ಖರ್ಗೆ ಸೋಲಿಸಲು ಪಣತೊಟ್ಟು ಯಶಸ್ವಿಯಾದ ಚಿಂಚನಸೂರ್‌ಗೆ ಜಾಕ್ ಪಾಟ್

ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭಾ ಚುನಾವಣೆ ಸೋಲಿಸಲು ಪಣತೊಟ್ಟು ಕೊನೆಗೂ ಯಶಸ್ವಿ ಕಂಡ ಮಾಜಿ ಸಚಿವ ಬಾಬೂರಾವ್ ಚಿಂಚನಸೂರ್ ಅವರಿಗೆ ಬಿಎಸ್ ವೈ ನೇತೃತ್ವದ ಬಿಎಸ್ ವೈ ಸರ್ಕಾರ ಬಿಗ್ ಆಫರ್ ನೀಡಿದೆ. 

BJP Leader baburao chinchansur appoints as  Koli  Community Development President

ಬೆಂಗಳೂರು, [ಅ.12]: ಸೋಲಿಲ್ಲದ ಸರದಾನ ಸೋಲಿಗೆ ಶ್ರಮಿಸಿದ ಮಾಜಿ ಸಚಿವ, ಬಿಜೆಪಿ ನಾಯಕ ಬಾಬೂರಾವ್ ಚಿಂಚನಸೂರ್ ಅವರನ್ನು ಕೋಲಿ ಸಮುದಾಯ ಅಭಿವೃದ್ಧಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.

ಬಾಬೂರಾವ್ ಚಿಂಚನಸೂರ್ ಅವರನ್ನು ಕೋಲಿ ಸಮುದಾಯ ಅಭಿವೃದ್ಧಿ ಅಧ್ಯಕ್ಷರಾಗಿ ನೇಮಕಗೊಳಿಸಿ ರಾಜ್ಯ ಸರ್ಕಾರ ಇಂದು [ಶನಿವಾರ] ಆದೇಶ ಹೊರಡಿಸಿದೆ.

ಖರ್ಗೆ ವಿರುದ್ಧ ತೊಡೆ ತಟ್ಟಿ ಘರ್ಜಿಸಿದ ಚಿಂಚನಸೂರ್‌

2019 ಲೋಕಸಭಾ ಚುನಾವಣೆಯಲ್ಲಿ ಕಲಬುರಗಿ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವರ ಗೆಲುವಿಗೆ  ಚಿಂಚನಸೂರ್ ಅವರ ಕೊಡುಗೆಯೂ ಇದೆ.

ಈ ಮೊದಲು ಕಾಂಗ್ರೆಸ್ ನಲ್ಲಿದ್ದ ಬಾಬೂರಾವ್ ಚಿಂಚನಸೂರ್ ಅವರು ಮಲ್ಲಿಕಾರ್ಜುನ ಖರ್ಗೆ ಅವರ ಸರ್ವಾಡಳಿತ ಧೋರಣೆಯಿಂದ ಬೇಸತ್ತು ಬಿಜೆಪಿ ಸೇರಿದ್ದರು. ಅಲ್ಲಿಂದ ಖರ್ಗೆ ವಿರುದ್ಧ ತೊಡೆತಟ್ಟುತ್ತಲೇ ಇದ್ದಾರೆ.

ನಾನೂ ಮೋದಿ ಇದ್ದಂಗೆ, ಆದ್ರೆ ಅವರಿಗೆ ಹೆಂಡ್ತಿ ಇಲ್ಲ: ಚಿಂಚನಸೂರ್!

ಇದಕ್ಕೆ ಪೂರಕವೆಂಬಂತೆ ಇತ್ತೀಚೆಗೆ ನಡೆದಿದ್ದ ಪಾರ್ಲಿಮೆಂಟ್ ಎಲೆಕ್ಷನ್ ನಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಲೇಬೇಕೆಂದು ಪಣತೊಟ್ಟಿದ್ದರು. ಈ ಹಿನ್ನೆಲೆಯಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಭರ್ಜರಿ ಪ್ರಚಾರ ಮಾಡಿದ್ದರು. 

ಅಷ್ಟೇ ಅಲ್ಲದೇ ತಮ್ಮ ಕೋಲಿ ಸಮುದಾಯದ ಮತಗಳನ್ನು ಸೆಳೆಯುವುದರಲ್ಲಿ ಪ್ರಮುಖ ಪಾತ್ರವಹಿಸಿ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಅವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು. ಇದರಿಂದ ಬಾಬೂರಾವ್ ಚಿಂಚನಸೂರ್ ಅವರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ಈ ಸ್ಥಾನ ನೀಡಿದ್ದಾರೆ.

Latest Videos
Follow Us:
Download App:
  • android
  • ios