ಕಳೆದ 40 ವರ್ಷಗಳಿಂದ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ಕೊಡದೆ ಮೋಸ ಮಾಡಲಾಗಿದೆ. ಬಿಜೆಪಿ ವಿಶ್ವಾಸದ್ರೋಹ ಮಾಡಿದೆ ಎಂದು ಜಗದೀಶ್ ಶೆಟ್ಟರ್‌ ಪತ್ನಿ ಶಿಲ್ಪಾ ಶೆಟ್ಟರ್  ಕಣ್ಣೀರು ಹಾಕಿದ್ದಾರೆ.

ಹುಬ್ಬಳ್ಳಿ (ಏ.17): ಬರೋಬ್ಬರಿ 40 ವರ್ಷಗಳಿಗೂ ಅಧಿಕ ಕಾಲ ಪಕ್ಷಕ್ಕಾಗಿ ದುಡಿದವರಿಗೆ ಟಿಕೆಟ್ ಕೊಡದೆ ಮೋಸ ಮಾಡಲಾಗಿದೆ. ತಮ್ಮ ಪತಿಗೆ ಬಿಜೆಪಿ ವಿಶ್ವಾಸದ್ರೋಹ ಮಾಡಿದೆ ಎಂದು ಜಗದೀಶ್‌ ಶೆಟ್ಟರ್‌ ಪತ್ನಿ ಶಿಲ್ಪಾ ಶೆಟ್ಟರ್ ಹುಬ್ಬಳ್ಳಿಯ ಮನೆಯಲ್ಲಿ ಕಣ್ಣೀರು ಹಾಕಿದ್ದಾರೆ.

ಕಳೆದೊಂದು ವಾರದಿಂದ ಬಿಜೆಪಿ ಟಿಕೆಟ್‌ಗಾಗಿ ದೆಹಲಿ, ಬೆಂಗಳೂರು ಎಲ್ಲೆಡೆ ಸುತ್ತಾಡಿದರೂ ಬಿಜೆಪಿ ಹೈಕಮಾಂಡ್‌ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರಿಗೆ ಟಿಕೆಟ್‌ ಕೊಡಲಿಲ್ಲ. ಇನ್ನು ನಿನ್ನೆ ಬೆಂಗಳೂರಿಗೆ ಹೋಗಿದ್ದ ಜಗದೀಶ್‌ ಶೆಟ್ಟರ್‌ ಅವರು ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್‌ಗೆ ಸೇರ್ಪಡೆ ಆಗಿದ್ದಾರೆ. ಆದರೆ, 40 ವರ್ಷಗಳ ಕಾಲ ಉತ್ತರ ಕರ್ನಾಟಕ ಭಾಗದಲ್ಲಿ ಪಕ್ಷವನ್ನು ಕಟ್ಟಿ ಬೆಳೆಸಿದ ತಮ್ಮ ಪತಿಗೆ ಟಿಕೆಟ್‌ ಕೊಡಲಿಲ್ಲ. ಬಿಜೆಪಿ ತಮ್ಮ ಪತಿಗೆ ವಿಶ್ವಾಸ ದ್ರೋಹವನ್ನು ಮಾಡಿದೆ ಎಂದು ಜಗದೀಶ್‌ ಶೆಟ್ಟರ್‌ ಅವರು ಹುಬ್ಬಳ್ಳಿಯ ತಮ್ಮ ನಿವಾಸಕ್ಕೆ ಬಂದ ಕೂಡಲೇ ಗಂಡನ್ನು ನೋಡಿ ಶಿಲ್ಪಾ ಶೆಟ್ಟರ್‌ ಕಣ್ಣೀರು ಹಾಕಿದರು.

ಭಾರತದಲ್ಲಿ 2047ಕ್ಕೆ ಮುಸ್ಲಿಂ ಪ್ರಧಾನಿ ಮಾಡಲು ಪಾಕಿಸ್ತಾನ ಫಂಡಿಂಗ್‌ ಮಾಡ್ತಿದೆ: ಯತ್ನಾಳ್ ಆರೋಪ

ಮಹಿಳೆಯರಿಂದ ಸಾಂತ್ವನ: ಶಿಲ್ಪಾ ಶೆಟ್ಟರ್‌ ಅವರು ಕಣ್ಣೀರು ಹಾಕುವುದನ್ನು ನೋಡಿದ ಮಹಿಳೆಯರು ತಾವು ನಿಮ್ಮ ಪರವಾಗಿ ಇದ್ದೇವೆ ಎಂದು ಬೆಂಬಲ ವ್ಯಕ್ತಪಡಿಸುತ್ತಾರ ಶಿಲ್ಪಾ ಶೆಟ್ಟರ್‌ ಅವರಿಗೆ ಸಾಂತ್ವನ ಹೇಳಿದರು. ಜಗದೀಶ್ ಶೆಟ್ಟರ್ ಮನೆಗೆ ಆಗಮಿಸುತ್ತಿದ್ದಂತೆ ಗಳಗಳನೆ ಕಣ್ಣೀರು ಹಾಕಿದ್ದನ್ನು ಕಂಡು ಅವರೂ ಕೂಡ ಭಾವುಕರಾಗಿ ಮನೆಯೊಳಗೆ ಭಾರವಾದ ಹೆಜ್ಜೆಯನ್ನಿಡುತ್ತಾ ಒಳಗೆ ಹೋದರು.

ಏ.19 ರಂದು ನಾಮಪತ್ರ ಸಲ್ಲಿಕೆ ಮಾಡ್ತೀನಿ: 
ಇನ್ನು ಮಾಧ್ಯಮಗಳೊಂದಿಗೆ ಮಾತನಾಡಿದ ಜಗದೀಶ್‌ ಶೆಟ್ಟರ್ ಅವರು, ನಾನು ಅಧಿಕಾರಕ್ಕಾಗಿ ಪಕ್ಷ ಬದಲಾವಣೆ ಮಾಡಿಲ್ಲ. ನಾನು ಕ್ಲಿಯರ್ ಆಗಿ ಹೇಳಿದ್ದೇನೆ‌. ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಆದಾಗ ನಾನು ಮಂತ್ರಿ ಆಗಲಿಲ್ಲ. 2 ವರ್ಷ ಕೇವಲ ಶಾಸಕನಾಗಿ ಕೆಲಸ ಮಾಡಿದ್ದೇನೆ. ಬೊಮ್ಮಾಯಿ ಕ್ಯಾಬಿನೆಟ್ ನಲ್ಲಿ ಮಂತ್ರಿ ಸ್ಥಾನ ಬಿಟ್ಟುಕೊಟ್ಟೆ. ನಾನು ಮನಸ್ಸು ಮಾಡಿದ್ದರೆ ಮುಖ್ಯಂತ್ರಿ ಆಗುತ್ತಿದ್ದೆನು. ನಾನು ಹೈಕಮಾಂಡ್‌ಗೆ ಇದೊಂದು ಸಲ ಅವಕಾಶ ಕೊಡಿ ಅಂತ ಕೇಳಿದ್ದೆನು. ಇದೊಂದು ಬಾರಿ ಸ್ಪರ್ಧಿಸಿದ ನಂತರ ನಾನು ರಾಜಕೀಯ ನಿವೃತ್ತಿ ತಗೋತಿನಿ ಎಂದು ಹೇಳಿದ್ದೆನು. ರಾಜ್ಯದಲ್ಲಿ ನನಗೆ ಬಿಜೆಪಿ ಟಿಕೆಟ್ ತಪ್ಪೋಕೆ ಕಾರಣ ಏನು? ಈ ಬಗ್ಗೆ ಯಾರೊಬ್ಬರೂ ಸ್ಪಷ್ಟನೆ ನೀಡಲಿಲ್ಲ. 80 ವರ್ಷ ರಾಜಕಾರಣ ಮಾಡಬಹುದು. ನನಗೇಕೆ ಟಿಕೆಟ್‌ ಕೊಡಲಿಲ್ಲ ಎಂದು ಕಿಡಿಕಾರಿದ ಅವರು, ನಾನು ಏ. 19 ರಂದು ನಾಮಪತ್ರ ಸಲ್ಲಿಕೆ ಮಾಡ್ತೀನಿ. ನನ್ನನ್ನು ಗೌರವದಿಂದ ನಡೆಸಿಕೊಳ್ಳಿ ಎಂದು ಹೇಳಿದ್ದೇನೆ ಎಂದು ಮಾಹಿತಿ ನೀಡಿದರು.

ಪ್ರಹ್ಲಾದ್ ವಿರುದ್ಧ ಶೆಟ್ಟರ್ ಸಿಟ್ಟು, ಲೋಕಸಭಾ ಚುನಾವಣೆಯಲ್ಲಿ ಜೋಷಿ ವಿರುದ್ಧ ನಿಲ್ಲುವ ಇಂಗಿತ!

ರಂಭಾಪುರಿ ಸ್ವಾಮೀಜಿ ಭೇಟಿ: ಹುಬ್ಬಳ್ಳಿ ವಿಮಾನ ನಿಲ್ದಾಣದಿಂದ ನೇರವಾಗಿ ವಿದ್ಯಾನಗರದಲ್ಲಿರೋ‌ ರಂಭಾಪುರಿ ಕಲ್ಯಾಣ ಮಂಟಪಕ್ಕೆ ಭೇಟಿ ನೀಡಿ ಪಂಚಪೀಠಾಧೀಶರಾದ ಶ್ರೀ ರಂಭಾಪುರಿ ಜಗದ್ಗುರಗಳನ್ನ ಜಗದೀಶ್‌ ಶೆಟ್ಟರ್‌ ಭೇಟಿ ಮಾಡಿ ಆಶೀರ್ವಾದ ಪಡೆದುಕೊಂ ಡರು. ಕಾಂಗ್ರೆಸ್ ಸೇರ್ಪಡೆ ಬೆನ್ನಲ್ಲೇ ಶೆಟ್ಟರ್ ಶ್ರೀಗಳನ್ನು ಭೇಟಿ ಮಾಡಿರುವುದು ಭಾರಿ ಕುತೂಹಲ ಕೆರಳಿಸಿದೆ. ಶ್ರೀಗಳ ಜೊತೆಗೆ ಶೆಟ್ಟರ್ ರಹಸ್ಯ ಮಾತುಕತೆ ಮಾಡಿದರು. ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಸಾಥ್ ನೀಡಿದರು.