Asianet Suvarna News Asianet Suvarna News

ಕಾಂಗ್ರೆಸ್ಸಿನವರು ಮಕ್ಮಲ್‌ ಟೋಪಿ ಹಾಕ್ತಾರೆ: ಬಿ.ಎಲ್‌.ಸಂತೋಷ್‌

ಕಾಂಗ್ರೆಸ್ಸಿನವರು ಕೆಲಸ ಮಾಡುವುದಕ್ಕಿಂತ ಸುಳ್ಳು ಹೇಳಿ ಜನರಿಗೆ ಮಕ್ಮಲ್‌ ಟೋಪಿ ಹಾಕುತ್ತಾರೆ, ಹುಷಾರಾಗಿರಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹೇಳಿದರು. 

BJP Leader BL Santosh Slams On Congress At Koppal gvd
Author
First Published Apr 3, 2023, 2:40 AM IST | Last Updated Apr 3, 2023, 2:40 AM IST

ಗಂಗಾವತಿ (ಏ.03): ಕಾಂಗ್ರೆಸ್ಸಿನವರು ಕೆಲಸ ಮಾಡುವುದಕ್ಕಿಂತ ಸುಳ್ಳು ಹೇಳಿ ಜನರಿಗೆ ಮಕ್ಮಲ್‌ ಟೋಪಿ ಹಾಕುತ್ತಾರೆ, ಹುಷಾರಾಗಿರಬೇಕು ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಹೇಳಿದರು. ತಾಲೂಕಿನ ಮರಳಿ ಬಳಿಯ ರಿಚ್‌ ಹೋಟೆಲ್‌ನಲ್ಲಿ ಜರುಗಿದ ಬಿಜೆಪಿ ಡಿಜಿಟಲ್‌ ಕಾರ್ಯಕರ್ತರು ಸಮ್ಮೇಳನದಲ್ಲಿ ಅವರು ಮಾತನಾಡಿದರು. ಕಾಂಗ್ರೆಸ್ಸಿನವರಿಗೆ ಕೆಲಸವಿಲ್ಲ, ಜನರಿಗೆ ಮೋಸ ಮಾಡುವುದೇ ದೊಡ್ಡ ಕೆಲಸವಾಗಿದೆ. ಕಾಂಗ್ರೆಸ್ಸಿನವರು ಗ್ಯಾರಂಟಿ ಕಾರ್ಡ್‌ ಕೊಡುವುದಾಗಿ ಹೇಳುತ್ತಾರೆ, ಇದು ಶುದ್ಧ ಸುಳ್ಳು ಎಂದು ಹೇಳಿದ ಅವರು, ಬಿಜೆಪಿ ಸರ್ಕಾರ ತಾಂಡಾಗಳ 1.85 ಲಕ್ಷ ಜನರಿಗೆ ಹಕ್ಕು ನೀಡಿದೆ. 

ಇದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಾಧನೆಯಾಗಿದೆ ಎಂದರು. ಕಾರ್ಯಕರ್ತರು ಸಭೆ, ಬೈಠಕ್‌ಗಳನ್ನು ಮೊಬೈಲ್‌ನಲ್ಲಿ ರಿಕಾರ್ಡ್‌ ಮಾಡಬೇಡಿ, ಇದು ದುರಭ್ಯಾಸವಾಗಿದೆ. ಸರ್ಕಾರದ ಯೋಜನೆ, ಪ್ರಗತಿ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಾಕಿ ಜನರಿಗೆ ಮಾಹಿತಿ ನೀಡಬೇಕು ಎಂದರು. ಮೇ 14ರ ವರೆಗೆ ಬಿಜೆಪಿಯ ಯಾವ ಕಾರ್ಯಕರ್ತರೂ ವಿಶ್ರಾಂತಿ ಪಡೆಯಬಾರದು. ಮೇ 14ಕ್ಕೆ ಪ್ರಮಾಣ ವಚನ ಸ್ವೀಕಾರ, ಬಿಜೆಪಿಯ ಪರಿಪೂರ್ಣ ಸರ್ಕಾರ ಬರುತ್ತದೆ ಎಂದು ಸಂತೋಷ ವಿಶ್ವಾಸ ವ್ಯಕ್ತಪಡಿಸಿದರು. 

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಮತ್ತೆ ಅಧಿಕಾರಕ್ಕೆ: ಎಂ.ಬಿ.ಪಾಟೀಲ್‌ ವಿಶ್ವಾಸ

ಇನ್ನು ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ. ಸಚಿವ ಆನಂದ ಸಿಂಗ್‌, ಹಾಲಪ್ಪ ಆಚಾರ, ಸಂಸದ ಕರಡಿ ಸಂಗಣ್ಣ. ಬಳ್ಳಾರಿ ಸಂಸದ ದೇವೇಂದ್ರಪ್ಪ ನಾಯಕ, ಶಾಸಕ ಪರಣ್ಣ ಮುನವಳ್ಳಿ, ಬಸವರಾಜ ದಢೇಸೂಗೂರು, ಎಂಎಲ್ಸಿ ಹೇಮಲತಾ ನಾಯಕ, ಮಾಜಿ ಸಚಿವ ಸಾಲೋಣಿ ನಾಗಪ್ಪ, ಶರಣಪ್ಪ ಕುಷ್ಟಗಿ ಸೇರಿದಂತೆ ಪ್ರಮುಖರು ಇದ್ದರು.

ಭಾಷಣಕ್ಕೆ ಚುನಾವಣಾಧಿಕಾರಿಗಳ ಅಡ್ಡಿ: ತಾಲೂಕಿನ ಮರಳಿ ಗ್ರಾಮದ ಹತ್ತಿವಿರುವ ಖಾಸಗಿ ಹೋಟೆಲ್‌ನಲ್ಲಿ ಬಿಜೆಪಿ ಡಿಜಿಟಲ್‌ ಕಾರ್ಯಕರ್ತರ ಸಮ್ಮೇಳನದಲ್ಲಿ ನಿಗದಿಪಡಿಸಿದ ಸಮಯಕ್ಕಿಂತ ಹೆಚ್ಚು ಹೊತ್ತು ಭಾಷಣ ಮಾಡುತ್ತಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್‌. ಸಂತೋಷ್‌ ಅವರಿಗೆ ಚುನಾವಣಾಧಿಕಾರಿಗಳು ಅಡ್ಡಿಪಡಿಸಿದ ಘಟನೆ ನಡೆಯಿತು.

ಅಭಿವೃದ್ಧಿ ಕಾರ್ಯಗಳಲ್ಲಿ ತಾರತಮ್ಯ ಮಾಡಿಲ್ಲ: ಬಾಲಚಂದ್ರ ಜಾರಕಿಹೊಳಿ

ಮಧ್ಯಾಹ್ನ 2 ಗಂಟೆಯೊಳಗೆ ಕಾರ್ಯಕ್ರಮ ಮುಕ್ತಾಯವಾಗಬೇಕಾಗಿತ್ತು. ಆದರೆ ಸಂತೋಷ ಅವರು ತಡವಾಗಿ ಸಮ್ಮೇಳನಕ್ಕೆ ಆಗಮಿಸಿ ಭಾಷಣ ಮಾಡಿದಾಗ 2 ಗಂಟೆ 15 ನಿಮಿಷವಾಗಿತ್ತು. ಚುನಾವಣಾಧಿಕಾರಿಗಳಾದ ಗ್ಯಾನನಗೌಡ, ಗುರಪ್ಪ ನಾಯಕ, ಸಿಪಿಐ ಮಂಜುನಾಥ ಅವರು ವೇದಿಕೆ ಬಳಿ ಹೋಗಿ ಭಾಷಣಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಇದನ್ನು ಗಮನಿಸಿದ ಸಂತೋಷ ತ್ವರಿತಗತಿಯಲ್ಲಿ ಕೊನೆಯ ಹಂತದ ಮಾತುಗಳು ಹೇಳಿ ವಿರಾಮ ಹೇಳಿದರು. ಆನಂತರ ಅಧಿಕಾರಿಗಳು ನಿರ್ಗಮಿಸಿದರು.

Latest Videos
Follow Us:
Download App:
  • android
  • ios