*    ಪಾದ​ಯಾತ್ರೆ ಪಕ್ಷಾ​ತೀ​ತ​ವಾಗಿ ಇತ್ತು*    ನನ್ನ ಮಗನಿಗೆ ಕಾಂಗ್ರೆಸ್‌ ಎಂಎಲ್ಸಿ ಟಿಕೆಟ್‌ ನೀಡಿತ್ತು*    ಬಿಜೆಪಿ ಹಾಸನದಲ್ಲಿ ನನಗೆ ನೀಡಿದ್ದ ಜವಾಬ್ದಾರಿಯನ್ನು ಈಗ ವಾಪಸ್‌ ಪಡೆದಿದೆ 

ರಾಮ​ನ​ಗ​ರ(ಜ.14): ಮಾಜಿ ಸಚಿವ, ಬಿಜೆಪಿ(BJP) ಮುಖಂಡ ಎ.ಮಂಜು(A Manju) ಅವರು ಮತ್ತೆ ಕಾಂಗ್ರೆಸ್‌(Congress) ಸೇರುವ ಸುಳಿವು ನೀಡಿದ್ದಾರೆ. ಮೇಕೆದಾಟು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದ ಅವರು, ಮೇಕೆದಾಟು ಯೋಜನೆ ವಿಚಾರವಾಗಿ ನಮ್ಮ ಪಕ್ಷದವರಿಗೆ ಪ್ರಧಾನಿ ಮೋದಿ ಅವರ ಜತೆ ಮಾತನಾಡುವ ಧೈರ್ಯ ಇಲ್ಲ. ನಮ್ಮ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದರೆ ಈ ಪಾದಯಾತ್ರೆ ನಡೆಯುತ್ತಲೇ ಇರಲಿಲ್ಲ ಎಂದಿದ್ದಾರೆ. 

ಪಾದ​ಯಾತ್ರೆ ಪಕ್ಷಾ​ತೀ​ತ​ವಾಗಿ ಇತ್ತು. ನನಗೂ ಪಾದಯಾತ್ರೆಯಲ್ಲಿ ಭಾಗವಹಿಸುವಂತೆ ಆಹ್ವಾನ ಬಂದಿತ್ತು. ಅದಕ್ಕಾಗಿ ನಾನು ಬಂದಿದ್ದೇನೆ. ನಮ್ಮ ಪಕ್ಷದ ಇನ್ನೂ ಸಾಕಷ್ಟು ಮುಖಂಡರು ಬಂದಿದ್ದಾರೆ. ಕ್ಯಾಮೆರಾ ಕಣ್ಣಿಗೆ ಅವರು ಕಾಣಿಸಿಲ್ಲ ಅಷ್ಟೇ ಎಂದರು. ಇದೇ ವೇಳೆ, ನನ್ನ ಮಗನಿಗೆ ಕಾಂಗ್ರೆಸ್‌ ಎಂಎಲ್ಸಿ ಟಿಕೆಟ್‌ ನೀಡಿತ್ತು. ನಾನು ನನ್ನ ಮಗನ ಜತೆಗೆ ಇರಲೇಬೇಕು. ರಾಜಕೀಯ ನಿಂತ ನೀರಲ್ಲ ಎಂದರು.

Mekedatu ಸಮಸ್ಯೆ ಬಗೆಹರಿಸದ ಮೋದಿ: ಬಿ.ಎಲ್‌. ಶಂಕರ್‌

ನಾನು ಮೊದಲ ಬಾರಿಗೆ ಶಾಸಕನಾಗದ್ದೇ ಬಿಜೆಪಿಯಿಂದ. ಆಗ ನರೇಂದ್ರ ಮೋದಿ ಅವರು ಇರಲಿಲ್ಲ. ಬಿಜೆಪಿ ಹಾಸನದಲ್ಲಿ ನನಗೆ ನೀಡಿದ್ದ ಜವಾಬ್ದಾರಿಯನ್ನು ಈಗ ವಾಪಸ್‌ ಪಡೆದಿದೆ. ಆದರೆ, ನಾನಿನ್ನೂ ಬಿಜೆಪಿಯಲ್ಲೇ ಇದ್ದೇನೆ ಎಂದರು.

ಪಾದಯಾತ್ರೆ ತಡೆಯದಿದ್ರೆ ದುರ್ಬಲ ಸರ್ಕಾರ ಅಂತ ಒಪ್ಪಿಕೊಳ್ಳುವೆ: ಬಿಜೆಪಿ ನಾಯಕ ಯೋಗೇಶ್ವರ್

ರಾಮನಗರ: ಇಂದು ಸರ್ಕಾರ ಮೇಕೆದಾಟು ಪಾದಯಾತ್ರೆಯನ್ನ(Mekedatu Padayatra) ತಡೆಯಲೇಬೇಕು. ತಡೆಯದಿದ್ದರೇ ನಮ್ಮದು ದುರ್ಬಲ ಸರ್ಕಾರ(Government of Karnataka) ಅಂತ ಭಾವಿಸಬೇಕಾಗುತ್ತದೆ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ(CP Yogeeshwara) ಹೇಳಿದ್ದರು.

ನಿನ್ನೆ(ಗುರುವಾರ) ನಗರದ ಹೊರವಲಯದಲ್ಲಿ ನಡೆದ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್(Covid19) ಸಾಂಕ್ರಾಮಿಕ ರೋಗ ಹರಡುವುದನ್ನು ತಪ್ಪಿಸಲು ಪಾದಯಾತ್ರೆ ನಿಲ್ಲಲೇಬೇಕಾಗಿದೆ ಎಂದು ತಿಳಿಸಿದ್ದಾರೆ. ಸಿದ್ದರಾಮಯ್ಯ(Siddaramaiah) ಸಿಎಂ ಆಗಿದ್ದ ವೇಳೆ ಒಂದು ವರ್ಷದ ಕಾಲ ಡಿ.ಕೆ.ಶಿವಕುಮಾರ್(DK Shivakumar) ಅವರನ್ನು ಮಂತ್ರಿ ಮಂಡಲಕ್ಕೆ ಸೇರಿಸಿಕೊಳ್ಳಲಿಲ್ಲ. ಭ್ರಷ್ಟರೊಬ್ಬರನ್ನು ಸೇರಿಸಿಕೊಳ್ಳಬೇಕೆ ಅಂತ ಯೋಚನೆ ಅವರಿಗಿತ್ತು. ಸಿದ್ದರಾಮಯ್ಯ ಅವರ ಬಗ್ಗೆ ಆಭಿಮಾನವಿದೆ. ಈ ಪುಂಡರೊಡನೆ ಸೇರಬಾರದು, ಪಾದಯಾತ್ರೆ ಮೊಟಕುಗೊಳಿಸಬೇಕು ಎಂದು ಸಿದ್ದರಾಮಯ್ಯ ಅವರಿಗೆ ಸಿ.ಪಿ.ಯೋಗೇಶ್ವರ ಮನವಿ ಮಾಡಿದ್ದರು. 

ನಮ್ಮ ಸರ್ಕಾರ ಪಾದಯಾತ್ರೆ ತಡೆಯುವ ವಿಚಾರದಲ್ಲಿ ವಿಫಲವಾಗಿಲ್ಲ. ತಾಳ್ಮೆಯಿಂದ ಕಾದು ನೋಡಿದೆ ಎಂದು ಹೇಳಿದ್ದರು. 

ಡಿಕೆ ಪಟಾಲಂ ಬಂಧಿಸಿ, ಸರ್ಕಾರ ಯಾತ್ರೆ ನಿಲ್ಲಿಸಲಿ

ಕಾಂಗ್ರೆಸ್(Congress) ನಾಯಕರು ಮೇಕೆದಾಟು ಪಾದಯಾತ್ರೆ ಹೆಸರಿನಲ್ಲಿ ಸರ್ಕಾರವನ್ನ ಅಭದ್ರಗೊಳಿಸುವ ಹುನ್ನಾರ ನಡೆಸುತ್ತಿದೆ. ಸರ್ಕಾರ ಕೂಡಲೇ ಡಿಕೆ ಪಟಾಲಂ ಬಂಧಿಸಿ ಒಮಿಕ್ರಾನ್(Omicron) ಯಾತ್ರೆಯನ್ನು ಹತ್ತಿಕ್ಕಬೇಕು ಎಂದು ಸಿ.ಪಿ.ಯೋಗೇಶ್ವರ್ ಒತ್ತಾಯಿಸಿದ್ದರು. 

Mekedatu Politics: ಪಾದಯಾತ್ರೆ ಹಿಂದೆ ಜನರ ಪ್ರಾಣ ಬಲಿ ಪಡೆವ ದುರುದ್ದೇಶ: ಕಟೀಲ್‌

ಕಾಂಗ್ರೆಸ್ ನಾಯಕರು ಅಮಾಯಕರನ್ನು ಕರೆಸಿ ಕೊರೋನಾ(Coronavirus) ಹರಡುವ ಕೆಲಸ ಮಾಡುತ್ತಿದ್ದಾರೆ. ಇದು ನೀರಿಗಾಗಿ ಯಾತ್ರೆಯಾಗದೆ ಒಮಿಕ್ರಾನ್ ಹರಡುವ ಯಾತ್ರೆಯಂತಾಗಿದೆ ಎಂದು ಟೀಕಿಸಿದರು. ಸರ್ಕಾರ ಮೇಕೆದಾಟು ಯೋಜನೆ(Mekedatu Project) ಅನುಷ್ಠಾನಕ್ಕೆ ಬದ್ಧವಾಗಿದ್ದು, ಕಾನೂನು ಹೋರಾಟ ಮಾಡುತ್ತಿದ್ದೇವೆ. ನ್ಯಾಯಾಲಯದ ಅನುಮತಿ ಬೇಕಿದೆ. ರಾಜಕೀಯ(Politics) ದುರುದ್ದೇಶದಿಂದ ಮಾಡಿರುವ ಹೋರಾಟ ಇದಾಗಿದೆ ಎಂದು ಕೈ ನಾಯಕರ ವಿರುದ್ಧ ಹರಿಹಾಯ್ದಿದ್ದರು. 

ಸರ್ಕಾರ ಯಾತ್ರೆಗೆ ಹೆಚ್ಚಿನ ಮಾನ್ಯತೆ ನೀಡಿರಲಿಲ್ಲ. ಆದರೀಗ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಕೂಡಲೇ ಡಿಕೆಶಿ ಪಟಾಲಂ ಬಂಧಿಸಬೇಕು. ಸಿದ್ದರಾಮಯ್ಯ ಮೇಲೆ ಅಭಿಮಾನ ಇತ್ತು. ಡಿಕೆ ಜತೆ ಸಘರೌ ಅದೂ ಕಳೆದುಕೊಂಡಿದ್ದಾರೆ ಎಂದು ಹರಿಹಾಯ್ದರು.

ಈ ಮೊದಲು ಸಿದ್ದರಾಮಯ್ಯ ತಮ್ಮ ಸರ್ಕಾರದಲ್ಲಿ ಡಿಕೆಶಿಯನ್ನು ಕ್ಯಾಬಿನೆಟ್‌ನಲ್ಲಿ ತೆಗೆದುಕೊಂಡಿರಲಿಲ್ಲ. ರಾಜಕೀಯ ಪಿತೂರಿ ಮಾಡಿ ಕ್ಯಾಬಿನೆಟ್ ಸೇರಿದರು. ಈಗ ಸಿದ್ದರಾಮಯ್ಯ ಅವರಿಗೂ ಅರಿವಾಗಿ ಅರ್ಧದಾರಿಗೆ ಬಂದು ವಾಪಸ್ಸಾಗುತ್ತಿದ್ದಾರೆ. ಸಿದ್ದರಾಮಯ್ಯರವರು ಪುಂಡರ ಜತೆ ಸೇರಬೇಡಿ ಎಂದು ಹೇಳಿದ್ದರು.