ಬಿಹಾರದಲ್ಲಿ ಬಿಜೆಪಿ ಹಾಗೂ ಜೆಡಿಯು ನೇತೃತ್ವದ ಸರ್ಕಾರ ಪತನಗೊಂಡ ಬೆನ್ನಲ್ಲಿಯೇ, ಸೋಷಿಯಲ್‌ ಮೀಡಿಯಾದಲ್ಲಿ ನಿತೀಶ್ ಕುಮಾರ್‌ ಕುರಿತಾಗಿಸ ಸಾಕಷ್ಟು ಮೀಮ್ಸ್‌ಗಳು ಹರಿದಾಡಿವೆ. ಬಿಹಾರದ ರಾಜಕೀಯ ಹೈಡ್ರಾಮಾವನ್ನು ಜನರು ಸೋಷಿಯಲ್‌ ಮೀಡಿಯಾದಲ್ಲಿ ಮೀಮ್ಸ್‌ ಮಾಡುವ ಮೂಲಕ ಎಂಜಾಯ್‌ ಮಾಡಿದ್ದಾರೆ. 

ಬೆಂಗಳೂರು (ಆ.9): ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಮುರಿದು ಬಿದ್ದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಮೀಮ್‌ಗಳ ಮಹಾಪೂರವೇ ಹರಿದು ಬಂದಿದೆ. ಬಿಹಾರದ ರಾಜಕೀಯ ಡ್ರಾಮಾವನ್ನು ಜನರು ಮೀಮ್ಸ್ ಮಾಡುವ ಮೂಲಕ ಆನಂದಿಸುತ್ತಿದ್ದಾರೆ. ಪಂಚಾಯತ್ ವೆಬ್ ಸಿರೀಸ್‌ನ ಡೈಲಾಗ್‌ಗಳೊಂದಿಗೆ ಬಿಹಾರದ ರಾಜಕೀಯವನ್ನು ವರ್ಣನೆ ಮಾಡಿದ್ದಾರೆ. ಇನ್ನೂ ಕೆಲವರು, ಶೀಘ್ರದಲ್ಲಿಯೇ ಬಿಹಾರದ ರಾಜಧಾನಿಯಲ್ಲಿ ಸಿಬಿಐ, ಎಐಎ ಮತ್ತು ಇಡಿಯ ಅಧಿಕಾರಿಗಳು ಇಳಿಯಲಿದ್ದಾರೆ ಎಂದು ಕಾಮೆಂಟ್‌ ಮಾಡಿದ್ದಾರೆ. 2020ರ ಬಿಹಾರ ವಿಧಾನಸಭೆ ಚುನಾವಣೆಯ ವೇಳೆ ಜೆಡಿಯು, ಪಾಟ್ನಾದಲ್ಲಿದ್ದ ತನ್ನ ಕೇಂದ್ರ ಕಚೇರಿಯ ಹೊರಗೆ ದೊಡ್ಡದಾದ ಪೋಸ್ಟ್‌ವೊಂದನ್ನು ಹಾಕಿತ್ತು. ಅದರಲ್ಲಿ, 'ನಿತೀಶ್‌ ಸಬಕಾ ಹೇ' ಎಂದು ದಪ್ಪ ಅಕ್ಷರದಲ್ಲಿ ಬರೆಯಲಾಗಿತ್ತು. ಅದರರ್ಥ, 'ನಿಮ್ಮೆಲ್ಲರ ನಿತೀಶ್‌' ಎನ್ನುವುದಾಗಿದೆ. ಈ ಪೋಸ್ಟರ್‌ಅನ್ನು ಶೇರ್‌ ಮಾಡಿದ ವ್ಯಕ್ತಿ, ಬಹುಶಃ ಬಿಜೆಪಿಗೆ ಈ ಸಾಲಿನ ಅರ್ಥ ಈಗ ಗೊತ್ತಾಗಿರಬಹುದು ಎಂದು ಬರೆದಿದ್ದಾರೆ. ಈಗ ಜೆಡಿಯು ಮತ್ತೆ ಬಿಜೆಪಿಯ ಜೊತೆಗಿನ ಮೈತ್ರಿ ಕಡಿದುಕೊಳ್ಳುತ್ತಿದೆ. ನಿತೀಶ್‌ ಕುಮಾರ್‌ ತಮ್ಮ ರಾಜಕೀಯ ಜೀವನದಲ್ಲಿ ಅಧಿಕಾರಕ್ಕಾಗಿ ಪಕ್ಷಗಳನ್ನು ಬದಲಾಯಿಸಿದ್ದು ಇದು ಐದನೇ ಬಾರಿ. ಆ ಕಾರಣದಿಂದಾಗಿ ಬಿಹಾರದ ರಾಜಕೀಯದಲ್ಲಿ ಅವರನ್ನು 'ಪಲ್ಟು ರಾಮ್‌' ಎಂದು ಕರೆಯುತ್ತಾರೆ. ನಿರ್ಧಾರಗಳನ್ನು ಕ್ಷಣ ಕ್ಷಣಕ್ಕೆ ಬದಲಾಯಿಸುವ ವ್ಯಕ್ತಿಗಳಲ್ಲಿ ಬಿಹಾರದಲ್ಲಿ ಸಾಮಾನ್ಯವಾಗಿ ಪಲ್ಟು ರಾಮ್‌ ಎಂದು ಹೇಳಲಾಗುತ್ತದೆ.

ಬಿಹಾರದ ರಾಜಕೀಯ ಹೈಡ್ರಾಮಾದ ಕುರಿತಾಗಿ ಆಡಿರುವ ಮೀಮ್ಸ್‌ಗಳು..

ನಿತೀಶ್‌ ಹಾವಿನ ರೀತಿ: 2017ರ ಆಗಸ್ಟ್‌ 3 ರಂದು ಆರ್‌ಜೆಡಿ ಸುಪ್ರೀಂ ಲಾಲೂ ಪ್ರಸಾದ್‌ ಯಾದವ್‌, ನಿತೀಶ್‌ ಕುಮಾರ್‌ ಕುರಿತಾಗಿ ಮಾಡಿದ್ದ ಟ್ವೀಟ್‌ ಕೂಡಸ ಟ್ರೆಂಡ್‌ನಲ್ಲಿದೆ. "ನಿತೀಶ್ ಹಾವಿನ ಥರ. ಹಾವುಗಳು ಹೇಗೆ ಪೊರೆಯನ್ನು ಕಳಚುವ ರೀತಿಯಲ್ಲಿಯೇ ನಿತೀಶ್‌ ಕುಮಾರ್‌ ಕೂಡ ಪೊರೆ ಕಳಚುತ್ತಾರೆ. ಹಾಗು ಪ್ರತಿ ಎರಡು ವರ್ಷಕ್ಕೊಮ್ಮೆ ಹೊಸ ಚರ್ಮ ಧರಿಸುತ್ತಾರೆ. ಇದರಲ್ಲಿ ಏನಾದರೂ ಅನುಮಾನವಿದೆಯೇ?' ಎಂದು ಟ್ವೀಟ್‌ನಲ್ಲಿ ಬರೆದಿದ್ದರು.

- ಬಿಹಾರದ ಕಡೆಗೆ ಐಟಿ, ಇಡಿ, ಸಿಬಿಐ ಈ ರೀತಿ ಹೋಗ್ತಿದ್ದಾರೆಂತೆ..

Scroll to load tweet…

- ಟ್ವಿಟರ್‌ನಲ್ಲಿ ಮತ್ತೊಬ್ಬ ವ್ಯಕ್ತಿ ಬರೆದಿದ್ದು 'ರಾವಣನಿಗೆ ತನ್ನ ದೇಹಪೂರ್ತಿ ದುಷ್ಟತನದಿಂದಲೇ ಕೂಡಿತ್ತು. ಆದರೆ ಅವನು ತನ್ನ ಸಾಮ್ರಾಜ್ಯವನ್ನು ಉಳಿಸಲು ವಿರೋಧಿ ಪಾಳಯದೊಂದಿಗೆ ಎಂದಿಗೂ ಒಪ್ಪಂದ ಮಾಡಿಕೊಂಡಿಲ್ಲ!' ಎಂದು ನಿತೀಶ್‌ ಕುಮಾರ್‌ರನ್ನು ಕಾಲೆಳೆದಿದ್ದಾರೆ.

- ಪ್ರಸ್ತುತ ಪರಿಸ್ಥಿತಿಯಲ್ಲಿ, ಪ್ರಧಾನಮಂತ್ರಿ ಕಾರ್ಯಾಲಯ ಇಡಿಯನ್ನು ಈ ರೀತಿ ಕೇಳುತ್ತಿರಬಹುದು ಎಂದು ಬರೆದಿದ್ದಾರೆ 'ಇದು ಏನಾಗುತ್ತಿದೆ? ಆಗ ಇಡಿ ಅಧಿಕಾರಿ, "ಇದನ್ನು ನಾವು ನೋಡಿಕೊಳ್ಳುತ್ತೇವೆ ನೀವು ಚಿಂತೆ ಮಾಡ್ಬೇಡಿ' ಎಂದು ಹೇಳುತ್ತಿರುವಂತೆ ಬರೆಯಲಾಗಿದೆ.

- ಪ್ರಸ್ತುತ ಬಿಹಾರ ಹಾಗೂ ನಿತೀಶ್‌ ಕುಮಾರ್‌ ಇರೋದು ಹೀಗೆ.. ಯುಪಿಎ ಮತ್ತು ಎನ್‌ಡಿಎ ಅರ್ಥ ಮಾಡ್ಕೋಬೇಕು ಎಂದಿದ್ದಾರೆ ಒಬ್ಬರು

Scroll to load tweet…

- ಇನ್ನು ನಿತೀಶ್‌ ಕುಮಾರ್‌ಅನ್ನು ಮಾಸ್ಟರ್‌ಮೈಂಡ್‌ ಎಂದು ಹೇಳಿರುವ ಬಬ್ಬ ವ್ಯಕ್ತಿ, ಬಹುಶಃ ನಿತೀಶ್‌ ಕುಮಾರ್‌ ಈಗ ಬಿಜೆಪಿಯವರಿಗೆ, "ನೀವು ಆಡುತ್ತಿರುವ ಈ ಆಟದಲ್ಲಿ ನಾವು ಪಿಎಚ್‌ಡಿ ಮಾಡಿದ್ದೇವೆ' ಎಂದು ತಿಳಿಸುತ್ತಿರಬಹುದು ಎಂದಿದ್ದಾರೆ.

- 'ಬಿಜೆಪಿ ಜೊತೆ ಹೋಗ್ಲಾ, ಅಥವಾ ಆರ್‌ಜೆಡಿ ಜೊತೆ ಸೇರಲಾ, ಅಥವಾ ಸೋನಿಯಾ ಗಾಂಧಿ ಅವರ ಹತ್ರ ಮಾತಾಡ್ಲಾ, ಯಾರು ಬೇಕಾದ್ರೂ ಸರ್ಕಾರದಲ್ಲಿ ಇರ್ಲಿ, ನಾನು ಮಾತ್ರ ಸಿಎಂ ಅಗಿರ್ಬೇಕು' ನಿತೀಶ್‌ ಕುಮಾರ್‌ ಪ್ಲ್ಯಾನ್‌ ಬಹಳ ಸಿಂಪಲ್‌ ಆಗಿದೆ ಎಂದು ಇನ್ನೊಬ್ಬರು ಬರೆದಿದ್ದಾರೆ.

- ಬಹುಶಃ ಬಿಹಾರದ ಸಾಮಾನ್ಯ ಜನರು ಈ ರೀತಿ ಯೋಚನೆ ಮಾಡ್ತಿರಬಹುದಂತೆ, "ಎಂಥಾ ದಿನಗಳು ಬಂದು ಬಿಡ್ತು. ಎನ್‌ಡಿಎ ಸರ್ಕಾರ ಇದೆ ಅಂದ್ಕೊಂಡು ಮಲಗಿರ್ತೀವಿ. ಎದ್ದಾಗ ಯುಪಿಎ ಸರ್ಕಾರ ಆಗಿರುತ್ತೆ' ಎಂದು ಬರೆದಿದ್ದಾರೆ.

ಇದನ್ನೂ ಓದಿ: ಬಿಜೆಪಿ ಜೊತೆಗಿನ ಮೈತ್ರಿ ಮುರಿದ ಜೆಡಿಯು, ಬಿಹಾರ ಸಿಎಂ ನಿತೀಶ್ ಕುಮಾರ್ ರಾಜೀನಾಮೆ!

ಇದನ್ನೂ ಓದಿ: ಬಿಜೆಪಿಗೆ ಕೈಕೊಟ್ಟ ನಿತೀಶ್‌, ಆಗಸ್ಟ್ 11ಕ್ಕೆ ಬಿಹಾರದಲ್ಲಿ ಜೆಡಿಯು-ಆರ್‌ಜೆಡಿ ಸರ್ಕಾರ?