ಬಿಜೆಪಿಗೆ ರೈಡ್ ಮಾಡಿಸುವ ಚಾಳಿ ಇದೆ: ಸಚಿವ ಮಧು ಬಂಗಾರಪ್ಪ

ರಾಜ್ಯದಲ್ಲಿ ಮಾಜಿ ಸಚಿವ ನಾಗೇಂದ್ರ ಸೇರಿ ಅನೇಕರ ಮನೆ ಮೇಲೆ ಇಡಿ ದಾಳಿ ಆಗಿದೆ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಬಿಜೆಪಿ ಸರ್ಕಾರದ ಸ್ವಭಾವ ರೈಡ್ ಮಾಡಿಸುವುದಾಗಿದೆ. ಈಗ ಅದನ್ನೇ ಕಂಟಿನ್ಯೂ ಮಾಡಿರಬಹುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. 

BJP has the ability to ride says Minister Madhu Bangarappa gvd

ಕುಕನೂರು (ಜು.11): ರಾಜ್ಯದಲ್ಲಿ ಮಾಜಿ ಸಚಿವ ನಾಗೇಂದ್ರ ಸೇರಿ ಅನೇಕರ ಮನೆ ಮೇಲೆ ಇಡಿ ದಾಳಿ ಆಗಿದೆ. ಇದರ ಬಗ್ಗೆ ನನಗೆ ಮಾಹಿತಿ ಇಲ್ಲ. ಆದರೆ ಬಿಜೆಪಿ ಸರ್ಕಾರದ ಸ್ವಭಾವ ರೈಡ್ ಮಾಡಿಸುವುದಾಗಿದೆ. ಈಗ ಅದನ್ನೇ ಕಂಟಿನ್ಯೂ ಮಾಡಿರಬಹುದು ಎಂದು ಸಚಿವ ಮಧು ಬಂಗಾರಪ್ಪ ಹೇಳಿದರು. ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಗೇಂದ್ರ ಈಗಾಗಲೇ ರಾಜೀನಾಮೆ ನೀಡಿದ್ದಾರೆ. ಆ ಸ್ಥಾನಕ್ಕೆ ಗೌರವ ನೀಡಿದ್ದಾರೆ. ಕಾನೂನು ತನ್ನ ಕ್ರಮ ಕೈಗೊಳ್ಳುತ್ತದೆ ಎಂದರು.

7ನೇ ವೇತನ ಜಾರಿಗಾಗಿ ಸಚಿವ ಮಧುಗೆ ಮನವಿ: ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಶಿರಾಳಕೊಪ್ಪದಲ್ಲಿ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಘಟಕ, ವಿಜಯಪುರ ಜಿಲ್ಲಾ ಘಟಕದಿಂದ ಭಾನುವಾರ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಗೆ ಗ್ರಾಮೀಣ ಭಾಗದ ಶಿಕ್ಷಕರಿಗೆ ಗ್ರಾಮೀಣ ಭತ್ಯೆ ಹಾಗೂ ಏಳನೇ ವೇತನ ಶೀಘ್ರ ಜಾರಿಗೆ ತರುವಂತೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. 

ಮುಡಾ, ವಾಲ್ಮೀಕಿ ನಿಗಮ ಹಗರಣವನ್ನು ಸಿಬಿಐ ತನಿಖೆ ನೀಡಿದರೆ ಸತ್ಯಾಂಶ ಹೊರಬರಲಿದೆ: ಸಂಸದ ಯದುವೀರ್ ಒಡೆಯರ್

ಈ ಸಂದರ್ಭದಲ್ಲಿ ಕರ್ನಾಟಕ ಸರ್ಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಶರಣಪ್ಪಗೌಡ ಆರ್‌.ಕೆ., ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಲೇಶ ನವಲೆ, ಸಂಘದ ರಾಜ್ಯ ಕಾರ್ಯಾಧ್ಯಕ್ಷ ಸಿದ್ದಣ್ಣ ಉಕ್ಕಲಿ, ರಾಜ್ಯ ಸಂಚಾಲಕ ಲಕ್ಕಮ್ಮನವರ, ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀನಾಥ ದೊಡ್ಡಮನಿ, ಜಿಲ್ಲಾ ಸಂಚಾಲಕ ವಸಂತರಾವ ಪವಾರ, ಬ.ಬಾಗೇವಾಡಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸೊಸೈಟಿ ಅಧ್ಯಕ್ಷ ಹಾಗೂ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಆರ್‌.ಡಿ.ಪವಾರ ಇತರರು ಇದ್ದರು ಎಂದು ಸಂಘದ ರಾಜ್ಯ ಕಾರ್ಯಧ್ಯಕ್ಷ ಸಿದ್ದಣ್ಣ ಉಕ್ಕಲಿ ತಿಳಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾದರಿ: ಗಡಿ ಜಿಲ್ಲೆ ಬೀದರ್‌ನಲ್ಲಿ ನಾಡೋಜ ಬಸವಲಿಂಗ ಪಟ್ಟದ್ದೇವರು ಶೈಕ್ಷಣಿಕ ಕ್ರಾಂತಿ ಮೂಲಕ ವಿಶಿಷ್ಟ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು. ಬೆಂಗಳೂರಿನಲ್ಲಿ ಭಾಲ್ಕಿ ಹಿರೇಮಠ ಸಂಸ್ಥಾನದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರಿಂದ ಸನ್ಮಾನ ಸ್ವೀಕರಿಸಿ, ಆಶೀರ್ವಾದ ಪಡೆದು ಮಾತನಾಡಿದ ಅವರು, ಗಡಿ ಭಾಗದ ಗ್ರಾಮೀಣ ಪ್ರದೇಶದಲ್ಲಿ ಕಳೆದ 3-4 ದಶಕಗಳಿಂದ ಪಟ್ಟದ್ದೇವರು ಜಾತಿ ಭೇದ ಎನ್ನದೆ ಬಡವರು, ನಿರ್ಗತಿಕರ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ, ಸಂಸ್ಕಾರ ಕಲ್ಪಿಸಿ ದೇಶದ ಉತ್ತಮ ನಾಗರಿಕರನ್ನಾಗಿ ರೂಪಿಸುವ ಕೆಲಸ ಮಾಡುತ್ತಿದ್ದಾರೆ. 

Dharwad: ನಕಲಿ ವೈದ್ಯನ ವಿರುದ್ಧ ಎಫ್‌ಐಆರ್ ದಾಖಲು: ಆಸ್ಪತ್ರೆ ಸೀಜ್ ಮಾಡಿದ ಡಿಎಚ್ಓ ತಂಡ

ಅಲ್ಲಿ ಕಲಿತ ಮಕ್ಕಳಿಂದ ಪ್ರತಿಭೆ ಅನಾವರಣಗೊಳ್ಳುತ್ತಿದೆ. ಡಾಕ್ಟರ್, ಎಂಜಿನಿಯರ್, ಸಂಶೋಧಕರಾಗಿ ಹೊರಹೊಮ್ಮುತ್ತಿರುವುದು ಸಂತಸ ತರಿಸಿದೆ ಎಂದರು. ಪೂಜ್ಯರ ವಿಶಿಷ್ಟ ಸೇವೆ ಗಮನಿಸಿ ಬಂಗಾರಪ್ಪ ಸೇವಾ ಪ್ರತಿಷ್ಠಾನದಿಂದ ಬಂಗಾರ ಸೇವಾ ಪ್ರಶಸ್ತಿ ನೀಡಿ ಗೌರವಿಸಿದ್ದೇವೆ. ಗಡಿಯಲ್ಲಿನ ಪಟ್ಟದ್ದೇವರ ಶ್ರೀಮಠ, ಶಿಕ್ಷಣ ಸಂಸ್ಥೆಗೆ ಭೇಟಿ ನೀಡಲು ಉತ್ಸುಕನಾಗಿದ್ದು, ಶೀಘ್ರ ದಿನಾಂಕ ನಿಗದಿಪಡಿಸಿ ಪೂಜ್ಯರ ಆಶೀರ್ವಾದ ಪಡೆಯುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ ಕೋಸಂಬೆ ಜತೆಗಿದ್ದರು.

Latest Videos
Follow Us:
Download App:
  • android
  • ios