ಮೈಸೂರು (ಫೆ.14):  ಬಾರ್‌ನಲ್ಲಿ ನಡೆದ ಗಲಾಟೆಯನ್ನು ನಾನು ನೆನಪು ಮಾಡಿದೆ ಅಷ್ಟೆ. ನಾನು ವೈಯಕ್ತಿಕವಾಗಿ ಮಾತನಾಡಿಲ್ಲ ಟೀಕೆ ಮಾಡಿಲ್ಲ ದಿನ ಬೆಳಗಾದರೆ ಅವರಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದು ನನ್ನ ಕೆಲಸವಲ್ಲ ಎಂದು ಬಿಜೆಪಿ ಮುಖಂಡ ವಿಜಯೇಂದ್ರ ಹೇಳಿದರು.

ಮೈಸೂರಿನಲ್ಲಿ ಮಾತನಾಡಿದ ವಿಜಯೇಂದ್ರ, ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ್ ವಾಗ್ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದರು. 

ದಿನ ಬೆಳಗಾದರೆ ಅವರಿವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವುದು ನನ್ನ ಕೆಲಸವಲ್ಲ. ನಾನು ರಾಜ್ಯದ ಜನರ ಹೃದಯದಲ್ಲಿ ಇರಲು ಕೆಲಸ ಮಾಡುತ್ತಿದ್ದೇನೆ ಎಂದು ವಿಜಯೇಂದ್ರ  ಹೇಳಿದರು.

'ವಿಜಯೇಂದ್ರ ಎಲ್ಲಿ ಮಲಗುತ್ತಾರೆ, ಯಾರ ಮನೆಯಲ್ಲಿ ಇರ್ತಾರೆ ಅಂತಾ ನಮಗೂ ಗೊತ್ತು' ..

ನನ್ನ ಬದುಕು ತೆರೆದ ಪುಸ್ತಕ ಯಾರು ಬೇಕಾದರೂ ನೋಡಬಹುದು. ಕಾಶಪ್ಪನವರು ಏನಾದರೂ ಮಾತನಾಡಲಿ. ಮಾಧ್ಯಮದ ಮಂದೆ ಬಂದು ಯಾರಾದರೂ ಏನಾದರೂ ಮಾತನಾಡಲಿ. ಅವರ ಬಾಯಿ ಮುಚ್ಚಿಸಲು ನಾನು ಯಾರು. ನಾನು ಇನ್ನು ಮುಂದೆ ಅವರ ವಿಚಾರಕ್ಕೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಪ್ರತಿಕ್ರಿಯಿಸಿದರು. 

ಒಮ್ಮೆ ಶಾಸಕರಾದವರು ಸಿಎಂ ಯಡಿಯೂರಪ್ಪ ಬಗ್ಗೆ ಮಾತನಾಡುವಾಗ ನಾಲಿಗೆ ಬಿಗಿ ಹಿಡಿದು ಮಾತನಾಡಿ ಅಂತಾ ಹೇಳಿದ್ದೇ. ಮತ್ತ್ಯಾವ ಹೇಳಿಕೆ ನೀಡಿಲ್ಲ ಎಂದು ಮೈಸೂರಿನಲ್ಲಿ ಬಿ ವೈ ವಿಜಯೇಂದ್ರ ಹೇಳಿದರು.