ಕಾಂಗ್ರೆಸ್ ಸರ್ಕಾರವನ್ನು ಮೊದಲು ಕಿತ್ತೊಗೆಯಬೇಕು: ಛಲವಾದಿ ನಾರಾಯಣಸ್ವಾಮಿ
ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಮೊದಲು ಕಿತ್ತೊಗೆಯಬೇಕಾಗಿದೆ. ಆದಕ್ಕೆ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ: ಛಲವಾದಿ ನಾರಾಯಣಸ್ವಾಮಿ
ದೇವನಹಳ್ಳಿ(ಜ.07): ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರವನ್ನು ಮೊದಲು ಕಿತ್ತೊಗೆಯಬೇಕಾಗಿದೆ. ಆದಕ್ಕೆ ನಾವು ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ ಎಂದು ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ತಾಲೂಕಿನ ಮಾಳಿಗೇನಹಳ್ಳಿ ಬಳಿ ಸಿಂಧೂರ ಕಲ್ಯಾಣ ಮಂದಿರದಲ್ಲಿ ರಾಜ್ಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾಗಿರುವ ದೊಡ್ಡಬಳ್ಳಾಪುರದ ಶಾಸಕ ಧೀರಜ್ ಮುನಿರಾಜು ಅವರಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜಿಪಿ ಕಾರ್ಯಕರ್ತರು ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಕಳೆದ 65 ವರ್ಷಗಳ ಆಡಳಿತ ನಡೆಸಿದೆ ಗರೀಬಿ ಹಠಾವೋ ಎಂದು ಬಾಯಲ್ಲಿ ಹೇಳುತ್ತಾರೆ ಆದರೆ ಗರೀಬಿ ಹಾಗೆ ಉಳಿದಿದೆ ಎಂದರು.
ಆನೇಕಲ್‌ನಲ್ಲೊಂದು ಮನಕಲಕುವ ಘಟನೆ; 80 ವರ್ಷದ ವೃದ್ಧೆಯನ್ನ ರಾತ್ರೋರಾತ್ರಿ ರಸ್ತೆಗೆ ಬಿಟ್ಟುಹೋದ ಪಾಪಿಗಳು!
ಧೀರಜ್ ಮುನಿರಾಜು ಅವರಿಗೆ ರಾಜ್ಯದ ಜವಾಬ್ದಾರಿ ಸಿಕ್ಕಿದೆ. ಅದನ್ನು ಯಾವ ರೀತಿ ಉಳಿಸಿಕೊಳ್ಳಬೇಕು ಮತ್ತು ಬಳಸಿಕೊಳ್ಳಬೇಕು ಎಂದು ಅರಿತು ಉತ್ತಮ ನಾಯಕರಾಗಿ ಬೆಳೆಯಬೇಕು. ಯಾವುದೇ ಮನುಷ್ಯನಿಗೆ ಪದವಿ ದೊರೆಯುವುದು ಯೋಗದಿಂದಲ್ಲ ಬದಲಾಗಿ ಯೋಗ್ಯತೆಯಿಂದ ಮಾತ್ರ ಎಂದು ಹೇಳಿದರು.
ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಹಾಗೂ ಶಾಸಕ ಧೀರಜ್ ಮುನಿರಾಜು ಮಾತನಾಡಿ, ಮೊದಲು ತಾವು ಶಾಸಕರಾಗಲು ಶ್ರಮಿಸಿದ ಎಲ್ಲ ಮತದಾರರಿಗೆ ಮತ್ತು ಪಕ್ಷದ ಎಲ್ಲ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ತಾವು ರಾಜ್ಯದ ಯುವ ಮೋರ್ಚಾ ಅಧ್ಯಕ್ಷರಾಗಲು ಪಕ್ಷದ ಎಲ್ಲ ಪ್ರಮುಖರಿಗೆ ಅಲ್ಲದೆ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರಿಗೆ ಕೃತಜ್ಞತೆ ಸಲ್ಲಿಸಿ, ಪಕ್ಷವನ್ನು ಸಂಘಟಿಸಿ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ನಮ್ಮ ಅಭ್ಯರ್ಥಿ ಗೆಲುವಿಗೆ ಶ್ರಮಿಸುವುದಾಗಿ ತಿಳಿಸಿದರು.
ಈ ವೇಳೆ ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಬಿ.ಎಂ.ನಾರಾಯಣಸ್ವಾಮಿ, ಕೇಂದ್ರ ರೇಷ್ಮೆ ಮಂಡಳಿ ಮಾಜಿ ಅಧ್ಯಕ್ಷ ದೊಡ್ಡಬಳ್ಳಾಪುರದ ಕೆ.ಎಂ.ಹನುಮಂತರಾಯಪ್ಪ ಹಾಗು ರಾಜ್ಯ ಮುಖಂಡ ಎಕೆಪಿ ನಾಗೇಶ್ ಮಾತನಾಡಿದರು. ಬೆಂಗಳೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಿಜೆಪಿಯ ಒಬಿಸಿ ಜಿಲ್ಲಾಧ್ಯಕ್ಷ ಬೂದಿಗೆರೆ ನಾರಾಯಣಸ್ವಾಮಿ ಇತರರಿದ್ದರು.