಇದ್ದರೆ ಕೇರಳದಲ್ಲಿ ಹೊಂದಾಣಿಕೆ ಮಾಡಿಕೊಳ್ಳಿ. ಬಿಹಾರದಲ್ಲಿ ಕಾಂಗ್ರೆಸ್ ಜೊತೆ ಹೋಗುತ್ತಾರೆ. ಕೇರಳದಲ್ಲಿ ಕಾಂಗ್ರೆಸ್ ವಿರೋಧ ಮಾಡುತ್ತಾರೆ. ಎಡಪಕ್ಷಗಳು ಎಡಬಿಡಂಗಿ ಪಕ್ಷಗಳು ಎಂದು ಸಿಟಿ ರವಿ ಹೇಳಿದರು.