'ವೀರ ಸಾವರ್ಕರ್ ಗೊತ್ತಿಲ್ಲದವರಿಗೆ ಹುಟ್ಟಿನ ಬಗ್ಗೆಯೂ ಸಂಶಯವಿರುತ್ತೆ'
* ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿಟಿ ರವಿ ತಿರುಗೇಟು
* ಸಾವರ್ಕರ್ ಫ್ಲೈ ಓವರ್ ಕೊಡುಗೆ ಪ್ರಶ್ನಿಸಿದ ಪ್ರಿಯಾಂಕ್ ಖರ್ಗೆ
* ಯಾರಿಗೆ ತಂದೆ ಯಾರೆಂದು ಅನುಮಾನವಿರುತ್ತೋ ಅವರು ಸಾವರ್ಕರ್ ಯಾರೆಂದು ಕೇಳುತ್ತಾರೆ ಎಂದ ಸಿಟಿ ರವಿ
ಚಿಕ್ಕಮಗಳೂರು, (ಆ.14): ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಹಾಗೂ ಕರ್ನಾಟಕ ಕಾಂಗ್ರೆಸ್ ನಾಯಕರ ನಡುವಿನ ಆರೋಪ-ಪ್ರತ್ಯಾರೋಪ ತಾರಕಕ್ಕೇರಿದೆ.
ಯಾರಿಗೆ ತಂದೆ ಯಾರೆಂದು ಅನುಮಾನವಿರುತ್ತೋ ಅವರು ಸಾವರ್ಕರ್ ಯಾರೆಂದು ಕೇಳುತ್ತಾರೆ ಎಂದು ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆಗೆ ಸಿ.ಟಿ.ರವಿ ತಿರುಗೇಟು ಕೊಟ್ಟಿದ್ದಾರೆ.
ವಾಜಪೇಯಿ ಮದ್ಯ ವ್ಯಸನಿ, ಬಾರ್- ಪಬ್‍ಗಳಿಗೆ ಅವರ ಹೆಸರೇ ಇಡ್ರಿ: ರವಿಗೆ ಖರ್ಗೆ ತಿರುಗೇಟು
ಎರಡು ಕರಿನೀರಿನ ಶಿಕ್ಷೆಗೆ ಒಳಗಾದವರು ವೀರ ಸಾವರ್ಕರ್. ಎರಡು ಜೀವವಾಧಿ ಶಿಕ್ಷೆಗೆ ಒಳಗಾದ ಮೊದಲ ವ್ಯಕ್ತಿ ಸಾವರ್ಕರ್. ಅವರ ಬಗ್ಗೆ ಗೊತ್ತಿಲ್ಲದವರಿಗೆ ತಮ್ಮ ಹುಟ್ಟಿನ ಬಗ್ಗೆಯೂ ಸಂಶಯವಿರುತ್ತೆ. ನೆಹರೂ ವೈರುಧ್ಯಗಳನ್ನ ಮುಚ್ಚಿಕೊಳ್ಳಲು ಅಟಲ್ ಅವರ ಹೆಸರನ್ನ ಬಳಸಿಕೊಳ್ಳುತ್ತಿದ್ದಾರೆ. ನೆಹರೂ ನೂರಾರು ಫೋಟೋಗಳು ಇಂದಿಗೂ ಸಾಮಾಜಿಕ ಜಾಲತಾಣದಲ್ಲಿವೆ. ಅಟಲ್ ಜೀ ಅವರದ್ದು ಆ ರೀತಿ ಒಂದು ತೋರಿಸಲಿ ಎಂದು ಸವಾಲು ಹಾಕಿದರು.
ಅಟಲ್ ಜೀ ಬದುಕಿದ್ದಾಗಲೂ ವಿವಾದಕ್ಕೆ ಒಳಗಾಗಲಿಲ್ಲ.. ಈಗ ನೆಹರೂ ವೈರುಧ್ಯಗಳನ್ನ ಮುಚ್ಚಿಕೊಳ್ಳಲು ಅಟಲ್ ಹೆಸರು ಬಳಕೆ ಮಾಡ್ತಿದ್ದಾರೆ. ನೆಹರೂ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರುತ್ತಿರುವ ಚಿತ್ರಗಳನ್ನ ಕಾಂಗ್ರೆಸ್ ಸಮರ್ಥಿಸುತ್ತಿದೆ. ವಸ್ತು ನಿಷ್ಠ ಸಮರ್ಥನೆಗೆ ವಿಷಯ ಇಲ್ಲದಾಗ ನಿಂದನೆಗೆ ಇಳಿಯುತ್ತಾರೆ. ಈಗ ಕಾಂಗ್ರೆಸ್ ಇಳಿದಿರುವುದು ನಿಂದನೆಗೆ, ಆ ನಿಂದನೆಗೆ ಎಲ್ಲರ ಹೆಸರು ಬಳಕೆ ಮಾಡ್ತಾರೆ. ಈಗಿರುವುದು ಹಳೇ ಕಾಂಗ್ರೆಸ್ ಅಲ್ಲ, ಇದು, ಇಟಲಿ ಕಾಂಗ್ರೆಸ್ ಎಂದು ಸಿ.ಟಿ.ರವಿ ಟಾಂಗ್ ಕೊಟ್ಟರು.
ಸಿಗರೇಟ್ ಸೇದುವುದು ಕಾನೂನು ಬಾಹಿರನಾ..? ವಾಜಪೇಯಿವರು ಹೆವಿ ಡ್ರಿಂಕರ್ ಅಂತೆ.. ಅವರಿಗೆ ಸಂಜೆಗೆ ಒತ್ತು ಎರಡು ಗ್ಲಾಸ್ ವಿಸ್ಕಿ ಇರಲೇ ಬೇಕಿತ್ತಂತೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದರು.
ನೆಹರೂ ಬಗ್ಗೆ ರವಿ ಮಾತಾಡೋದ್ರಿಂದ ಅವರ ಘನತೆ ಏನು ಕಡಿಮೆ ಆಗೋದಿಲ್ಲ. ನಾನು ವಾಜಪೇಯಿ ಅವರ ಬಗ್ಗೆ ಮಾತಾಡೋದ್ರಿಂದ ವಾಜಪೇಯಿ ಬಗ್ಗೆ ಏನು ಘನತೆ ಕಡಿಮೆ ಆಗಲ್ಲ. ಸಾವರ್ಕರ್ ಏನು ಕೊಡುಗೆ ಇದೆ ಎಂದು ಸಾವರ್ಕರ್ ಫ್ಲೈ ಓವರ್ ಹೆಸರು ಇಡ್ತಾರೆ. ಗೋಡ್ಸೆಯನ್ನು ನಂಬುತ್ತಾರೆ, ಗಾಂಧಿಯವರು ನಂಬೋದಿಲ್ಲ. ಇತಿಹಾಸ ಗೊತ್ತಿಲ್ಲದವರು ಮಂತ್ರಿಯಾದ್ರೆ ಹಿಂಗೆ ಮಾತಾಡೋದು. ಇವರು ಅವಿವೇಕಿಗಳು, ಅವಿವೇಕಿತನದ ಪರಮಾವಧಿ ಇದು ಎಂದಿದ್ದರು.