ಹೊಸ ಪಕ್ಷಗಳಿಂದ ಬಿಜೆಪಿಗೆ ನಷ್ಟಇಲ್ಲ: ನಳಿನ್‌ ಕುಮಾರ್‌

ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ, ದೇಶದ ನಂ.1 ಪಕ್ಷ, ಹತ್ತಾರು ಪಕ್ಷಗಳು ಹಿಂದೆಯೂ ಹುಟ್ಟಿವೆ, ಮುಂದೆಯೂ ಹುಟ್ಟುತ್ತವೆ. ಅವುಗಳಿಂದ ಬಿಜೆಪಿಗೆ ಯಾವುದೇ ನಷ್ಟಇಲ್ಲ, ನಾವು ಕಾಂಗ್ರೆಸ್‌ನಂತಹ ಪಾರ್ಟಿಯನ್ನೇ ಎದುರಿಸಿ ಬಂದವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು.

BJP has no loss from new partie says Nalin Kumar rav

ಉಡುಪಿ (ಡಿ.26) : ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ, ದೇಶದ ನಂ.1 ಪಕ್ಷ, ಹತ್ತಾರು ಪಕ್ಷಗಳು ಹಿಂದೆಯೂ ಹುಟ್ಟಿವೆ, ಮುಂದೆಯೂ ಹುಟ್ಟುತ್ತವೆ. ಅವುಗಳಿಂದ ಬಿಜೆಪಿಗೆ ಯಾವುದೇ ನಷ್ಟಇಲ್ಲ, ನಾವು ಕಾಂಗ್ರೆಸ್‌ನಂತಹ ಪಾರ್ಟಿಯನ್ನೇ ಎದುರಿಸಿ ಬಂದವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಹೇಳಿದರು. ಮಾಜಿ ಸಚಿವ ಜನಾರ್ದನ ರೆಡ್ಡಿ ಅವರು ಹೊಸ ಪಕ್ಷದ ಘೋಷಣೆಗೆ ನಳಿನ್‌ ಕುಮಾರ್‌ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದರು.

ನಾವು ಜನಾರ್ದನ ರೆಡ್ಡಿ ಅವರ ಜೊತೆ ಮಾತುಕತೆ ಮಾಡುತ್ತೇವೆ, ಶ್ರೀರಾಮುಲು ಜೊತೆ ಈ ಬಗ್ಗೆ ಈಗಾಗಲೇ ಮಾತನಾಡಿದ್ದೇನೆ. ಅವರು ಜನಾರ್ದನ ರೆಡ್ಡಿ ಜೊತೆ ಮಾತನಾಡುವುದಾಗಿ ಹೇಳಿದ್ದಾರೆ. ನಂತರ ನಮ್ಮ ಎಲ್ಲ ಹಿರಿಯರು ಮಾತುಕತೆ ಮಾಡಿ, ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ ಎಂದರು.

Uttara Kannada News: ಈಗಿನ ಕಾಂಗ್ರೆಸ್‌ ಪಕ್ಷವೇ ನಕಲಿ: ನಳಿನ್ ಕುಮಾರ ಕಟೀಲ್

ಸಿದ್ರಾಮಯ್ಯರ ತಿರುಕನ ಕನಸು

ತಿರುಕನೋರ್ವ ಊರ ಮುಂದೆ ಕನಸು ಕಾಣುತ್ತಿದ್ದನು ಎಂಬ ಪದ್ಯವನ್ನು ನಾವು ಶಾಲೆಗೆ ಹೋಗುವಾಗ ಕೇಳಿದ್ದೇವೆ, ಆ ಹಾಡಿನಂತೆ ಸಿದ್ದರಾಮಯ್ಯ ಪರಿಸ್ಥಿತಿ ಆಗುತ್ತದೆ. ಸಿದ್ದರಾಮಯ್ಯ ಅವರ ಅಪ್ಪನಾಣೆಗೂ ಮುಖ್ಯಮಂತ್ರಿ ಆಗುವುದಿಲ್ಲ ಎಂದು ವ್ಯಂಗ್ಯವಾಡಿದರು.

 ಕಾಂಗ್ರೆಸಿನ ಕೊಲೆ ರಾಜಕೀಯ

ಮಂಗಳೂರಿನಲ್ಲಿ ಶನಿವಾರ ರಾತ್ರಿ ನಡೆದಿರುವ ಜಲೀಲ್‌ ಎಂಬವರ ಕೊಲೆ ಪ್ರಕರಣವನ್ನು ಕಾಂಗ್ರೆಸ್‌ ರಾಜಕೀಯ ಲಾಭ ಪಡೆಯಲು ಹೊರಟಿರುವುದು ದುರದೃಷ್ಟಕರ. ಈ ಕೊಲೆ ಪ್ರಕರಣದ ಬಗ್ಗೆ ಕಟ್ಟುನಿಟ್ಟಿನ ಕ್ರಮ ನಮ್ಮ ಸರ್ಕಾರ ಕೈಗೊಳ್ಳುತ್ತದೆ. ಪೊಲೀಸ್‌ ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಮುರುಡೇಶ್ವರದಲ್ಲಿ ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ, ಕಾಂಗ್ರೆಸ್-ಜೆಡಿಎಸ್ ವಿರುದ್ಧ ಕಟೀಲ್ ವಾಗ್ದಾಳಿ

Latest Videos
Follow Us:
Download App:
  • android
  • ios