ಲಿಂಗಾಯತರಿಗೆ ಬಿಜೆಪಿ ಎಂದಿಗೂ ಮೋಸ ಮಾಡಿಲ್ಲ: ಯತ್ನಾಳ್

ಬಿಜೆಪಿ ಲಿಂಗಾಯತರ ಪರವಾಗಿದೆ ಹೊರತು ಲಿಂಗಾಯತರಿಗೆ ಎಂದಿಗೂ ಮೋಸ ಮಾಡಿಲ್ಲ. ಸೋತ ಲಿಂಗಾಯತ ಅಭ್ಯರ್ಥಿಗಳಿಗೆ ದೊಡ್ಡ ಸ್ಥಾನಮಾನ ನೀಡಿದೆ. ಅವರು ಕಾಂಗ್ರೆಸ್‌ಗೆ ಹೋದರೆ ಯಾವುದೇ ಪ್ರಭಾವ ನಮ್ಮ ಪಕ್ಷಕ್ಕೆ ಬೀರುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ ನಡೆಸಿದರು.

BJP has never cheated Lingayat community says basanagowda patil yatnal at belgum rav

ಬೆಳಗಾವಿ (ಏ.28) : ಬಿಜೆಪಿ ಲಿಂಗಾಯತರ ಪರವಾಗಿದೆ ಹೊರತು ಲಿಂಗಾಯತರಿಗೆ ಎಂದಿಗೂ ಮೋಸ ಮಾಡಿಲ್ಲ. ಸೋತ ಲಿಂಗಾಯತ ಅಭ್ಯರ್ಥಿಗಳಿಗೆ ದೊಡ್ಡ ಸ್ಥಾನಮಾನ ನೀಡಿದೆ. ಅವರು ಕಾಂಗ್ರೆಸ್‌ಗೆ ಹೋದರೆ ಯಾವುದೇ ಪ್ರಭಾವ ನಮ್ಮ ಪಕ್ಷಕ್ಕೆ ಬೀರುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ತೀವ್ರ ವಾಗ್ದಾಳಿ ನಡೆಸಿದರು.

ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ(Karnataka BJP)ಯಿಂದ ಜಗದೀಶ ಶೆಟ್ಟರ(Jagadish shettar) ಅವರಿಗೆ ಅನ್ಯಾಯವಾಗಿದ್ದಾದರೂ ಏನು? ಅಲ್ಲದೆ ಲಕ್ಷ್ಮಣ ಸವದಿ(Laxman savadi)ಗೂ ಅನ್ಯಾಯ ಮಾಡಿಲ್ಲ. ಮಹೇಶ ಕುಮಟಳ್ಳಿ ಅವರಿಗೆ ಅನ್ಯಾಯವಾಗಿದೆ. ಕಾರಣ ಕಾಂಗ್ರೆಸ್‌ ಬಿಟ್ಟು ಬಿಜೆಪಿಗೆ ಬಂದ ಎಲ್ಲರಿಗೂ ಸಚಿವ ಸ್ಥಾನ ಮಾಡುವುದಾಗಿ ಭರವಸೆ ನೀಡಿದ್ದರು. ಆದರೆ ಮಹೇಶ ಕುಮಟಳ್ಳಿಗೆ ನೀಡಲಿಲ್ಲ. ಲಕ್ಷ್ಮಣ ಸವದಿ ಅವರು ಸೋತಿದ್ದರೂ ಡಿಸಿಎಂ ಆಗಿದ್ದು ಮಹೇಶ ಕುಮಟಳ್ಳಿಯಿಂದ ಎಂದು ಹೇಳಿದರು.

ಮಹೇಶಣ್ಣ ನೀವು ಸ್ಟ್ರಾಂಗ್‌ ಆಗಬೇಕು: ಕುಂಯ್ ಕುಂಯ್ ಅನ್ಕೊಂತ ಕುಂತ್ರ ಆಗಲ್ಲ!

ಕಾಂಗ್ರೆಸ್‌ ಅಧ್ಯಕ್ಷರೇ ಗೂಂಡಾ ಇದ್ದಾರೆ. ಅಂಥವರು ಕೇಂದ್ರ ಗೃಹ ಸಚಿವ ಅಮಿತ್‌ ಶಾ(Amit shah) ವಿರುದ್ಧ ದೂರು ನೀಡಿರುವ ಅವರು, ಡಿ.ಕೆ.ಶಿವಕುಮಾರ (DK Shivakumar)ಅವರ ನಡವಳಿಕೆ ನೋಡಿದರೆ ಈಗಲೇ ಜನರಿಗೆ ಭಯದ ವಾತಾವರಣ ಇದೆ. ಇಂಥವರಿಂದ ಅಮಿತ್‌ ಶಾ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಡಿ.ಕೆ.ಶಿವಕುಮಾರ ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅವರು ಜೈಲಿಗೆ ಹೋಗಿ ಬಂದಿದ್ದು, ಸ್ವಾತಂತ್ರ್ಯ ಹೋರಾಟ ಮಾಡಿಯೇ? ಅವರು ಭ್ರಷ್ಟಾಚಾರ ಮಾಡಿಯೇ ಜೈಲಿಗೆ ಹೋಗಿ ಬಂದಿದ್ದಾರೆ ಎಂದು ಹರಿಹಾಯ್ದರು.

ಸವದಿ ಡಿಸಿಎಂ ಮಾಡಿದ್ದೇ ಸಂತೋಷ:

ಯಮಕನಮರಡಿಯಲ್ಲಿರುವ ಶಾಸಕರಿಗೆ ಹಿಂದೂ ಎಂದರೆ ಅಶ್ಲೀಲ ಪದ ಎನ್ನುತ್ತಾರೆ. ಈಗ ಉದ್ದುದ್ದ ನಾಮ ಬಳಿದುಕೊಂಡು ತಿರುಗಾಡುತ್ತಿದ್ದಾರೆ. ಹಿಂದೂ ಧರ್ಮದ ಬಗ್ಗೆ ಟೀಕೆ ಮಾಡಿರುವ ವ್ಯಕ್ತಿಗೆ ಈ ಬಾರಿ ಮತದಾರರು ತಕ್ಕಪಾಠ ಕಲಿಸಲಿದ್ದಾರೆ ಎಂದ ಅವರು, ಲಿಂಗಾಯತ ನಾಯಕರು ಬಿಜೆಪಿ ಬಿಟ್ಟು ಹೋದವರು ಬಿ.ಎಲ….ಸಂತೋಷ ದಬ್ಬಾಳಿಕೆಯಿಂದ ಹೊರ ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂದು ಲಕ್ಷ್ಮಣ ಸವದಿ ದೂರಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಲಕ್ಷ್ಮಣ ಸವದಿಗೆ ಉಪಮುಖ್ಯಮಂತ್ರಿ ಮಾಡಿದ್ದೆ ಬಿ.ಎಲ….ಸಂತೋಷ ಅವರು ಎಂದರು.

ಮಹೇಶ್‌ ಕುಮಟಳ್ಳಿ, ಯತ್ನಾಳ್‌ ಬಳಿ ಟ್ರೈನಿಂಗ್‌ ತಗೋಬೇಕು: ರಮೇಶ್‌ ಜಾರಕಿಹೊಳಿ ಸಲಹೆ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)ಅವರು ಲಿಂಗಾಯತ ಮುಖ್ಯಮಂತ್ರಿಗಳು ಭ್ರಷ್ಟರು ಎಂದು ಹೇಳಿಕೆ ನೀಡಿದರೂ ಇಲ್ಲಿಯವರೆಗೂ ಕ್ಷಮೆ ಕೇಳಿಲ್ಲ. ರಾಜಕೀಯದಲ್ಲಿ ವೈಯಕ್ತಿಕವಾಗಿ ಮಾತನಾಡುವುದು ಸರಿಯಲ್ಲ ಎಂದರು. ಕಳೆದ ಎರಡು ದಿನಗಳಿಂದ ಬೆಳಗಾವಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಿದ್ದೇನೆ. ಕಳೆದ ಬಾರಿಗಿಂತ ಈ ಬಾರಿ ಗಣನೀಯವಾಗಿ ನಮ್ಮ ಅಭ್ಯರ್ಥಿಗಳು ಗೆಲವು ಸಾಧಿಸಲಿದ್ದಾರೆ ಎಂದರು. ಬಿಜೆಪಿ ಸರ್ಕಾರ ಎಲ್ಲ ಸಮುದಾಯಕ್ಕೆ ಮೀಸಲಾತಿ ನೀಡಿದೆ. ಮೊದಲು ವಿಪಕ್ಷಗಳು ಬಿಜೆಪಿ ಎಂದರೆ ದಲಿತ ವಿರೋಧಿ ಎಂದು ಬಿಂಬಿಸುತ್ತಿದ್ದವು. ಆದರೆ ಎಲ್ಲ ಸಮುದಾಯಕ್ಕೆ ಬಿಜೆಪಿ ಸರ್ಕಾರ ಮೀಸಲಾತಿ ನೀಡಿ ಎಲ್ಲ ಸಮುದಾಯದವರನ್ನು ವಿಶ್ವಾಸ ತೆಗೆದುಕೊಂಡು ಹೋಗುವ ಕೆಲಸ ಮಾಡಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ರಾಜ್ಯ ವಕ್ತಾರ ಎಂ.ಬಿ.ಜೀರಲಿ, ನಿತೀಶ್‌ ಚೌಗುಲೆ, ಎಫ್‌.ಎಸ್‌.ಸಿದ್ದನಗೌಡರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios