ಬಿಜೆಪಿದ್ದು ಜನಸಂಕಲ್ಪ ಅಲ್ಲ, ಜನಸಂಕಷ್ಟಯಾತ್ರೆ: ಖಾದರ್
ಬಿಜೆಪಿಯದ್ದು ಜನ ಸಂಕಲ್ಪ ಯಾತ್ರೆ ಅಲ್ಲ, ಜನ ಸಂಕಷ್ಟಯಾತ್ರೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ, ಶಾಸಕ ಯು.ಟಿ. ಖಾದರ್ ಟೀಕಿಸಿದ್ದಾರೆ.
ಮಂಗಳೂರು (ನ.9) : ಬಿಜೆಪಿಯದ್ದು ಜನ ಸಂಕಲ್ಪ ಯಾತ್ರೆ ಅಲ್ಲ, ಜನ ಸಂಕಷ್ಟಯಾತ್ರೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ, ಶಾಸಕ ಯು.ಟಿ. ಖಾದರ್ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರಿಗೆ ಬಿಜೆಪಿ ಸರ್ಕಾರ ಬಜೆಟ್‌ನಲ್ಲಾಗಲೀ, ಇತರ ಕಡೆಗಳಲ್ಲಾಗಲೀ ಹೇಳಿದ ಭರವಸೆಗಳಲ್ಲಿ ಬಹುತೇಕ ಈಡೇರಿಸದೆ ಮೋಸ ಮಾಡಿದೆ. ಇದೀಗ ಚುನಾವಣೆ ಸಮೀಪಿಸುತ್ತಿರುವಾಗ ಭ್ರಷ್ಟಾಚಾರವನ್ನು ಮರೆಮಾಚಲು ಈ ಯಾತ್ರೆ ನಡೆಸುತ್ತಿದೆ, ಬಿಜೆಪಿ ಅಧಿಕಾರಕ್ಕೆ ಬಂದಂದಿನಿಂದ ಜನರು ಸಂಕಷ್ಟಕ್ಕೆ ತಳ್ಳಲ್ಪಟ್ಟಿದ್ದಾರೆ ಎಂದು ಆರೋಪಿಸಿದರು.
ಮಂಗಳೂರಿನಲ್ಲಿ ನಡೆದ 3 ಕೊಲೆಗಳ ತನಿಖೆ ನಿಷ್ಪಕ್ಷಪಾತವಾಗಿ ನಡೆಯಬೇಕು: ಯು ಟಿ ಖಾದರ್
ಎಂಜಿನ್ನೇ ಇಲ್ಲದ ಸರ್ಕಾರ: ಮಾತೆತ್ತಿದರೆ ಡಬಲ್ ಎಂಜಿನ್ ಸರ್ಕಾರ ಎನ್ನುತ್ತಾರೆ. ಡಬಲ್ ಎಂಜಿನ್ ಸರ್ಕಾರಕ್ಕೆ ಒಂದು ರಸ್ತೆ ಗುಂಡಿಯನ್ನೂ ಮುಚ್ಚುವ ತಾಕತ್ತಿಲ್ಲ. ರಾಜ್ಯದೆಲ್ಲೆಡೆ ರಸ್ತೆ ಹೊಂಡಗಳೇ ತುಂಬಿ ಸಂಚಾರ ಕಷ್ಟಕರವಾಗಿದೆ. ಉಳ್ಳಾಲ ಕ್ಷೇತ್ರದ ರಸ್ತೆ ಗುಂಡಿ ಮುಚ್ಚಲು ಕನಿಷ್ಠ 50 ಲಕ್ಷ ರು. ಬೇಕಾಗಿರುವಲ್ಲಿ ಕೇವಲ 5 ಲಕ್ಷ ರು.ಗಳನ್ನು ಸರ್ಕಾರ ನೀಡಿದೆ. ಡಬಲ್ ಎಂಜಿನ್‌ನಲ್ಲಿ ಎಂಜಿನ್ನೇ ಇಲ್ಲ, ಕೇವಲ ಸೈಲೆನ್ಸರ್ ಇಟ್ಟುಕೊಂಡು ಶಬ್ದ ಮಾಡುವ ಸರ್ಕಾರ ಇದು ಎಂದು ಯು.ಟಿ. ಖಾದರ್ ವ್ಯಂಗ್ಯವಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ, ಎಂಎಲ್ಸಿ ಹರೀಶ್ ಕುಮಾರ್, ಮುಖಂಡರಾದ ಸದಾಶಿವ ಉಳ್ಳಾಲ್, ಸಂತೋಷ್ ಕುಮಾರ್, ನೀರಜ್ ಪಾಲ್, ಪ್ರಕಾಶ್ ಸಾಲಿಯಾನ್, ಶುಭೋದಯ ಆಳ್ವ, ಫಾರೂಕ್ ಇದ್ದರು.
ಗೋಮಾಂಸ ಫ್ಯಾಕ್ಟರಿ ಲೈಸನ್ಸ್ ರದ್ದು ಮಾಡ್ತೀರಾ?
ಸೆಂಟ್ರಲ್ ಮಾರುಕಟ್ಟೆಯಲ್ಲಿ ಬೀಫ್ ಸ್ಟಾಲ್ ಕುರಿತಾದ ವಿವಾದದ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಕಾನೂನು ಪ್ರಕಾರ ಸಂಬಂಧಿಸಿದ ಜನಪ್ರತಿನಿಧಿಗಳು ಈ ಬಗ್ಗೆ ತೀರ್ಮಾನ ಕೈಗೊಳ್ಳಲಿ ಎಂದರು. ವಿದೇಶಗಳಿಗೆ ಗೋಮಾಂಸ ರಫ್ತು ಮಾಡುವ 11 ಫ್ಯಾಕ್ಟರಿಗಳು ರಾಜ್ಯದಲ್ಲಿವೆ. ಇವುಗಳ ಲೈಸನ್ಸ್ ರದ್ದುಪಡಿಸುವ ತಾಕತ್ತು ಬಿಜೆಪಿ ಸರ್ಕಾರಕ್ಕೆ ಇದೆಯಾ? ಕಾಂಗ್ರೆಸ್ ಅವಧಿಯಲ್ಲಿ ಉಚಿತವಾಗಿ ಜಾನುವಾರು ನೀಡುವ ಪಶುಭಾಗ್ಯ, ಮೇವಿಗೂ ಅನುದಾನ ನೀಡುತ್ತಿದ್ದುದನ್ನು ನಿಲ್ಲಿಸಿದ್ದಾರೆ ಎಂದು ಖಾದರ್ ಕಿಡಿಕಾರಿದರು.ಬಿಜೆಪಿ ಜನ ಸಂಕಲ್ಪ ಯಾತ್ರೆ ನವೆಂಬರ್ 6ಕ್ಕೆ ಮುಂದೂಡಿಕೆ: ಶಾಸಕ ತೇಲ್ಕೂರ