ಚಿಕ್ಕಮಗಳೂರು (ನ.30): ಮಂಗಳೂರಲ್ಲಿ ಉಗ್ರವಾದದ ಪರ ಮತ್ತೆ ಪ್ರತ್ಯಕ್ಷವಾದ ಗೋಡೆ ಬರಹಕ್ಕೆ ಸಂಬಂಧಿಸಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನಮ್ಮ ದೇಶದಲ್ಲಿ ಉಗ್ರವಾದಕ್ಕೆ ಜಾಗ ಇಲ್ಲ. ಉಗ್ರರಿಗೆ ಬಿರಿಯಾನಿ ಕೊಡುವ ಕಾಲ ಹೋಯ್ತು ಎಂದು ಕಿಡಿಕಾರಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಉಗ್ರವಾದಿಗಳು ಹೋಗಬೇಕಾಗಿರೋದು ಮಸಣಕ್ಕೆ ಮಾತ್ರ. ಅವರನ್ನು ಮಸಣಕ್ಕೆ ಕಳುಹಿಸುವ ಕೆಲಸವನ್ನು ನಮ್ಮ ಪೊಲೀಸರು, ಸೈನಿಕರು ಸಮರ್ಥವಾಗಿ ಮಾಡುತ್ತಿದ್ದಾರೆ. 

ಉಗ್ರರಿಗೆ ಬಿರಿಯಾನಿ ಕೊಡುವ ಕಾಲ ಹೋಯ್ತು. ಉಗ್ರವಾದಿಗಳಿಗೆ ಮಣೆ ಹಾಕಿ ಅವರು ಹೇಳಿದಂತೆ ತಲೆದೂಗಿ ಅವರ ಪರ ನಿಲ್ಲುವ ರಾಜಕೀಯ ವ್ಯವಸ್ಥೆ ಈಗಿಲ್ಲ ಎಂದರು.

ಪೂಜೆ ಹೆಸರಲ್ಲಿ ದಿಲ್ಲಿಯಲ್ಲಿ ಕರ್ನಾಟಕ ಬಿಜೆಪಿ ರಾಜಕೀಯ ಹೈಡ್ರಾಮ..!

ಉಗ್ರರಿಗೆ ಅವರದೇ ಭಾಷೆಯಲ್ಲಿ ಉತ್ತರ ನೀಡಲಾಗುವುದು. ಕಾಶ್ಮೀರದಲ್ಲಿ ತಲೆ ಎತ್ತಿದವರ ತಲೆ ಕಟ್‌ ಮಾಡಿದ್ದೇವೆ. ಬಾಲವೂ ಕಟ್‌ ಮಾಡಿದ್ದೇವೆ. ಇಲ್ಲೂ ನಾವು ಅವರ ಬಾಲ ಬಿಚ್ಚಲು ಬಿಡುವುದಿಲ್ಲ. ಬಾಲ ಬಿಚ್ಚಿದರೆ, ಉಳಿದಿರುವುದನ್ನೂ ಕಟ್‌ ಮಾಡಬೇಕಾಗುತ್ತದೆ ಎಂದ ಅವರು, ದೇಶ ವಿರೋಧಿ ಚಟುವಟಿಕೆಯನ್ನು ಯಾವತ್ತಿಗೂ ಸಹಿಸುವುದಿಲ್ಲ. ಅದನ್ನು ಒಪ್ಪಿಕೊಳ್ಳುವ ಸಮಾಜ ವ್ಯವಸ್ಥೆ ಈಗಿಲ್ಲ ಎಂದು ಹೇಳಿದರು.