Asianet Suvarna News Asianet Suvarna News

ಬಿಜೆಪಿಯದ್ದು ಪಿಕ್‌ ಪಾಕೆಟ್‌ ಸರ್ಕಾರ: ಮೊಹಮ್ಮದ ನಲಪಾಡ್‌

ಪ್ರತಿಯೊಬ್ಬರು ಬಿಜೆಪಿ ವಿರುದ್ಧ ಮಾತನಾಡಲು ಭಯಪಡಬೇಕು ಎಂಬುದು ನಿಮ್ಮ ಉದ್ದೇಶವಾಗಿದೆ. ಯೂಥ್‌ ಕಾಂಗ್ರೆಸ ಕಾರ್ಯಕರ್ತರು ಹೆದರಲ್ಲ. ಕಾಂಗ್ರೆಸ್‌ ರಕ್ತ ಇರುವವರೆಗೂ ಬಿಜೆಪಿ ವಿರುದ್ಧ ಮಾತನಾಡೋದು ನಮ್ಮ ಧರ್ಮ. ಬಾಯಿ, ಕಣ್ಣು, ಮನಸು ಸರ್ಕಾರಕ್ಕಿಲ್ಲ ಎಂದು ದೂರಿದ ನಲಪಾಡ್‌ 

BJP is a Pick Pocket Government Says Mohammed Nalapad grg
Author
First Published Dec 27, 2022, 1:15 PM IST

ಬೆಳಗಾವಿ(ಡಿ.27): ಬಿಜೆಪಿ ಸರ್ಕಾರ ನಮ್ಮ ಹೋರಾಟ ಹತ್ತಿಕ್ಕುವ ಮೂಲಕ ಭಯದ ವಾತಾವರಣ ಸೃಷ್ಟಿಸುತ್ತಿದೆ. ಆದರೆ, ಯುವ ಕಾಂಗ್ರೆಸ್‌ ಕಾರ್ಯಕರ್ತರು ಹೆದರುವುದಿಲ್ಲ. ಬಿಜೆಪಿ ಸರ್ಕಾರ ಪಿಕ್‌ ಪಾಕೆಟ್‌ ಹೊಡೆಯುವಂತಹ ಸರ್ಕಾರ ಎಂದು ಯುವ ಕಾಂಗ್ರೆಸ್‌ ರಾಜ್ಯಾಧ್ಯಕ್ಷ ಮೊಹಮ್ಮದ ನಲಪಾಡ್‌ ಆರೋಪಿಸಿದರು.

ಕಾಂಗ್ರೆಸ್‌ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿಯೊಬ್ಬರು ಬಿಜೆಪಿ ವಿರುದ್ಧ ಮಾತನಾಡಲು ಭಯಪಡಬೇಕು ಎಂಬುದು ನಿಮ್ಮ ಉದ್ದೇಶವಾಗಿದೆ. ಯೂಥ್‌ ಕಾಂಗ್ರೆಸ ಕಾರ್ಯಕರ್ತರು ಹೆದರಲ್ಲ. ಕಾಂಗ್ರೆಸ್‌ ರಕ್ತ ಇರುವವರೆಗೂ ಬಿಜೆಪಿ ವಿರುದ್ಧ ಮಾತನಾಡೋದು ನಮ್ಮ ಧರ್ಮ. ಬಾಯಿ, ಕಣ್ಣು, ಮನಸು ಸರ್ಕಾರಕ್ಕಿಲ್ಲ ಎಂದು ದೂರಿದರು.

ಬೆಳಗಾವಿ: ಎಸ್ಸೆಸ್ಸೆಂ ಬಂಧನಕ್ಕಾಗಿ ಸುವರ್ಣಸೌಧ ಮೆಟ್ಟಿಲು ಮೇಲೆ ರೇಣು ಧರಣಿ

ರಾಜ್ಯ, ದೇಶದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಯುವಕರ ವಿರೋಧಿ ಅಲೆ ಸೃಷ್ಟಿಯಾಗಿದೆ. ನರೇಂದ್ರ ಮೋದಿಯವರು ಪ್ರಧಾನಿ ಹುದ್ದೆಗೇರುವ ಮುನ್ನ ಪ್ರತಿವರ್ಷ 2 ಕೋಟಿ ಉದ್ಯೋಗ ಸೃಷ್ಟಿಮಾಡುವುದಾಗಿ ಭರವಸೆ ನೀಡಿದ್ದರು. ಎಂಟು ವರ್ಷಗಳಲ್ಲಿ 16 ಕೋಟಿ ಉದ್ಯೋಗ ಸೃಷ್ಟಿಆಗಬೇಕಿತ್ತು. ಆದರೆ ನಾವು ಜಿಲ್ಲಾವಾರು ಪ್ರವಾಸ ಮಾಡಿದಾಗ ಯುವ ಸಮೂಹದ ರೋದನೆ ನೋಡುತ್ತಿದ್ದೇವೆ. ಉದ್ಯೋಗ ಇಲ್ಲದೇ ಯುವ ಸಮೂಹ ಸರ್ಕಾರದ ವಿರುದ್ಧ ಸಿಡಿದೆದ್ದಿದ್ದಾರೆ ಎಂದರು.

40 ಪರ್ಸೆಂಟ್‌ ಕಮೀಷನ್‌ ಬಗ್ಗೆ ಕೆಂಪಯ್ಯ ಅವರು ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ. ಇಡೀ ರಾಜ್ಯಕ್ಕೆ ಇದು 40 ಪರ್ಸೆಂಟ್‌ ಸರ್ಕಾರ ಎಂದು ಗೊತ್ತಾಗಿದ್ದಕ್ಕೆ ಕೆಂಪಯ್ಯರನ್ನು ಬಂಧಿಸಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಿದ ಸಾಮಾನ್ಯ ಕನ್ನಡಿಗನ ಮೇಲೆ ಈ ಸರ್ಕಾರ ಹಲ್ಲೆ ಮಾಡಿದೆ. ಬಿಜೆಪಿ ಸರ್ಕಾರದ ವಿರುದ್ಧ ಮಾತನಾಡಿದರೆ ಇಡಿ, ಸಿಬಿಐಗಳಿಂದ ದಾಳಿ ನಡೆಯುತ್ತಿವೆ. ನಮ್ಮ ಹಿಂದೆ ಡಿಕೆಶಿ, ಅವರ ಹಿಂದೆ ಸಿದ್ದರಾಮಯ್ಯ, ರಾಹುಲ್‌ ಗಾಂಧಿ ಖರ್ಗೆ ಇದ್ದಾರೆ. ಬೆಲೆ ಏರಿಕೆಯಿಂದ ದೇಶದ ಪ್ರತಿಯೊಬ್ಬರು ಕಷ್ಟ ಪಡುತ್ತಿದ್ದಾರೆ. ಚಿಲುಮೆ ಸಂಸ್ಥೆಯಿಂದ ಪ್ರತಿ ಕ್ಷೇತ್ರದಲ್ಲಿ 25 ಸಾವಿರ ಮತಗಳು ಡಿಲೀಟ್‌ ಮಾಡಿದ್ದಾರೆ ಎಂದು ಆರೋಪಿಸಿದರು.

Follow Us:
Download App:
  • android
  • ios